* ಅನಂತ್ ಅಂಬಾನಿ ಅವರ `ವಂತಾರ’ ಸಂಸ್ಥೆಗೆ ಭಾರತ ಸರ್ಕಾರವು `ಕಾರ್ಪೊರೇಟ್’ ವಿಭಾಗದ ಅಡಿಯಲ್ಲಿ ಪ್ರಾಣಿ ರಕ್ಷಣೆಗೆ ದೇಶದ ಅತ್ಯುನ್ನತ ಗೌರವವಾದ ಪ್ರತಿಷ್ಠಿತ `ಪ್ರಾಣಿ ಮಿತ್ರ’ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿದೆ.* ವಂತಾರ ಅಡಿಯಲ್ಲಿ ಆನೆಗಳ ರಕ್ಷಣೆ, ಚಿಕಿತ್ಸೆ ಮತ್ತು ಜೀವಿತಾವಧಿಯ ಆರೈಕೆಗೆ ಮೀಸಲಾಗಿರುವ ರಾಧೆ ಕೃಷ್ಣ ಟೆಂಪಲ್ ಎಲೆಫೆಂಟ್ ವೆಲ್ ಫೇರ್ ಟ್ರಸ್ಟ್ ನ ಅಸಾಧಾರಣ ಕೊಡುಗೆಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.* ವಂತಾರದ ಆನೆ ಆರೈಕೆ ಕೇಂದ್ರದಲ್ಲಿ 240ಕ್ಕೂ ಹೆಚ್ಚು ಆನೆಗಳಿಗೆ ಸರಪಳಿ-ಮುಕ್ತ, ಸುರಕ್ಷಿತ ವಾತಾವರಣ ಒದಗಿಸಲಾಗುತ್ತದೆ. ಇದರಲ್ಲಿ ಸರ್ಕಸ್, ಮರ ಕಡಿಯುವ ಉದ್ಯಮ, ಸವಾರಿ ಮತ್ತು ಭಿಕ್ಷಾಟನೆಯಿಂದ ರಕ್ಷಿಸಲಾದ ಆನೆಗಳು ಸೇರಿವೆ. ದೌರ್ಜನ್ಯ ಅನುಭವಿಸಿದ ಆನೆಗಳಿಗೆ ಇಲ್ಲಿ ಉತ್ತಮ ಪಶುವೈದ್ಯಕೀಯ ಚಿಕಿತ್ಸೆ ಮತ್ತು ಸಹಾನುಭೂತಿಯ ಆರೈಕೆ ಲಭ್ಯವಿದೆ.* 998 ಎಕರೆಗಳ ವಿಶೇಷ ಕಾಡಿನಲ್ಲಿ ಆನೆಗಳು ಮುಕ್ತವಾಗಿ ತಿರುಗಾಡಿ, ನೈಸರ್ಗಿಕ ಮತ್ತು ಸಾಮಾಜಿಕ ನಡವಳಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ಹೊಂದಿವೆ. ಅವುಗಳು ಮೇವು ಹುಡುಕಿ, ಮಣ್ಣು-ಧೂಳಿನ ಸ್ನಾನ ಮಾಡುತ್ತಾ, ನೈಸರ್ಗಿಕ ಕೊಳಗಳಲ್ಲಿ ಸ್ನಾನ ಮಾಡಬಹುದು.* ವಂತಾರ ಸಂಸ್ಥೆಯು ಪ್ರಾಣಿಗಳ ಕಲ್ಯಾಣದಲ್ಲಿ ನೀಡಿದ ಕೊಡುಗೆಗಾಗಿ ಕಾರ್ಪೊರೇಟ್ ವಿಭಾಗದ ಪ್ರಾಣಿ ಮಿತ್ರ ಪ್ರಶಸ್ತಿಯನ್ನು ಪಡೆದಿದೆ. ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ರಾಜ್ಯ ಸಚಿವರು ಈ ಗೌರವವನ್ನು ಪ್ರದಾನ ಮಾಡಿದರು. ವಂತಾರದ ಸಿಇಒ ವಿವಾನ್ ಕರಣಿ ಪ್ರಶಸ್ತಿ ಸ್ವೀಕರಿಸಿ, ಇದು ಪ್ರಾಣಿಗಳನ್ನು ರಕ್ಷಿಸುವ ಅಸಂಖ್ಯಾತ ವ್ಯಕ್ತಿಗಳಿಗೆ ಗೌರವವಾಗಿದೆ ಎಂದು ಹೇಳಿದರು.* ಪ್ರಾಣಿ ಕಲ್ಯಾಣ ಮಾನದಂಡಗಳನ್ನು ಉತ್ತೇಜಿಸಲು ಹಾಗೂ ಜೀವವೈವಿಧ್ಯತೆ ರಕ್ಷಿಸಲು ಸಂಸ್ಥೆ ಬದ್ಧವಾಗಿದೆ. ಕಳೆದ ಐದು ವರ್ಷಗಳಿಂದ ನಿರಂತರ ಕೊಡುಗೆ ನೀಡಿದ ಸಂಸ್ಥೆಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.