* ಬಿಹಾರದ ರಾಜಗೀರ್ನಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಫೈನಲ್ನಲ್ಲಿ ಭಾರತ ತಂಡ, ಚೀನಾವನ್ನು 1-0 ಅಂತರದಿಂದ ಸೋಲಿಸಿ ಮೂರನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ.* ಸಲೀಮಾ ಟೆಟೆ ನಾಯಕತ್ವದಲ್ಲಿ ಭಾರತ ತಂಡ ಈ ಪಂದ್ಯದಲ್ಲಿ ಚೀನಾವನ್ನು 1-0 ಗೋಲುಗಳಿಂದ ಸೋಲಿಸಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಕಿರೀಟ ತೊಟ್ಟುಕೊಂಡಿದೆ.* ಈ ಪಂದ್ಯಕ್ಕೂ ಮುನ್ನ ಭಾರತಕ್ಕಿಂತ ಹೆಚ್ಚಿನ ಶ್ರೇಯಾಂಕಿತ ತಂಡ ಚೀನಾದ ವಿರುದ್ಧ ಭಾರತ ತಂಡ ಮೇಲುಗೈ ಸಾಧಿಸಿತು. * ಫೈನಲ್ ಪಂದ್ಯಕ್ಕೂ ಮುನ್ನ ನಡೆದ ಜಪಾನ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ 3-0 ಅಂತರದಲ್ಲಿ ಗೆದ್ದು ಫೈನಲ್ ಪ್ರವೇಶಿಸಿತ್ತು. ಇದಲ್ಲದೆ, ಲೀಗ್ ಹಂತದಲ್ಲಿಯೂ ಚೀನಾವನ್ನು 3-0 ಅಂತರದಿಂದ ಸೋಲಿಸಿತ್ತು.* ಈ ಹಿಂದೆ 2016 ಮತ್ತು 2023ರಲ್ಲಿಯೂ ಭಾರತ ಗೆದ್ದಿತ್ತು. 2016ರಲ್ಲಿಯೂ ಭಾರತ ಫೈನಲ್ನಲ್ಲಿ ಚೀನಾವನ್ನು ಸೋಲಿಸಿತ್ತು. 2023ರಲ್ಲಿ ಜಪಾನ್ ತಂಡವನ್ನು ಸೋಲಿಸಿತ್ತು.* ಇದಕ್ಕೂ ಮೊದಲು ನಡೆದ ಮೂರನೇ ಸ್ಥಾನಕ್ಕಾಗಿ ನಡೆದ ಕಾದಾಟದಲ್ಲಿ ಜಪಾನ್ 4-1 ಗೋಲುಗಳಿಂದ ಮಲೇಷ್ಯಾವನ್ನು ಮಣಿಸಿ ಅಬ್ಬರಿಸಿತು. ಜಪಾನ್ ಸೆಮಿಫೈನಲ್ ಕಾದಾಟದಲ್ಲಿ ಭಾರತದ ವಿರುದ್ಧ, ಮಲೇಷ್ಯಾ, ಚೀನಾ ವಿರುದ್ಧ ಸೋಲು ಕಂಡಿತ್ತು.* ಬಿಹಾರ ಸರ್ಕಾರವು ವಿಜೇತ ಭಾರತ ಹಾಕಿ ವೈತಂಡದ ಪ್ರತಿ ಆಟಗಾರ್ತಿಗೆ ತಲಾ ₹ 10 ಲಕ್ಷ ನಗದು ಬಹುಮಾನ ನೀಡಲು ನಿರ್ಧರಿಸಿದೆ. ಮುಖ್ಯ ಕೋಚ್ ಹರೇಂದ್ರ್ ಸಿಂಗ್ ಅವರಿಗೆ 10 ಲಕ್ಷ ನಗದು ಬಹುಮಾನ ಮತ್ತು ಸಹಾಯಕ ಸಿಬ್ಬಂದಿಗೆ ತಲಾ 5 ಲಕ್ಷ ಬಹುಮಾನ ನೀಡಲು ಮುಖ್ಯಮತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ನಿರ್ಧರಿಸಿದೆ.