* ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ್ದಾರೆ. ಟ್ರಂಪ್ ರಾಷ್ಟ್ರೀಯ ಗುಪ್ತಚರ ನಿರ್ದೇಶಕ Director of National Intelligence(DNI)ರನ್ನು ಆಯ್ಕೆ ಮಾಡಿದ್ದಾರೆ.* ಡೆಮಾಕ್ರಟಿಕ್ ಪಕ್ಷದ ಮಾಜಿ ಸದಸ್ಯೆ ತುಳಸಿ ಗಬ್ಬಾರ್ಡ್ ಅವರನ್ನು ಡಿಎನ್ಐ ಆಗಿ ಮಾಡಲು ಅವರು ನಿರ್ಧರಿಸಿದ್ದಾರೆ. * ಗಬ್ಬಾರ್ಡ್ ನಾಲ್ಕು ಬಾರಿ ಸಂಸದರಾಗಿದ್ದಾರೆ ಮತ್ತು 2020ರಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದರು. ಪಶ್ಚಿಮ ಏಷ್ಯಾ ಮತ್ತು ಆಫ್ರಿಕಾದಲ್ಲಿ ಸಂಘರ್ಷ-ಹಾನಿಗೊಳಗಾದ ಪ್ರದೇಶಗಳಿಗೆ ಮೂರು ನಿಯೋಜನೆಗಳಿಂದ ಗಬ್ಬಾರ್ಡ್ ಅನುಭವವನ್ನು ಹೊಂದಿದ್ದಾರೆ. ಅವರು ಇತ್ತೀಚೆಗೆ ಡೆಮಾಕ್ರಟಿಕ್ ಪಕ್ಷವನ್ನು ತೊರೆದು ರಿಪಬ್ಲಿಕನ್ ಪಕ್ಷಕ್ಕೆ ಸೇರಿದರು.* ಮಾಜಿ ಕಾಂಗ್ರೆಸ್ನ ಲೆಫ್ಟಿನೆಂಟ್ ಕರ್ನಲ್ ತುಳಸಿ ಗಬ್ಬಾರ್ಡ್ ಡಿಎನ್ಐ ಆಗಿ ಕಾರ್ಯನಿರ್ವಹಿಸಲಿದ್ದಾರೆ. ತುಳಸಿ ಗಬ್ಬಾರ್ಡ್ ಹವಾಯಿಯಿಂದ 2013 ರಲ್ಲಿ US ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ಗೆ ಚುನಾಯಿತರಾದ ಮೊದಲ ಹಿಂದೂ ಅಮೇರಿಕನ್ ಆಗಿದ್ದಾರೆ.* ಸುಮಾರು 20 ವರ್ಷದಗಳ ಸೈನ್ಯದ ಶಾಖೆಯಾದ ನ್ಯಾಷನಲ್ ಗಾರ್ಡ್ನಲ್ಲಿ ಸೇವೆ ಸಲ್ಲಿಸಿರುವ ಇವರಿಗೆ ಭಾರತದ ಜೊತೆ ನೇರವಾದ ಸಂಬಂಧ ಇಲ್ಲ. ಆದರೆ ಇವರ ತಾಯಿ ಹಿಂದೂ (Hindu) ಧರ್ಮವನ್ನು ಪಾಲಿಸುತ್ತಿದ್ದ ಹಿನ್ನೆಲೆಯಲ್ಲಿ ಪುತ್ರಿಗೆ ತುಳಸಿ ಎಂದು ಹೆಸರನ್ನು ಇರಿಸಿದ್ದರು.* ತುಳಸಿ ಗಬ್ಬಾರ್ಡ್ ಅವರು ಹಿಂದೂ ಎಂದು ಗುರುತಿಸಿಕೊಳ್ಳುತ್ತಾರೆ ಮತ್ತು ಮೊದಲ ಹಿಂದೂ ಯುಎಸ್ ಕಾಂಗ್ರೆಸ್ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳನ್ನು ಅವರು ಆಗಾಗ ಖಂಡಿಸಿದ್ದಾರೆ.* ಗಬ್ಬಾರ್ಡ್ ಅಮೆರಿಕದಲ್ಲಿ ಜನಿಸಿದರು. ಅವರ ತಾಯಿ ತನ್ನ ಮಕ್ಕಳನ್ನು ಹಿಂದೂ ಸಂಸ್ಕೃತಿಯಂತೆ ಬೆಳೆಸಿದರು, ಅವರು ಸಸ್ಯಾಹಾರಿ. ಭಗವದ್ಗೀತೆಯ ಮೇಲೆ ಕೈ ಇಟ್ಟು ಕಾಂಗ್ರೆಸ್ ಸದಸ್ಯೆ ಎಂದು ಪ್ರಮಾಣ ವಚನ ಸ್ವೀಕರಿಸಿದ್ದರು.* ಗಬ್ಬಾರ್ಡ್ ಅವರ ತಾಯಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದರು ಮತ್ತು ಅವರ ಎಲ್ಲಾ ಮಕ್ಕಳಿಗೆ ಹಿಂದೂ ಹೆಸರುಗಳನ್ನು ಇಟ್ಟಿದ್ದರು. ಭಾರತದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ.* ಈಗಾಗಲೇ ಭಾರತೀಯ ಮೂಲದ ಉದ್ಯಮಿ ವಿವೇಕ್ ರಾಮಸ್ವಾಮಿಗೆ ಮಹತ್ವದ ಜವಾಬ್ದಾರಿಯನ್ನು ಟ್ರಂಪ್ ನೀಡಿದ್ದಾರೆ. ರಾಮಸ್ವಾಮಿ ಮತ್ತು ಉದ್ಯಮಿ ಎಲಾನ್ ಮಸ್ಕ್ ಅವರಿಗೆ ಆಡಳಿತ ದಕ್ಷತಾ ಇಲಾಖೆ (Department of Government Efficiency) ಸ್ಥಾಪಿಸಿ, ಅದಕ್ಕೆ ವಿವೇಕ್ ರಾಮಸ್ವಾಮಿ ಅವರನ್ನು ಮುಖ್ಯಸ್ಥರನ್ನಾಗಿ ಮಾಡಲಾಗಿದೆ.