* ವಿಶ್ವ ಏಡ್ಸ್ ದಿನವನ್ನು ಪ್ರತಿ ವರ್ಷ ಡಿಸೆಂಬರ್ 1ರಂದು ಆಚರಿಸಲಾಗುತ್ತದೆ. ಇದು ಜಾಗತಿಕ ಆರೋಗ್ಯ ಜಾಗೃತಿ ದಿನವಾಗಿದ್ದು, ಎಚ್ಐವಿ/ಏಡ್ಸ್ ಕುರಿತು ಜಾಗೃತಿ ಮೂಡಿಸಲು, ಕಾಯಿಲೆಯಿಂದ ಸಾವನ್ನಪ್ಪಿದವರನ್ನು ಸ್ಮರಿಸಲು ಮತ್ತು ಎಚ್ಐವಿಯೊಂದಿಗೆ ವಾಸಿಸುವ ಜನರನ್ನು ಬೆಂಬಲಿಸಲು ಮೀಸಲಾಗಿದೆ.* ವಿಶ್ವ ಏಡ್ಸ್ ದಿನದ 2024 ರ ಥೀಮ್ "ಹಕ್ಕುಗಳ ಮಾರ್ಗವನ್ನು ತೆಗೆದುಕೊಳ್ಳಿ: ನನ್ನ ಆರೋಗ್ಯ, ನನ್ನ ಹಕ್ಕು! [“Take the Rights Path: My Health, My Right!”] ಎಂಬುದು ಥೀಮ್ ಆಗಿದೆ. * ಏಡ್ಸ್ ಬಗ್ಗೆ ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 180 ರಾಷ್ಟ್ರಗಳು ಈ ದಿನ ಆಚರಿಸುವ ಬದ್ಧತೆ ತೋರುತ್ತಿವೆ. * ವಿಶ್ವ ಆರೋಗ್ಯ ಸಂಸ್ಥೆ ಮೊದಲ ಬಾರಿಗೆ 1988ರ ಡಿಸೆಂಬರ್ 1ರಲ್ಲಿ ವಿಶ್ವ ಏಡ್ಸ್ ದಿನ ಆಚರಿಸಲು ನಿರ್ಧರಿಸಿತು. 1981ರಲ್ಲಿ ಮೊದಲ ಬಾರಿಗೆ ಹೆಚ್ಐವಿ/ಏಡ್ಸ್ ಸೋಂಕನ್ನು ಗುರುತಿಸಲಾಯಿತು. ಇಲ್ಲಿಯವರೆಗೆ 35 ಮಿಲಿಯನ್ ಗಿಂತಲೂ ಹೆಚ್ಚು ಜನರು ಎಚ್ ಐವಿ ಅಥವಾ ಏಡ್ಸ್ ಸಂಬಂಧಿ ತ ಕಾಯಿಲೆಗಳಿಂದ ಮೃತಪಟ್ಟಿದ್ದಾರೆ. ಏಡ್ಸ್ಗೆ ಕಾರಣವಾದ ವೈರಸ್ ಎಚ್ಐವಿ ಇದನ್ನು ಮೊಟ್ಟಮೊದಲ ಬಾರಿಗೆ 1983ರಲ್ಲಿ ಫ್ರೆಂಚ್ ವಿಜ್ಞಾನಿಗಳು ಪತ್ತೆ ಹಚ್ಚಿದರು.* 1984ರಲ್ಲಿ ಅಮೆರಿಕದ ವಿಜ್ಞಾನಿಗಳು ಏಡ್ಸ್ಗೆ ಕಾರಣವಾಗಿರುವ ವೈರಸ್ ಬಗ್ಗೆವಿಷ ಸವಿವರವಾದ ಮಾಹಿತಿ ನೀಡಿದರು. ಏಡ್ಸ್ ನ್ನು ಭಾರತದಲ್ಲಿ 1986ರಲ್ಲಿ ಚೆನ್ನೈನಲ್ಲಿ ಮೊದಲು ಪತ್ತೆ ಮಾಡಲಾಯಿತು.* ಏಡ್ಸ್ ಹೇಗೆ ಹರಡುತ್ತದೆ:ಸೋಂಕಿತರ ಜೊತೆಗೆ ಅಸುರಕ್ಷಿತ ಲೈಂಗಿಕ ಕ್ರಿಯೆ, ಸೋಂಕಿತರಿಗೆ ಬಳಸಿದ ಇಂಜೆಕ್ಷನ್ ಅಥವಾ ಆಪರೇಶ ಪರಿಕರಗಳ ಮರು ಬಳಕೆ, ಎಚ್ ಐವಿ ಸೋಂಕಿತ ಗರ್ಭಿಣಿ- ಮಗುವಿಗೆ ಮತ್ತು ಪ್ರಸವದ ನಂತರ ಸ್ತನಪಾನದ ಮೂಲಕ ಮಗುವಿಗೆ ಎಚ್ಐವಿ ಹರಡಬಹುದು. ರಕ್ತದಾನ ದೇಹದ ಇತರ ಭಾಗಗಳನ್ನು ದಾನ ಮಾಡುವವರು ಎಚ್ ಸೋಂಕಿತರಾಗಿದ್ದರೆ, ಅದನ್ನು ಪಡೆಯುವ ವ್ಯಕ್ತಿಗಳಿಗೆ ಹರ ಸಾಧ್ಯತೆ ಇದೆ. ಸೋಂಕಿತ ವ್ಯಕ್ತಿಯ ವೀರ್ಯಾಣು, ಗುಪ ಮತ್ತು ಎದೆ ಹಾಲಿನಲ್ಲಿ ಎಚ್ಐವಿ ರೋಗಾಣು ಇರುತ್ತದೆ. ಇವುಗಳ ಮೂಲಕ ಹೆಚ್ಐವಿ ಹರಡುವ ಸಾಧ್ಯತೆ ಇದೆ.* 2023 ರಲ್ಲಿ ಭಾರತದಲ್ಲಿ 66,400 ಹೊಸ ಪ್ರಕರಣಗಳನ್ನು ಗುರುತಿಸಲಾಗಿದೆ. ಜಾಗತಿಕವಾಗಿ 2023 ರಲ್ಲಿ 13 ಲಕ್ಷ ಜನರು ಹೊಸದಾಗಿ HIV ಸೋಂಕಿಗೆ ಒಳಗಾಗಿದ್ದಾರೆ. 21 ಲಕ್ಷ ಜನರು ಹೊಸದಾಗಿ ಸೋಂಕಿಗೆ ಒಳಗಾದ 2010 ಕ್ಕಿಂತ ಇದು 39% ಕಡಿಮೆಯಾಗಿದೆ.