* ಪ್ರತಿ ವರ್ಷ ಡಿಸೆಂಬರ್ 10 ರಂದು ವಿಶ್ವದಾದ್ಯಂತ ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ. ಮೂಲಭೂತ ಹಕ್ಕುಗಳ ರಕ್ಷಣೆ ಮತ್ತು ಎಲ್ಲಾ ವ್ಯಕ್ತಿಗಳ ಸ್ವಾತಂತ್ರ್ಯವನ್ನು ಉತ್ತೇಜಿಸಲು ಈ ದಿನವನ್ನು ಸಮರ್ಪಿಸಲಾಗಿದೆ. * ವಿಶ್ವ ಮಾನವ ಹಕ್ಕುಗಳ ದಿನದ 2024ರಥೀಮ್ 'ನಮ್ಮ ಹಕ್ಕುಗಳು, ನಮ್ಮ ಭವಿಷ್ಯ, ಈ ಕ್ಷಣವೇ' ಎಂಬುವುದಾಗಿದೆ.* ಪ್ರಜಾಪ್ರಭುತ್ವವು ಮಾನವನ ಹಿತರಕ್ಷಣೆಗಾಗಿ ಮಾನವ ಹಕ್ಕುಗಳನ್ನು ರಚಿಸಲಾದ ದಿನ. ಎರಡನೇ ಮಹಾ ಯುದ್ಧದ ಸಮಯದಲ್ಲಿ ಉಂಟಾದ ಸಾವು-ನೋವುಗಳ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ 1948ರ ಡಿಸೆಂಬರ್ 10ರಂದು ಪ್ಯಾರಿಸ್ನ ಪಲಾಯಿಸ್ ಡಿ ಚಾಲಿಯಟ್ನಲ್ಲಿ ಮಾನವ ಹಕ್ಕುಗಳನ್ನು ಸ್ಥಾಪಿಸಲು ಮುಂದಾಗಿತ್ತು. ಬಳಿಕ 1950ರ ಡಿಸೆಂಬರ್ 4ರಂದು ನಡೆದ ವಿಶ್ವಸಂಸ್ಥೆಯ 317ನೇ ಸಾಮಾನ್ಯಸಭೆಯಲ್ಲಿ ಮಾನವ ಹಕ್ಕು ದಿನವನ್ನು ಆಚರಿಸಲು ನಿರ್ಣಯ ಕೈಗೊಳ್ಳಲಾಯಿತು. ಅಂದಿನಿಂದ ಪ್ರತಿವರ್ಷ ಡಿಸೆಂಬರ್ 10ರಂದು ಮಾನವ ಹಕ್ಕುಗಳ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.* ಮಾನವನ ಹಕ್ಕುಗಳು : ಜೀವಿಸುವ ಹಕ್ಕು, ಸಮಾನತೆಯ ಹಕ್ಕು, ಮಾನವ ಘನತೆಯ ಹಕ್ಕು, ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ಧದ ಹಕ್ಕು, ಗುಲಾಮಗಿರಿಯ ವಿರುದ್ಧದ ಹಕ್ಕು, ಏಕಾಂತ ಗೌಪ್ಯತೆಯ ಹಕ್ಕು, ಪ್ರಾಮಾಣಿಕ ವಿಚಾರಣೆ ಹಕ್ಕು, ಧರ್ಮ ಸ್ವಾತಂತ್ರ್ಯದ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯ, ಸಂಚರಿಸುವ ಮತ್ತು ವಾಸಿಸುವ, ಶಿಕ್ಷಣ, ಪ್ರಾಣ ರಕ್ಷಣೆ, ನ್ಯಾಯ ದೊರಕಿಸಿಕಕೊಳ್ಳುವ ಹಕ್ಕು, ಸಾರ್ವಜನಿಕ ಕ್ಷೇತ್ರಗಳಲ್ಲಿ ಒಳಗಾದವರಿಗೆ ಪರಿಹಾರ ಧನದ ಹಕ್ಕು ಹಾಗೂ ಯೋಗ್ಯ ಪರಿಸರದ ಹಕ್ಕು ಇನ್ನೂ ಮುಂತಾದವು.* ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು ರಚಿಸುವಲ್ಲಿ ಪ್ರಮುಖ ಪಾತ್ರಕ್ಕಾಗಿ ಎಲೀನರ್ ರೂಸ್ವೆಲ್ಟ್ ಅವರನ್ನು ಸಾಮಾನ್ಯವಾಗಿ "ಮಾನವ ಹಕ್ಕುಗಳ ತಾಯಿ(ಮಾನವ ಹಕ್ಕುಗಳ ದಿನದ ಪಿತಾಮಹ)" ಎಂದು ಕರೆಯಲಾಗುತ್ತದೆ.* 2024 ನೇ ವರ್ಷವನ್ನು ವಿಶ್ವಸಂಸ್ಥೆಯು "ಶಾಂತಿಯ ಖಾತರಿಯಾಗಿ ಅಂತರರಾಷ್ಟ್ರೀಯ ಸಂವಾದದ ವರ್ಷ" ಎಂದು ಘೋಷಿಸಿದೆ, ಜಾಗತಿಕ ಸಾಮರಸ್ಯವನ್ನು ಕಾಪಾಡುವಲ್ಲಿ ಸಂಭಾಷಣೆಯ ಮಹತ್ವವನ್ನು ಒತ್ತಿಹೇಳಿದೆ.