* ಬಾಹ್ಯಾಕಾಶ ನಿಲ್ದಾಣದ ಕುರಿತ ಕಾದಂಬರಿ `ಆರ್ಬಿಟಲ್'ಗಾಗಿ ಬ್ರಿಟನ್ ನ ಸಾಹಿತಿ ಸಮಂತಾ ಹಾರ್ವೆ ಅವರು 2024ರ ‘ಬೂಕರ್ ಸಾಹಿತ್ಯ ಪ್ರಶಸ್ತಿ’ ಗೆ ಭಾಜನರಾಗಿದ್ದಾರೆ. ಲಂಡನ್ನ ಓಲ್ಡ್ ಬಿಲ್ಲಿಂಗ್ಸ್ಗೇಟ್ನಲ್ಲಿ ನಡೆದ ಸಮಾರಂಭದಲ್ಲಿ ವಿಜೇತರನ್ನು ಘೋಷಿಸಲಾಯಿತು. ಆರ್ಬಿಟಲ್ ಈ ವರ್ಷ ಬ್ರಿಟನ್ ನಲ್ಲಿ ಹೆಚ್ಚು ಮಾರಾಟವಾದ ಕೃತಿಯಾಗಿದೆ. * 2024ರ ಬೂಕರ್ ಸಾಹಿತ್ಯ ಪ್ರಶಸ್ತಿಯು 53.75 ಲಕ್ಷ (50 ಸಾವಿರ ಪೌಂಡ) ನಗದು ಬಹುಮಾನವನ್ನು ಒಳಗೊಂಡಿದೆ. ಸಮಂತಾ 2019ರ ಬಳಿಕ ಬೂಕರ್ ಪ್ರಶಸ್ತಿ ಗೆದ್ದ ಪ್ರಥಮ ಮಹಿಳೆಯಾಗಿದ್ದಾರೆ.* ಲಾಕ್ಡೌನ್ ಸಮಯದಲ್ಲಿ ಸಮಂತಾ ಈ ಕಾದಂಬರಿಯನ್ನು ಬರೆಯಲು ಪ್ರಾರಂಭಿಸಿದ್ದಾರೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಆರು ಪ್ರಯಾಣಿಕರು ಭೂಮಿಯ ಸುತ್ತ ಸುತ್ತುವ ಕಥೆ ಕಾದಂಬರಿಯ ಹಿನ್ನೆಲೆಯಾಗಿದೆ. * ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿದ್ದ ಆರು ಗಗನಯಾತ್ರಿಗಳ ಒಂದು ದಿನದ ಬದುಕನ್ನು ಈ ಕೃತಿ ಕಟ್ಟಿಕೊಟ್ಟಿದೆ. ಒಂದು ದಿನದಲ್ಲಿ ಗಗನಯಾತ್ರಿಗಳು 16 ಸೂರ್ಯೋದಯ ಹಾಗೂ 16 ಸೂರ್ಯಾಸ್ತವನ್ನು ಕಂಡಿರುತ್ತಾರೆ. * ರಾಚೆಲ್ ಕುಶ್ನರ್ ಅವರ ಕ್ರಿಯೇಶನ್ ಲೇಕ್, ಆನ್ನೆ ಮೈಕೇಲ್ಸ್ ಅವರ “ಹೆಲ್ಡ್,” ಯೆಲ್ ವ್ಯಾನ್ ಡೆರ್ ವೊಡೆನ್ ಅವರ ದ ಸೇಫ್ ಕೀಪ್, ಚಾರ್ಲೊಟ್ ವುಡನ್ ಅವರ ಸ್ಟೋನ್ ಯಾರ್ಡ್ ಡಿವೋಷನಲ್ ಮತ್ತು ಪರ್ಸಿವಲ್ ಎವೆರೆಟ್ ಅವರ ಜೇಮ್ಸ್ ಸಹ ಶಾರ್ಟ್ಲಿಸ್ಟ್ ಆಗಿವೆ. ಪ್ರಶಸ್ತಿಯ 55 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ 2024 ರ ಬೂಕರ್ ಪ್ರಶಸ್ತಿಗೆ ಆಯ್ಕೆಯಾದ ಆರು ಲೇಖಕರಲ್ಲಿ ಐವರು ಮಹಿಳೆರಾಗಿದ್ದಾರೆ.* 2005ರಲ್ಲಿ ಸ್ಥಾಪಿತವಾದ ಇಂಟರ್ನ್ಯಾಷನಲ್ ಬೂಕರ್ ಪ್ರಶಸ್ತಿಯನ್ನು ಹಿಂದೆ ಮ್ಯಾನ್ ಬೂಕರ್ ಇಂಟರ್ನ್ಯಾಷನಲ್ ಪ್ರೈಸ್ ಎಂದು ಕರೆಯಲಾಗುತ್ತಿತ್ತು, ಇದು ಯುಕೆ ಮತ್ತು ಐರ್ಲೆಂಡ್ ನಲ್ಲಿ ಪ್ರಕಟವಾದ ಇಂಗ್ಲಿಷ್ ಕಾದಂಬರಿಗಳಿಗೆ ಅತ್ಯಂತ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿ ಎಂದು ಪರಿಗಣಿಸಲಾಗಿದೆ. * ಐದು ಸದಸ್ಯರ ತೀರ್ಪುಗಾರರ ಸಮಿತಿಯ ಅಧ್ಯಕ್ಷತೆ ವಹಿಸಿದ್ದ ಬರಹಗಾರ ಮತ್ತು ಕಲಾವಿದ ಎಡಂಡ್ ಡಿ ವಾಲ್ ಇದನ್ನು ಪವಾಡಸದಶ ಕಾದಂಬರಿ ಎಂದು ಕರೆದರು, ಇದು ನಮ್ಮ ಜಗತ್ತನ್ನು ವಿಚಿತ್ರ ಮತ್ತು ನಮಗೆ ಹೊಸದನ್ನಾಗಿ ಮಾಡುತ್ತದೆ ಎಂದು ಹೇಳಿದರು. * ಲೇಖಕಿ ಹಾರ್ವೆ ಅವರು 'ಭೂಮಿಯ ಪರವಾಗಿ ಧ್ವನಿ ಎತ್ತುವ ಎಲ್ಲರಿಗೂ ಈ ಪ್ರಶಸ್ತಿ ಯನ್ನು ಅರ್ಪಿಸುತ್ತೇನೆ' ಎಂದು ಪ್ರತಿಕ್ರಿಯಿಸಿದರು. 'ಬಾಹ್ಯಾಕಾಶ ಒಂದು ಗ್ರಾಮ. ಅಲ್ಲಿನ ಸೌಂದರ್ಯ, ಬೆರಗನ್ನು ಅಕ್ಷರಗಳಲ್ಲಿ ಕಟ್ಟಿಕೊಡುವ ಪ್ರಯತ್ನವಾಗಿ ಈ ಕೃತಿ ರಚಿಸಿದೆ' ಎಂದು ಹೇಳಿದ್ದಾರೆ.