* 1971ರಲ್ಲಿ ಇಂಡೋ-ಪಾಕ್ ಯುದ್ಧ ನಡೆದಾಗ ಭಾರತೀಯ ನೌಕಾಪಡೆ ಆಪರೇಶನ್ ಟ್ರೈಡೆಂಟ್ ಮೂಲಕ ಪಾಕ್ ಸೇನೆಯನ್ನು ಸೋಲಿಸುವಲ್ಲಿ ಯಶಸ್ವಿಯಾಗಿತ್ತು. ಈ ಕಾರ್ಯಾಚರಣೆ ಪ್ರಾರಂಭ ಮಾಡಿದ ದಿನದ ಸ್ಮರಣೆಗಾಗಿ ಹಾಗೂ ವಿವಿಧ ಕಾರ್ಯಾಚರಣೆಯಲ್ಲಿ ವೀರಮರಣ ಹೊಂದಿದ ಯೋಧರನ್ನು ಸ್ಮರಿಸುವ ಉದ್ದೇಶದಿಂದ ಪ್ರತಿವರ್ಷ ಡಿಸೆಂಬರ್ 4ರಂದು ಭಾರತೀಯ ನೌಕಾಪಡೆಯ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.* 2024ರ ನೌಕಾಪಡೆಯ ದಿನದ ಥೀಮ್ : ನಾವೀನ್ಯತೆ ಮತ್ತು ಸ್ವದೇಶಿಕರಣದ ಮೂಲಕ ಶಕ್ತಿ ಎಂಬುದು ಥೀಮ್ ಆಗಿದೆ. * ಭಾರತ ಮತ್ತು ಪಾಕ್ ನಡುವಿನ 1971ರ ಯುದ್ಧದ ಸಂಧರ್ಭದಲ್ಲಿ ಡಿಸೇಂಬರ್ 4 ರಂದು ಭಾರತದ ನೌಕಾಪಡೆ ಪಾಕಿಸ್ತಾನದ ಕರಾಚಿ ಬಂದರಿನ ಮೇಲೆ ದಿಟ್ಟತನದ ದಾಳಿಯನ್ನು ನಡೆಸಿತ್ತು ಈ ಕಾರ್ಯವನ್ನು ಸ್ಮರಿಸುವುದಕ್ಕಾಗಿ ಪ್ರತಿ ವರ್ಷ ಡಿಸೆಂಬರ್ 4 ರಂದು ನೌಕಾಪಡೆಯ ದಿನವನ್ನು ಆಚರಿಸಲಾಗುತ್ತದೆ. * ಡಿಸೆಂಬರ್ 3 ರಂದು ಪಾಕಿಸ್ತಾನವು ಭಾರತದ ಜಲಗಡಿಗಳಲ್ಲಿ ಆಕ್ರಮಣ ಮಾಡಲು ಆರಂಭಿಸಿತ್ತು. ಆ ಸಮಯದಲ್ಲಿ ಭಾರತೀಯ ನೌಕಾಯೋಧರು ಧೈರ್ಯದಿಂದ ಹೋರಾಡಿ ಪಾಕಿಸ್ತಾನದ ನಾಲ್ಕು ಹಡುಗುಗಳನ್ನು ಹೊಡೆದುರುಳಿಸಿದರು. ಆಪರೇಷನ್ ಟ್ರೈಡೆಂಟ್ ಹೆಸರಿನ ಕಾರ್ಯಾಚರಣೆಯಲ್ಲಿ ಪಿಎನ್ಎಸ್ ಖೈಬರ್ ಸೇರಿದಂತೆ ನಾಲ್ಕು ಪಾಕಿಸ್ತಾನಿ ಹಡುಗುಗಳನ್ನು ಧೈರ್ಯದಿಂದ ಮುಳುಗಿಸಿತ್ತು ಭಾರತೀಯ ಸೇನೆ. ಈ ಸಂದರ್ಭದಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದರು. ಆಪರೇಷನ್ ಟ್ರೈಡೆಂಟ್ಗಾಗಿ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ದೇಶ ರಕ್ಷಣೆಗಾಗಿ ಹೋರಾಡಿ ವೀರಮರಣ ಹೊಂದಿದ ವೀರಯೋಧರನ್ನು ಸ್ಮರಿಸುವ ಉದ್ದೇಶದಿಂದ ಪ್ರತಿವರ್ಷ ಡಿಸೆಂಬರ್ 4 ರಂದು ಭಾರತೀಯ ನೌಕಾಪಡೆಯ ದಿನವನ್ನು ಆಚರಿಸಲಾಗುತ್ತದೆ. ದೇಶ ರಕ್ಷಣೆಯ ವಿಚಾರದಲ್ಲಿ ನೌಕಾಪಡೆಯ ಕೊಡುಗೆಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ. * ಭಾರತೀಯ ನೌಕೆಯಲ್ಲಿ ಸುಮಾರು 64,000 ಸಿಬ್ಬಂದಿ ಸೇವೆಯಲ್ಲಿದ್ದು, 50 ಸಾವಿರ ಮೀಸಲು ಸಿಬ್ಬಂದಿ, 150 ಯುದ್ಧನೌಕೆಗಳು ಹಾಗೂ 300 ಯುದ್ಧ ವಿಮಾನಗಳಿವೆ. ಫ್ರಿಗಟ್ (ಸಣ್ಣ ಸಮರ ನೌಕೆ), ಕ್ಷಿಪಣಿ ನಾಶಕ ನೌಕೆ, ಕಾರ್ವೆಟ್ (ಕಾವಲು ನೌಕೆ), ಸಾಂಪ್ರದಾಯಿಕ ಜಲಾಂತರ್ಗಾಮಿಗಳು, ಅಣ್ವಸ್ತ್ರ ಸಜ್ಜಿತ ಜಲಾಂತರ್ಗಾಮಿಗಳು, ಗಸ್ತು ನೌಕೆಗಳು, ಮೇನ್ ಕೌಂಟರ್ಮೆಷರ್ ವೆಸಲ್ಗಳು, ಗಸ್ತು ನೌಕೆಗಳು, ತೈಲ ಮರುಪೂರಣ ನೌಕೆಗಳು, ಟಗ್ ಬೋಟ್ಗಳು, ಕರಾವಳಿ ಗಸ್ತು ಪಡೆ ನೌಕೆಗಳನ್ನು ಹೊಂದಿವೆ.* ಐಎನ್ಎಎಸ್ ವಿಕ್ರಮಾದಿತ್ಯ ಮತ್ತು ಐಎನ್ಎಸ್ ವಿರಾಟ್ (ಸಮರ ವಿಮಾನ ವಾಹಕ ನೌಕೆ), ಐಎನ್ಎಸ್ ಚಕ್ರ (ಕ್ಷಿಪಣಿ ವಾಹಕ ಜಲಾಂತರ್ಗಾಮಿ), ಐಎನ್ ಎಸ್ ಕೊಚ್ಚಿ (ನಿರ್ದೇಶಿತ ಕ್ಷಿಪಣಿ ನಾಶಕ ರಹಸ್ಯ ನೌಕೆ), ಐಎನ್ ಎಸ್ ದಿಲ್ಲಿ ಐಎನ್ಎಎಸ್ ಮೈಸೂರು, ಐಎನ್ಎಸ್ ಮುಂಬಯಿ (ನಿರ್ದೇಶಿತ ಕ್ಷಿಪಣಿ ನಾಶಕ ನೌಕೆ) ಇವು ಪ್ರಮುಖ ಯುದ್ಧ ನೌಕೆಗಳಾಗಿವೆ.* ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ಯುದ್ಧನೌಕೆ ಐಎನ್ಎಸ್ ವಿಕ್ರಾಂತ್ ಅನ್ನು ಪ್ರಧಾನಿ ಮೋದಿ ಅವರು 2022ರ ಸೆಪ್ಟೆಂಬರ್ 2ರಂದು ಉದ್ಘಾಟಿಸಿದ್ದರು.* 1674ರಲ್ಲಿ ಮರಾಠ ಸಾಮ್ರಾಜ್ಯ ಸ್ಥಾಪಿಸಿದ ಛತ್ರಪತಿ ಶಿವಾಜಿ ಮಹಾರಾಜ ಮೊತ್ತಮೊದಲ ಬಾರಿಗೆ ನೌಕಾಪಡೆಯನ್ನು ಸ್ಥಾಪಿಸಿದ್ದರು. ಹೀಗಾಗಿ ಶಿವಾಜಿಯನ್ನು ಭಾರತೀಯ ನೌಕಾಪಡೆಯ ಪಿತಾಮಹ ಎಂದು ಕರೆಯಲಾಗುತ್ತದೆ.