* ಭಾರತೀಯ ಚಹಾ ಮಂಡಳಿಯ ಪ್ರಕಾರ, ಭಾರತ ವಿಶ್ವದ ಎರಡನೇ ಅತಿದೊಡ್ಡ ಚಹಾ ರಫ್ತುದಾರ ದೇಶವಾಗಿ ಸ್ಥಾನ ಪಡೆದಿದೆ. * ದೇಶದಲ್ಲಿ ಚಹಾ ಉತ್ಪಾದನೆಯಲ್ಲಿ ಉತ್ತಮ ಏರಿಕೆ ಕಂಡುಬಂದಿದ್ದು, ಶ್ರೀಲಂಕಾವನ್ನು ಹಿಂದಿಕ್ಕಿ ಭಾರತ ಇದೀಗ ವಿಶ್ವದ ಎರಡನೇ ಅತಿದೊಡ್ಡ ಟೀ ರಫ್ತುಗಾರನಾಗಿದೆ.* 2024ರಲ್ಲಿ ಭಾರತ ಒಟ್ಟು 255 ಮಿಲಿಯನ್ ಕೆ.ಜಿ. ಟೀ ರಫ್ತು ಮಾಡಿದ್ದು, ಕೀನ್ಯಾ ಈ ಪಟ್ಟಿಯ ಅಗ್ರಸ್ಥಾನದಲ್ಲಿದೆ ಎಂದು ಟೀ ಬೋರ್ಡ್ ಆಫ್ ಇಂಡಿಯಾ ಮಾಹಿತಿ ನೀಡಿದೆ. * ಕಳೆದ ದಶಕದಲ್ಲಿ ಭಾರತದ ಟೀ ರಫ್ತು ಪ್ರಮಾಣದಲ್ಲಿ ದೊಡ್ಡ ಮಟ್ಟದ ಬೆಳವಣಿಗೆ ಕಂಡುಬಂದಿದ್ದು, ಜಾಗತಿಕ ರಾಜಕೀಯ ಅಸ್ಥಿರತೆಯ ನಡುವೆಯೂ 2024ರಲ್ಲಿ 255 ಮಿಲಿಯನ್ ಕೆ.ಜಿ. ಟೀ ರಫ್ತು ಮಾಡಲಾಗಿದೆ. * ಭಾರತದ ಟೀ ಪುಡಿ ರಫ್ತು ಶೇ.10ರಷ್ಟು ಹೆಚ್ಚಳ ಕಂಡು, 2023ರಲ್ಲಿ 231.69 ಮಿಲಿಯನ್ ಕೆ.ಜಿ. ಟೀ ರಫ್ತು ಮಾಡಿದ್ದರೆ, 2024ರಲ್ಲಿ ಈ ಪ್ರಮಾಣ 255 ಮಿಲಿಯನ್ ಕೆ.ಜಿಗೆ ಏರಿಕೆಯಾಗಿದೆ. * ಟೀ ರಫ್ತಿನಿಂದ ಭಾರತಕ್ಕೆ ಲಭಿಸಿದ ಆದಾಯ ಶೇ.15ರಷ್ಟು ಹೆಚ್ಚಾಗಿ, 2023ರಲ್ಲಿ 6,161 ಕೋಟಿ ರೂ. ಗಳಿಸಿದ್ದರೆ, 2024ರಲ್ಲಿ ಈ ಮೌಲ್ಯ 7,111 ಕೋಟಿ ರೂಪಾಯಿಗೆ ತಲುಪಿದೆ. * ಇರಾಕ್ಗೆ ಶೇ.20ರಷ್ಟು ಟೀ ರಫ್ತು ಮಾಡಲಾಗಿದ್ದು, ಪಶ್ಚಿಮ ಏಷ್ಯಾದ ದೇಶಗಳಿಗೆ ಈ ವರ್ಷ 40-50 ಮಿಲಿಯನ್ ಕೆ.ಜಿ. ಟೀ ಕಳುಹಿಸುವ ನಿರೀಕ್ಷೆ ವ್ಯಕ್ತವಾಗಿದೆ. * ಭಾರತ ಯುಎಇ, ಇರಾಕ್, ಇರಾನ್, ರಷ್ಯಾ, ಯುಎಸ್ಎ ಮತ್ತು ಬ್ರಿಟನ್ ಸೇರಿದಂತೆ 25ಕ್ಕೂ ಹೆಚ್ಚು ದೇಶಗಳಿಗೆ ಟೀ ರಫ್ತು ಮಾಡುತ್ತಿದೆ ಎಂದು ವರದಿ ತಿಳಿಸಿದೆ.