* ಹಂಪಿ ಕನ್ನಡ ವಿಶ್ವವಿದ್ಯಾಲಯವು ಈ ಬಾರಿ ಮೂವರು ಗಣ್ಯರಿಗೆ ನಾಡೋಜ ಗೌರವ ಪದವಿ ಘೋಷಿಸಿದೆ. ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್, ಸಾಹಿತಿ ಕುಂ. ವೀರಭದ್ರಪ್ಪ ಮತ್ತು ಹಿಂದೂಸ್ಥಾನಿ ಸಂಗೀತ ಗಾಯಕ ಪಂಡೀತ್ ವೆಂಕಟೇಶ್ ಕುಮಾರ್ ಅವರಿಗೆ ಈ ಗೌರವ ದೊರೆತಿದೆ. * ಏಪ್ರಿಲ್ 4ರಂದು ನಡೆಯಲಿರುವ 33ನೇ ನುಡಿಹಬ್ಬದ ಸಂದರ್ಭ ಈ ಗೌರವ ಪ್ರದಾನ ಮಾಡಲಾಗುವುದು. * ಈ ಸಮಾರಂಭದಲ್ಲಿ ರಾಜ್ಯಪಾಲರು ಹಾಗೂ ಉನ್ನತ ಶಿಕ್ಷಣ ಸಚಿವರು ಉಪಸ್ಥಿತರಿರಲಿದ್ದಾರೆ. ಘಟಿಕೋತ್ಸವದ ಭಾಷಣವನ್ನು ಸಸ್ಯಶಾಸ್ತ್ರಜ್ಞ ಪ್ರೊ. ಎ. ರಾಜಾಸಾಬ್ ನೀಡಲಿದ್ದಾರೆ. * ಈ ಬಾರಿ ಹಂಪಿ ಕನ್ನಡ ವಿಶ್ವವಿದ್ಯಾಲಯ 198 ಪಿಎಚ್.ಡಿ ಪದವಿಗಳನ್ನು ಹಾಗೂ 7 ಡಿ.ಲಿಟ್ ಪದವಿಗಳನ್ನು ಪ್ರದಾನ ಮಾಡಲಿದ್ದು, ಶೋಷಿತ ಸಮುದಾಯಗಳ ಕುರಿತು ಸಂಶೋಧನೆಗಳು ನಡೆದಿವೆ. ದೇವದಾಸಿ ಪದ್ಧತಿ ಕುರಿತಂತೆ ವಿಶೇಷ ಅಧ್ಯಯನವೂ ನಡೆದಿದೆ. * ವಿಜಯನಗರ ಜಿಲ್ಲೆಯವರಾದ ಸಾಹಿತಿ ಕುಂ. ವೀರಭದ್ರಪ್ಪ ಅವರಿಗೆ ನಾಡೋಜ ಗೌರವ ದೊರೆತಿರುವುದು ಜಿಲ್ಲಾವಾಸಿಗಳಿಗೆ ಹೆಮ್ಮೆಯ ವಿಷಯವಾಗಿದೆ.