* ಪ್ರತಿ ವರ್ಷ ಡಿಸೆಂಬರ್ 20ರಂದು ವಿವಿಧತೆಯಲ್ಲಿ ಏಕತೆ ಗೌರವಿಸಲು ಅಂತಾರಾಷ್ಟ್ರೀಯ ಮಾನವ ಐಕ್ಯತಾ ದಿನವನ್ನು ಆಚರಿಸಲಾಗುತ್ತದೆ. * ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಪ್ರತಿ ವರ್ಷ ಡಿಸೆಂಬರ್ 20 ಅನ್ನು ಅಂತಾರಾಷ್ಟ್ರೀಯ ಮಾನವ ಐಕ್ಯತಾ ದಿನವೆಂದು ಘೋಷಿಸಿತು. ಡಿಸೆಂಬರ್ 22, 2005 ರಂದು ಈ ನಿರ್ಣಯವನ್ನು ಅಂಗೀಕರಿಸಿತು, ವಿಶ್ವ ಸಾಲಿಡಾರಿಟಿ ಫಂಡ್ ಅನ್ನು ಜನರಲ್ ಅಸೆಂಬ್ಲಿಯು ಡಿಸೆಂಬರ್ 20, 2002 ರಂದು ಸ್ಥಾಪಿಸಲಾಯಿತು.* ವಿವಿಧತೆಯಲ್ಲಿ ಏಕತೆಯನ್ನು ಆಚರಿಸುವ ದಿನಇದಾಗಿದ್ದು , ಅಂತಾರಾಷ್ಟ್ರೀಯ ಒಪ್ಪಂದಗಳಿಗೆ ತಮ್ಮ ಬದ್ಧತೆಗಳನ್ನು ಗೌರವಿಸಲು ಸರಕಾರಗಳನ್ನು ನೆನಪಿಸುವ ದಿನ. ಒಗ್ಗಟ್ಟಿನ ಮಹತ್ವದ ಬಗ್ಗೆ ಸಾರ್ವಜನಿಕ ಅರಿವು ಮೂಡಿಸುವ ದಿವಸ. * ಬಡತನ ನಿರ್ಮೂಲನೆ ಸೇರಿದಂತೆ ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಗಾಗಿ ಒಗ್ಗಟ್ಟನ್ನು ಉತ್ತೇಜಿಸುವ ಮಾರ್ಗಗಳ ಕುರಿತು ಚರ್ಚೆಯನ್ನು ಉತ್ತೇಜಿಸುವ ದಿನವಾಗಿದೆ. ಬಡತನ ನಿರ್ಮೂಲನೆಗಾಗಿ ಹೊಸ ಉಪಕ್ರಮಗಳನ್ನು ಉತ್ತೇಜಿಸುವ ದಿನವಾಗಿದೆ.* 2005 ರಲ್ಲಿ ಆರಂಭವಾದ ಈ ದಿನಾಚರಣೆಯು ಮಾನವರ ಒಗ್ಗಟ್ಟು ಎಂಬ ಶಕ್ತಿಯ ಮೂಲಕ ಭೂ ಸುಧಾರಣೆ, ಆರೋಗ್ಯ ಸೌಲಭ್ಯಗಳು, ಪ್ರಕೃತಿ ವಿಕೋಪಗಳಲ್ಲಿ ನಲುಗಿದವರಿಗೆ ಸಹಾಯ ಹಸ್ತ ಚಾಚುವುದು, ಸಾರ್ವತ್ರಿಕ ಶಿಕ್ಷಣವನ್ನು ಪ್ರೋತ್ಸಾಹಿಸುವುದು, ಬಡತ, ಭ್ರಷ್ಟಾಚಾರ ಮತ್ತು ಭಯೋತ್ಪಾದನೆಯ ವಿರುದ್ಧ ಹೋರಾಡುವ ಉದ್ದೇಶಗಳನ್ನು ಹೊಂದಿವೆ.