* ಕನ್ನಡ ಜನಶಕ್ತಿ ಕೇಂದ್ರ ನೀಡುವ ವರನಟ ಡಾ. ರಾಜಕುಮಾರ್ ಪ್ರಶಸ್ತಿಗೆ ಸಂಸ್ಕೃತಿ ಚಿಂತಕರಾದ ಡಾ. ಬರಗೂರು ರಾಮಚಂದ್ರಪ್ಪ ಆಯ್ಕೆಯಾಗಿರುತ್ತಾರೆ.* ಪ್ರಶಸ್ತಿಯು ರೂ. 25000-ನಗದು ಹಾಗೂ ಕಂಚಿನ ಫಲಕವನ್ನು ಒಳಗೊಂಡಿರುತ್ತದೆ. ಏಪ್ರಿಲ್ 18ರಂದು ಸಂಜೆ 5.00 ಗಂಟೆಗೆ ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಖ್ಯಾತ ವಿದ್ವಾಂಸರಾದ ಡಾ. ಹೆಚ್.ಎಸ್.ರಾಘವೇಂದ್ರರಾವ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.* ಪ್ರಸಿದ್ದ ಚಲನಚಿತ್ರ ನಿರ್ಮಾಪಕರು, ನಿರ್ದೇಶಕರು ಆದ ಶ್ರೀ ಎಸ್.ವಿ.ರಾಜೇಂದ್ರಸಿಂಗ್ಬಾಬು ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುತ್ತಾರೆ. ಹೋಟೆಲ್ ನವಯುಗ ಮಾಲೀಕರಾದ ಕೆ. ಮೋಹನರಾವ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ.* ಬರಗೂರು ರಾಮಚಂದ್ರಪ್ಪನವರು, 1946 ಅಕ್ಟೋಬರ್ 18ರಂದು ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ಬರಗೂರು ಗ್ರಾಮದಲ್ಲಿ ಜನಿಸಿದರು. * ಅವರು ಕನ್ನಡ ಅಧ್ಯಾಪಕ, ಚಿಂತಕ, ಬಂಡಾಯ ಸಾಹಿತ್ಯ ಚಳುವಳಿಯ ನಾಯಕರಲ್ಲೊಬ್ಬರು. ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ಜೊತೆಗೆ ಹಲವು ಸಿನಿಮಾಗಳನ್ನೂ ನಿರ್ದೇಶಿಸಿದ್ದಾರೆ.* ಡಾ. ಬರಗೂರು ರಾಮಚಂದ್ರಪ್ಪ ಅವರು ಭೂಮಿಕೆಯಲ್ಲಿ ಕನ್ನಡಕ್ಕೆ ಅಪಾರ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಿ, ಅವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಅಧ್ಯಕ್ಷ ಸಿಕೆ ರಾಮೇಗೌಡ ತಿಳಿಸಿದ್ದಾರೆ.