* ಭಾರತದಲ್ಲಿ ಯುಪಿಐ ಡಿಜಿಟಲ್ ಪಾವತಿ ವ್ಯವಸ್ಥೆ ಬಹಳ ಯಶಸ್ವಿಯಾಗಿದೆ ಎಂದು ವಿವಿಧ ತಜ್ಞರು ಸೇರಿ ರಚಿಸಿದ ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ. * ಭಾರತದ ಯುಪಿಐ ಸಿಸ್ಟಂ ಅನ್ಯ ದೇಶಗಳಿಗೂ ಇದು ಮಾದರಿಯಾಗಬಲ್ಲುದು ಎಂದು ವರದಿಯಲ್ಲಿ ತಿಳಿಸಲಾಗಿದೆ. ಭಾರತದಲ್ಲಿ ನಡೆಯುವ ರೀಟೇಲ್ ಡಿಜಿಟಲ್ ಪಾವತಿಯಲ್ಲಿ ಶೇ. 75ರಷ್ಟು ಪ್ರಮಾಣವು ಯುಪಿಐ ಮೂಲಕ ಆಗುತ್ತದೆ ಎನ್ನಲಾಗಿದೆ.* 2016ರಲ್ಲಿ ಯುಪಿಐ ಪೇಮೆಂಟ್ ಸಿಸ್ಟಂ ಅನ್ನು ಜಾರಿಗೆ ತರಲಾಗಿದೆ. 30 ಕೋಟಿ ಜನರು ಇದನ್ನು ಬಳಸುತ್ತಿದ್ದಾರೆ. 5 ಕೋಟಿ ವರ್ತಕರಿಗೆ ಇದು ವರದಾನವಾಗಿದೆ. 2023ರ ಅಕ್ಟೋಬರ್ ತಿಂಗಳ ದತ್ತಾಂಶದ ಪ್ರಕಾರ ಶೇ. 75ರಷ್ಟು ರೀಟೇಲ್ ಡಿಜಿಟಲ್ ಪಾವತಿಯು ಯುಪಿಐ ಮೂಲಕ ಆಗಿದೆ.* ಯುಪಿಐ ಬಳಕೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಹೊಸ ಸಾಲಗಾರರ ಸಂಖ್ಯೆ ಶೇ. 4ರಷ್ಟು ಹೆಚ್ಚಿದೆ. ಸಾಲ ಪಡೆಯಲು ಕಷ್ಟವಾಗಿರುವಂತಹ ಸಾಲಗಾರರ ಪ್ರಮಾಣ ಶೇ. 8ರಷ್ಟು ಹೆಚ್ಚಿದೆ. ಫಿನ್ಟಕ್ ಸಂಸ್ಥೆಗಳು ನೀಡುವ ಸರಾಸರಿ ಸಾಲದ ಗಾತ್ರ 27,778 ರೂ ಇದೆ. ಇದು ಗ್ರಾಮೀಣ ಭಾಗದ ಮಾಸಿಕ ವೆಚ್ಚದ ಏಳು ಪಟ್ಟು ಹಣ. ಈ ಕುತೂಹಲಕಾರಿ ಅಂಶವನ್ನು ತಜ್ಞರ ಈ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.* ಭಾರತದಾದ್ಯಂತ ಡಿಜಿಟಲ್ ಪಾವತಿಗಳು ಸಾಕಷ್ಟು ಹೆಚ್ಚಲು ಯುಪಿಐ ಪ್ರಮುಖ ಕಾರಣವಾಗಿದೆ. ಬೀದಿ ಬದಿಯ ವ್ಯಾಪಾರಿಗಳಿಂದ ಹಿಡಿದು ದೊಡ್ಡ ದೊಡ್ಡ ಶಾಪಿಂಗ್ ಮಾಲ್ಗಳವರೆಗೆ ಎಲ್ಲಾ ಮಟ್ಟಗಳಲ್ಲೂ ಯುಪಿಐ ಪಾವತಿಯನ್ನು ಬಳಸಲಾಗುತ್ತಿದೆ,’ ಎಂದು ಈ ವರದಿಯಲ್ಲಿ ತಿಳಿಸಲಾಗಿದೆ.