* ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆಗಾಗಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ತಿಳಿಸಿದ್ದಾರೆ.* ಈ ಭೇಟಿಗೆ ಸಂಬಂಧಿಸಿದ ವ್ಯವಸ್ಥೆಗಳನ್ನು ರೂಪಿಸಲಾಗುತ್ತಿದ್ದು, 'ರಷ್ಯಾ ಮತ್ತು ಭಾರತ' ಹೊಸ ದ್ವಿಪಕ್ಷಿಯ ಕಾರ್ಯಸೂಚಿಯ ಕಡೆಗೆ ಸಾಗುತಿದ್ದೆ ಎಂದು ಲಾವ್ರೊವ್' ಸಮ್ಮೇಳನದಲ್ಲಿ ವಿಷಯ ತಿಳಿಸಿದರು.* ಭಾರತ ಸರ್ಕಾರದಿಂದ ಆಹ್ವಾನ ಸ್ವೀಕರಿಸಿರುವ ಪುಟಿನ್ ಅವರ ಭೇಟಿಗೆ ಸಿದ್ಧತೆ ನಡೆಯುತ್ತಿದೆ. * ಕಳೆದ ವರ್ಷ, ಮರು ಆಯ್ಕೆಯಾದ ಬಳಿಕ ಮೋದಿ ರಷ್ಯಾಕ್ಕೆ ತಮ್ಮ ಮೊದಲ ವಿದೇಶಿ ಭೇಟಿ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಈಗ ಪುಟಿನ್ ಅವರ ಭಾರತ ಭೇಟಿ ನಡೆಯಲಿದೆ ಎಂದು ಲಾವ್ರೊವ್ ತಿಳಿಸಿದರು. * 2023 ಜುಲೈನಲ್ಲಿ 22ನೇ ಭಾರತ-ರಷ್ಯಾ ಶೃಂಗಸಭೆಗಾಗಿ ಪ್ರಧಾನಿ ಮೋದಿ ಮಾಸ್ಕೋಗೆ ಭೇಟಿ ನೀಡಿದ್ದರು. ಮೋದಿ ಅವರು ಮೂರನೇ ಅವಧಿಗೆ ಪ್ರಧಾನಿಯಾಗಿದೊಡನೆ ಈ ಭೇಟಿ ಪ್ರಸ್ತಾಪವಾಗಿದೆ. * ಮೇ 2023ರಲ್ಲಿ ವ್ಲಾಡಿಮಿರ್ ಪುಟಿನ್ ಐದನೇ ಬಾರಿಗೆ ರಷ್ಯಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. 10. 2023 ಅಕ್ಟೋಬರ್ನಲ್ಲಿ, ಕಜಾನ್ನಲ್ಲಿ ಬ್ರಿಕ್ಸ್ ಶೃಂಗಸಭೆ ವೇಳೆ ಮೋದಿ ಮತ್ತು ಪುಟಿನ್ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು.