* ಭಾರತದ ಅತ್ಯಂತ ಕಿರಿಯ ಪೈಲೆಟ್ ಎಂಬ ಬಿರುದು ಪಡೆದ ಕರ್ನಾಟಕದ 18 ವರ್ಷದ ಸಮೈರಾ ಹುಲ್ಲೂರ್ ಅವರು ದಾಖಲೆಯನ್ನ ನಿರ್ಮಿಸಿದ್ದಾರೆ. ಅಲ್ಲದೇ ವಾಣಿಜ್ಯ ಪೈಲಟ್ ಲೈಸೆನ್ಸ್ (ಸಿಪಿಎಲ್) ಹೊಂದಿರುವ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.* ಸಮೈರಾ ಹುಲ್ಲೂರ್ ಅವರು ಶಿಕ್ಷಣವನ್ನು ವಿಜಯಪುರದಲ್ಲಿ ಮುಗಿಸಿ, 6 ತಿಂಗಳ ಕಾಲ ದೆಹಲಿಯಲ್ಲಿ ಪೈಲಟ್ ಟ್ರೇನಿಂಗ್ ಮುಗಿಸಿ 18ನೇ ವಯಸ್ಸಿಗೆ ಪೈಲಟ್ ಆಗಿ ಹೊರಹೊಮ್ಮಿದ್ದಾರೆ. 25ನೇ ವಯಸ್ಸಿಗೆ ಪೈಲಟ್ ಆಗಿರುವ ಕ್ಯಾಪ್ಟನ್ ತಪೇಶ್ ಕುಮಾರ್ ಅವರು ಸಮೈರಾ ಅವರ ಸಾಧನೆಗೆ ಪ್ರೇರಣೆಯಾಗಿದ್ದಾರೆ.* ಸಮೈರಾ ಹುಲ್ಲೂರ್ ಆರು ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ ಮತ್ತು ಸುಮಾರು ಒಂದೂವರೆ ವರ್ಷಗಳಲ್ಲಿ 200 ಗಂಟೆಗಳ ಹಾರಾಟದ ಅನುಭವವನ್ನು ಸಂಗ್ರಹಿಸಿದ್ದಾರೆ.* ಆರು ತಿಂಗಳು ಸತತವಾಗಿ ತೀರ್ವ ತರಬೇತಿ ಪಡೆಯುವ ಮೂಲಕ ಸಮೈರಾ ಅವರ ವಾಯುಯಾನದ ಪ್ರಯಾಣ ಆರಂಭವಾಯಿತು. ಕ್ಯಾಪ್ಟನ್ ತಪೇಶ್ ಕುಮಾರ್ ಮತ್ತು ಅಕಾಡೆಮಿ ಸಂಸ್ಥಾಪಕರಾದ ವಿನೋದ್ ಯಾದವ್ ಅವರ ಮಾರ್ಗದರ್ಶನದಲ್ಲಿ ತರಬೇತಿಯನ್ನ ಆರಭಿಸಿದ್ದರು. ಸಮೈರಾ ಅವರ ಆರಂಭಿಕ ತರಬೇತಿಯು VYAA ದಲ್ಲಿತ್ತು ನಂತರ ಅವರು ಹಲವಾರು ಪರೀಕ್ಷೆಗಳನ್ನು ತೆಗೆದುಕೊಂಡು ಅವುಗಳನ್ನು ತೇರ್ಗಡೆಯಾದರು. ಅಲ್ಲದೇ ಅವರ ಮೊದಲ ಪ್ರಯತ್ನದಲ್ಲಿ ಎಲ್ಲಾ CPL ಪರೀಕ್ಷೆಗಳನ್ನು ಯಶಸ್ವಿಯಾಗಿ ಉತ್ತೀರ್ಣರಾದರು.