* ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಫೋನ್ ಉತ್ಪಾದಕ ರಾಷ್ಟ್ರವಾಗಿರುವ ಭಾರತ, 'ಮೇಕ್ ಇನ್ ಇಂಡಿಯಾ' ಮತ್ತು ಪ್ರಾಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (PLI) ಯೋಜನೆಗಳ ನೆರವಿನಿಂದ 2026ರೊಳಗೆ ಎಲೆಕ್ಟ್ರಾನಿಕ್ಸ್ ಉತ್ಪಾದನೆಯನ್ನು $300 ಬಿಲಿಯನ್ಗೆ ತಲುಪಿಸಲು ಯೋಜಿಸಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.* 2014-15ರಲ್ಲಿ ಭಾರತದಲ್ಲಿ ಮಾರಾಟವಾದ ಮೊಬೈಲ್ಗಳ ಪೈಕಿ 26% ಸ್ಥಳೀಯ ಉತ್ಪಾದನೆಯಾಗಿದ್ದವು.* 2024ರ ಡಿಸೆಂಬರ್ ಹೊತ್ತಿಗೆ ಮಾರಾಟಗೊಂಡ ಮೊಬೈಲ್ಗಳ ಪೈಕಿ ಶೇ. 99.2ರಷ್ಟು ಸ್ಥಳೀಯ ಉತ್ಪಾದನೆಯಾಗಿದ್ದವು.* 2014ರಲ್ಲಿ ಭಾರತದಲ್ಲಿ ಕೇವಲ ಎರಡು ಮೊಬೈಲ್ ಉತ್ಪಾದನಾ ಘಟಕಗಳಿದ್ದವು. ಆದರೆ, ಇಂದು 300ಕ್ಕೂ ಅಧಿಕ ಘಟಕಗಳಿವೆ.* ಮೊಬೈಲ್ ಫೋನ್ ರಫ್ತು 2014-15ರಲ್ಲಿ 1,566 ಕೋಟಿ ರೂ. ಆಗಿದ್ದರೆ, 2023-24ರಲ್ಲಿ 1.2 ಲಕ್ಷ ಕೋಟಿ ರೂ.ಗಳಿಗೆ ಏರಿಕೆ ಕಂಡಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಮಾಹಿತಿ ನೀಡಿದೆ.* ಭಾರತದ ಸೆಮಿಕಂಡಕ್ಟರ್ ವಲಯವೇಗವಾಗಿ ಬೆಳೆಯುತ್ತಿದ್ದು, 2026ರ ವೇಳೆಗೆ 300 ಬಿಲಿಯನ್ ಡಾಲರ್ ಎಲೆಕ್ಟ್ರಾನಿಕ್ಸ್ ಉತ್ಪಾದನೆ. ಸಮರ್ಥ ನೀತಿ ಮತ್ತು ಕೌಶಲ್ಯ ಕ್ರಮಗಳು ನಿರಂತರ ಬೆಳವಣಿಗೆಗೆ ಮಾರ್ಗ ಮಾಡಿಕೊಡುತ್ತವೆ.* ಜಾಗತಿಕ ಮಟ್ಟದಲ್ಲಿ ಭಾರತವು ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಉದ್ಯಮದಲ್ಲಿ ಮುಂಚೂಣಿ ಪಾತ್ರ ವಹಿಸುತ್ತಿದೆ'' ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ತಿಳಿಸಿದೆ.