* ಒಡಿಶಾದ ಪುರಿಯ ಬ್ಲೂ ಫ್ಲ್ಯಾಗ್ ಬೀಚನಲ್ಲಿ ನೌಕಾಪಡೆಯ ದಿನದ ಅಂಗವಾಗಿ ನೌಕಾಬಲದ ಶಕ್ತಿ ಪ್ರದರ್ಶನಗೊಳ್ಳಲಿದೆ.* ಭಾರತೀಯ ನೌಕಾಪಡೆ ದಿನದಂದು ಭಾರತದ ನೌಕಾಪಡೆಯ ಸಾಧನೆಗಳು ಮತ್ತು ಕೊಡುಗೆಗಳನ್ನು ಸ್ಮರಿಸುವ ಕೆಲಸ ಮಾಡಲಾಗುತ್ತದೆ. ಈ ದಿನದಂದು ವಿವಿಧೆಡೆ ಸರ್ಕಾರದಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.* ಭಾರತದ ನೌಕಾಪಡೆಯು 67,252 ಸಿಬ್ಬಂದಿ, 75,000 ಮೀಸಲು ಸಿಬ್ಬಂದಿ, 150 ಶಿಪ್ಗಳನ್ನೂ ಹೊಂದಿದೆ. ಜುಲೈ 2022ರ ಲೆಕ್ಕದ ಪ್ರಕಾರ ಭಾರತದ ನೌಕಾಪಡೆಯು 2 ವಿಮಾನ ವಾಹಕಗಳನ್ನು, 8 ಲ್ಯಾಂಡಿಂಗ್ ಶಿಪ್ ಟ್ಯಾಂಕ್ಗಳು, 11, ನಿರ್ದೇಶಿತ ವಿಧ್ವಂಸಕ ಕ್ಷಿಪಣಿಗಳು, 19 ಕಾರ್ವೆಟ್ಗಳು, 19 ಸಾಂಪ್ರದಾಯಿಕ ಜಲಾಂತರ್ಗಾಮಿಗಳು, 2 ಪರಮಾಣು ದಾಳಿಯ ಜಲಾಂತರ್ಗಾಮಿ, 30 ಗಸ್ತು ಹಡಗುಗಳು, 5 ಫ್ಲೀಟ್ ಟ್ಯಾಂಕರ್ಗಳು ಸೇರಿದಂತೆ ಹಲವು ಬಗೆಯ ಹಡಗುಗಳು, ಯುದ್ಧ ನೌಕೆಗಳು, ನೌಕಾ ವಾಹನಗಳನ್ನೂ ಹೊಂದಿದೆ.* ಭಾರತೀಯ ನೌಕಾಪಡೆಯು ಭಾರತೀಯ ಸಶಸ್ತ್ರಪಡೆಗಳ ನೌಕಾ ಶಾಖೆಯಾಗಿದೆ. ಭಾರತೀಯ ನೌಕಾಪಡೆಯ ಸುಪ್ರೀಂ ಕಮಾಂಡರ್ ಭಾರತದ ಅಧ್ಯಕ್ಷರಾಗಿದ್ದಾರೆ. ನೌಕಾಪಡೆಯು ನೌಕಾಪಡೆಯು ಮುಖ್ಯಸ್ಥ, ನಾಲ್ಕು ಸ್ಟಾರ್ ಅಡ್ಮಿರಲ್ ನೇತೃತ್ವದಲ್ಲಿದೆ.* ಮೊದಲು ರಾಯಲ್ ಇಂಡಿಯನ್ ನೇವಿ ಎಂದು ಕರೆಯಲಾಗುತ್ತಿತ್ತು. ಈಸ್ಟ್ ಇಂಡಿಯಾ ಕಂಪನಿಯು 1612ರಲ್ಲಿ ಭಾರತದ ಸಶಸ್ತ್ರ ಪಡೆಗಳ ಸರ್ವೋಚ್ಚ ನೌಕಾ ಶಾಖೆಯನ್ನು ಸ್ಥಾಪಿಸಿತು. ಸ್ವಾತಂತ್ರ್ಯ ನಂತರ 1950ರ ಜನವರಿ 26 ರಂದು ಭಾರತೀಯ ನೌಕಾಪಡೆ ಎಂದು ಮರುನಾಮಕರಣ ಮಾಡಲಾಯಿತು.