* ಪ್ರತಿ ವರ್ಷ ಡಿಸೆಂಬರ್ 23 ರಂದು ರೈತರ ದಿನವನ್ನು ಆಚರಿಸಲಾಗುತ್ತದೆ, ಭಾರತದ 5 ನೇ ಪ್ರಧಾನ ಮಂತ್ರಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನದಂದು, ಅವರು ರೈತ ನಾಯಕರೂ ಆಗಿದ್ದಾರೆ, ಅವರು ಭಾರತೀಯ ರೈತರ ಜೀವನವನ್ನು ಸುಧಾರಿಸಲು ಅನೇಕ ನೀತಿಗಳನ್ನು ಪರಿಚಯಿಸಿದರು.* ರಾಷ್ಟ್ರೀಯ ರೈತರ ದಿನದ 2024 ರ ವಿಷಯ - "ಸುಸ್ಥಿರ ಕೃಷಿಗಾಗಿ ರೈತರನ್ನು ಸಬಲೀಕರಣಗೊಳಿಸುವುದು" (Empowering Farmers for Sustainable Agriculture) ಥೀಮ್ ಆಗಿದೆ.* ಭಾರತದಲ್ಲಿ ರಾಷ್ಟ್ರೀಯ ರೈತರ ದಿನವನ್ನು ಹಿಂದಿಯಲ್ಲಿ ಕಿಸಾನ್ ದಿವಸ್ ಎಂದೂ ಕರೆಯಲಾಗುತ್ತದೆ. * ಭಾರತದಲ್ಲಿ 1979 ಜುಲೈ 28 ರಿಂದ 1980 ರ ಜನೆವರಿ 14 ರವರೆಗೆ 5 ನೇ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನಾಚರಣೆ ( 1902 ಡಿಸೆಂಬರ್ 23 ) ಯ ಅಂಗವಾಗಿ ಪ್ರತಿ ವರ್ಷ ಡಿಸೆಂಬರ್ 23ರಂದು ರಾಷ್ಟ್ರೀಯ ರೈತ ದಿನ " ವನ್ನು ಆಚರಿಸಲಾಗುತ್ತದೆ.* 2001 ರಿಂದ ಭಾರತ ಸರ್ಕಾರವು ಪ್ರತಿವರ್ಷ "ಕಿಸಾನ್ ದಿನ / ರೈತರ ದಿನ " ವನ್ನು ಆಚರಿಸಿಕೊಂಡು ಬರುತ್ತಿದೆ.* ಕೃಷಿ ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೇ 2 ಸ್ಥಾನದಲ್ಲಿದೆ. 2020-2021ರ ಭಾರತೀಯ ಆರ್ಥಿಕ ಸಮೀಕ್ಷೆ ಪ್ರಕಾರ, ದೇಶದ ಉದ್ಯೋಗಿಗಳಲ್ಲಿ ಶೇ.50ರಷ್ಟು ಮಂದಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. * ದೇಶದ ಜಿಡಿಪಿಗೆ ಕೃಷಿ ಕ್ಷೇತ್ರದ ಕೊಡುಗೆ ಶೇ.20.2ರಷ್ಟು ಇದೆ. 2016ರಲ್ಲಿ ಇದು ಶೇ.17.5ರಷ್ಟಿತ್ತು. ವಿಶ್ವದಾದ್ಯಂತ ಏಳನೇ ಅತಿದೊಡ್ಡ ಕೃಷಿ ಉತ್ಪನ್ನಗಳ ರಫ್ತುದಾರ ದೇಶ ಭಾರತವಾಗಿದ್ದು, 2020ರ ಜೂನ್ ವೇಳೆಗೆ ಭಾರತ 3.50 ಶತಕೋಟಿ ಡಾಲರ್ ಮೌಲ್ಯದ ಕೃಷಿ ಉತ್ಪನ್ನವನ್ನು ರಫ್ತು ಮಾಡುತ್ತಿದೆ. 2013ರಲ್ಲಿ ರಫ್ತು ಪ್ರಮಾಣ 38 ಶತಕೋಟಿ ಡಾಲರ್ ರಫ್ತು ಮಾಡಿತ್ತು. ಅಭಿವೃದ್ಧಿಶೀಲ ಮತ್ತು ಕಡಿಮೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಭಾರತ ಹೆಚ್ಚು ರಫ್ತು ಮಾಡುತ್ತದೆ. * ಜಪಾನ್, ಸಾರ್ಕ್ ದೇಶಗಳು, ಆಗ್ನಿಯ ಏಷ್ಯಾ, ಯೂರೋಪಿಯನ್ ಒಕ್ಕೂಟ ದೇಶಗಳನ್ನು ಒಳಗೊಂಡಂತೆ 120ಕ್ಕೂ ಅಧಿಕ ದೇಶಗಳಿಗೆ ಕೃಷಿ ಮತ್ತು ತೋಟಗಾರಿಕೆಯ ಸಂಸ್ಕರಿಸಿದ ಆಹಾರವನ್ನು ಭಾರತ ರಫ್ತು ಮಾಡುತ್ತಿದೆ.