* ಭಾರತ ಮತ್ತು ಶ್ರೀಲಂಕಾ 16 ಡಿಸೆಂಬರ್ 2024 ರಂದು ನವದೆಹಲಿಯಲ್ಲಿ ಹಲವಾರು ಒಡಂಬಡಿಕೆಗಳಿಗೆ(MOU) ಸಹಿ ಹಾಕಿದವು, ಇದು ಹಲವಾರು ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ. * ಭಾರತ ಪ್ರವಾಸದಲ್ಲಿರುವ ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸಾನಾಯಕೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಒಪ್ಪಂದಗಳಿಗೆ ಸಹಿ ಹಾಕಲಾಯಿತು.* ಬಳಿಕ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಶ್ರೀಲಂಕಾದ ಅಭಿವೃದ್ಧಿಗೆ ಭಾರತದ ಬೆಂಬಲ ದೃಢವಾಗಿದೆ ಎಂದರು.* ಭಾರತವು ಇಲ್ಲಿಯವರೆಗೆ ಶ್ರೀಲಂಕಾಕ್ಕೆ $5 ಶತಕೋಟಿ ಮೌಲ್ಯದ ಹಣಕಾಸಿನ ನೆರವು ಮತ್ತು ಅನುದಾನವನ್ನು ವಿಸ್ತರಿಸಿದೆ, ಇದು ರೈಲ್ವೆ ಸಿಗ್ನಲಿಂಗ್ ವ್ಯವಸ್ಥೆಗಳು ಮತ್ತು ಬಂದರು ಪುನರ್ವಸತಿ ಮುಂತಾದ ಪೋಷಕ ಯೋಜನೆಗಳನ್ನು ಒಳಗೊಂಡಿದೆ.* ಭಾರತವು ಮುಂದಿನ ವರ್ಷದಿಂದ ಜಾಫ್ನಾ ಮತ್ತು ಪೂರ್ವ ಪ್ರಾಂತ್ಯದ 200 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುತ್ತದೆ ಮತ್ತು ಮುಂದಿನ ಐದು ವರ್ಷಗಳಲ್ಲಿ 1500 ಶ್ರೀಲಂಕಾದ ನಾಗರಿಕ ಸೇವಕರಿಗೆ ತರಬೇತಿ ನೀಡಲಿದೆ.* ಗೃಹ, ನವೀಕರಿಸಬಹುದಾದ ವಿದ್ಯುತ್ ಶಕ್ತಿ, ಕೃಷಿ, ಡೈರಿ, ಮೀನುಗಾರಿಕೆ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ಭಾರತ ಒತ್ತು ನೀಡಲಿದೆ. ಶ್ರೀಲಂಕಾದಲ್ಲಿನ ಡಿಜಿಟಲ್ ಯೋಜನೆಯಲ್ಲಿಯೂ ಭಾರತ ಭಾಗಿಯಾಗಲಿದೆ ಎಂದು ಮೋದಿ ತಿಳಿಸಿದರು.