* ಪ್ರತಿವರ್ಷ ಡಿಸೆಂಬರ್ 24 ರಂದು ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ. ಗ್ರಾಹಕ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ.* ರಾಷ್ಟೀಯ ಗ್ರಾಹಕರ ಹಕ್ಕುಗಳ ದಿನದ 2024 ರ ಥೀಮ್ "ವರ್ಚುವಲ್ ಹಿಯರಿಂಗ್ಸ್ ಮತ್ತು ಗ್ರಾಹಕ ನ್ಯಾಯಕ್ಕೆ ಡಿಜಿಟಲ್ ಪ್ರವೇಶ", ಎಂಬುದು ಥೀಮ್ ಆಗಿದೆ.* ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವುದರಿಂದ ಮಾರುಕಟ್ಟೆ ಅಥವಾ ಖರೀದಿ ಸ್ಥಳದಲ್ಲಿ ಉಂಟಾಗುವ ಅನ್ಯಾಯಗಳ ಹೋರಾಟ ನಡೆಸಬಹುದು ಆದರಿಂದ ಗ್ರಹರು ತಮ್ಮ ಹಕ್ಕುಗಳ ಬಗ್ಗೆ ತಿಳುವಳಿಕೆ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.* ಗ್ರಾಹಕ ಸಂರಕ್ಷಣಾ ಕಾಯ್ದೆಯನ್ನು 1986 ರಲ್ಲಿ ಅನುಮೋದಿಸಲಾಯಿತು ಮತ್ತು ಡಿಸೆಂಬರ್ 24, 1986 ರಂದು ರಾಷ್ಟ್ರಪತಿಗಳ ಅನುಮೋದನೆಯನ್ನು ಪಡೆಯಿತು. ಉತ್ಪಾದಕರು ಅಥವಾ ಮಾರಾಟಗಾರರಿಂದಾಗುವ ಮೋಸ, ವಂಚನೆ, ಶೋಷಣೆಗಳಿಂದ ಗ್ರಾಹಕರಿಗೆ ರಕ್ಷಣೆ ಒದಗಿಸುವ ಉದ್ದೇಶದಿಂದ ಈ ಕಾಯಿದೆ ಜಾರಿಗೆ ಬಂದಿದೆ. * ಕಾಯಿದೆಯ ಪ್ರಮುಖ ಅಂಶಗಳು :- ಇದು ಯಾವುದೇ ಬಗೆಯ ಗ್ರಾಹಕ ದೂರುಗಳ ತ್ವರಿತ ವಿಚಾರಣೆ ಮತ್ತು ವ್ಯಾಜ್ಯಗಳ ತ್ವರಿತ ಹಾಗೂ ಮಿತವೆಚ್ಚದಲ್ಲಿ ಅವುಗಳ ಇತ್ಯರ್ಥಕ್ಕೆ ಅವಕಾಶಮಾಡಿಕೊಡುತ್ತದೆ. ಜತೆಗೆ ಗ್ರಾಹಕರಿಗೆ ನಿರ್ದಿಷ್ಠ ಪರಿಹಾರಗಳನ್ನು ಕೂಡಾ ದೊರಕಿಸಿಕೊಡಲು ಸಹಕಾರಿಯಾಗಿದೆ.- ಈ ಕಾಯ್ದೆಯು ಗ್ರಾಹಕರ ಹಕ್ಕುಗಳು ಎಂದು ವಿಶ್ವಸಂಸ್ಥೆಯಿಂದ ಪರಿಗಣಿಸಲ್ಪಡುವ ಎಂಟು ಹಕ್ಕುಗಳ ಪೈಕಿ ಆರನ್ನು ಗುರುತಿಸಿದೆ.* ಗ್ರಾಹಕರ ಹಿತಾರಕ್ಷ ಣಾ ಕಾಯಿದೆ, 1986 ರ ಪ್ರಕಾರ ಶೋಷಿತ ಗ್ರಾಹಕನಿಗೆ ಕೆಳಕಂಡ ಪರಿಹಾರಗಳು ದೊರೆಯುತ್ತವೆ. ಸರಕಿನಲ್ಲಿರುವ ನ್ಯೂನತೆಯನ್ನು ನಿವಾರಿಸಿಕೊಳ್ಳುವ, ಬದಲಿ ಸರಕನ್ನು ನೀಡುವಂತೆ, ಸರಕಿನ ಮೌಲ್ಯವನ್ನು ವಾಪಸ್ಸು ಪಡೆಯುವ, ನಷ್ಟ ಪರಿಹಾರವನ್ನು ಪಡೆಯುವ ಅಥವಾ ಅನುಚಿತ ವ್ಯಾಪಾರಿ ಪದ್ದತಿಗಳನ್ನು ನಿಲ್ಲಿಸುವ, ಹಾನಿಕಾರಕ ಸರಕುಗಳನ್ನು ಮಾರಾಟ ಮಾಡುದಂತೆ ನಿರ್ಬಂಧ ಹೇರುವ,ಹಾನಿಕಾರಕ ಸರಕುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಆದೇಶ ನೀಡುತ್ತದೆ.- ಗ್ರಾಹಕರಿಗಿರುವ ಹಕ್ಕುಗಳು : ರಕ್ಷಣೆ ಪಡೆಯುವ ಹಕ್ಕು, ಮಾಹಿತಿ ಪಡೆಯುವ ಹಕ್ಕು, ಆಯ್ಕೆಯ ಹಕ್ಕು, ವಿಚಾರಣೆಯ ಹಕ್ಕು, ವ್ಯಾಜ್ಯ ಪರಿಹಾರದ ಹಕ್ಕು.-ಗ್ರಾಹಕರಿಗೆ ದೊರೆಯುವ ಪರಿಹಾರಗಳು: ಗ್ರಾಹಕರ ಸಂರಕ್ಷಣಾ ಕಾಯಿದೆ -1986ರ ಪ್ರಕಾರ, ಮೋಸ ಹೋದ ಗ್ರಾಹಕನು, ಬದಲಿ ಸರಕು, ಸರಕಿನ ಮೌಲ್ಯ, ನಷ್ಟ ಪರಿಹಾರಗಳನ್ನು ಪಡೆಯಬಹುದು. ಒಂದು ವೇಳೆ ವ್ಯಾಪಾರವೇ ನಕಲಿಯಾಗಿದ್ದರೆ, ಗ್ರಾಹಕರನ್ನು ವಂಚಿಸುತ್ತಿದ್ದರೆ ಅಂಥ ಅಂಗಡಿಗಳನ್ನು ಶಾಶ್ವತವಾಗಿ ಮುಚ್ಚಿಸಬಹುದು.* 2019ರಲ್ಲಿ ಕೇಂದ್ರ ಗ್ರಾಹಕ ರಕ್ಷಣೆ ಪ್ರಾಧಿಕಾರವನ್ನು ಸ್ಥಾಪಿಸಲಾಯಿತು,* ಗ್ರಾಹಕರ ಹಿತ ರಕ್ಷಣೆಗೆ ಮೂರು ಹಂತದ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ- ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ಜಿಲ್ಲಾಮಟ್ಟ.- ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ, ರಾಜ್ಯ ಆಯೋಗ.- ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ, ರಾಷ್ಟ್ರೀಯ ಆಯೋಗ. * ಗ್ರಾಹಕರ ದೂರ ಪ್ರಕ್ರಿಯೆಯನ್ನು ಸರಳಗೊಳಿಸಲು ಕೇಂದ್ರ ಸರ್ಕಾರವು eDaakhil ಪೋರ್ಟಲ್ ಅನ್ನು ಆರಂಭಿಸಿದೆ.