* ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಅವರು ನ್ಯಾಯಾಂಗ ಇಲಾಖೆಯ ನಾಗರಿಕ ಹಕ್ಕುಗಳ ಸಹಾಯಕ ಅಟಾರ್ನಿ ಜನರಲ್ [Assistant Attorney General for Civil Rights at the Department of Justice] ಆಗಿ ಭಾರತ ಮೂಲದ ಹರ್ಮಿತ್ ಕೆ.ಧಿಲ್ಲೋನ್ ಅವರನ್ನು ನೇಮಿಸಿದ್ದಾರೆ.* ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಜಸ್ಟಿಸ್ನಲ್ಲಿ ನಾಗರಿಕ ಹಕ್ಕುಗಳಿಗಾಗಿ ಸಹಾಯಕ ಅಟಾರ್ನಿ ಜನರಲ್ ಆಗಿ ಹರ್ಮೀತ್ ಕೆ ಧಿಲ್ಲೋನ್ ಅವರನ್ನು ನಾಮನಿರ್ದೇಶನ ಮಾಡಿದೆ.* ಚಂಡೀಗಢದಲ್ಲಿ ಜನಿಸಿದ ಧಿಲ್ಲೋನ್ ಅವರು ಬಾಲ್ಯದಲ್ಲೇ ಹೆತ್ತವರ ಜೊತೆ ಅಮೆರಿಕಕ್ಕೆ ಹೋಗಿ ಅಲ್ಲಿಯೇ ನೆಲೆಸಿದ್ದಾರೆ.* 2016ರಲ್ಲಿ ಕ್ಲೀವ್ಲ್ಯಾಂಡ್ನಲ್ಲಿ ನಡೆದ ರಿಪಬ್ಲಿಕನ್ ಪಕ್ಷದ ರಾಷ್ಟ್ರೀಯ ಸಮಾವೇಶದ ವೇಳೆ ವೇದಿಕೆ ಹತ್ತಿದ ಮೊದಲ ಭಾರತೀಯ ಮೂಲದ ಮಹಿಳೆ ಎಂಬ ಗೌರವಕ್ಕೂ ಪಾತ್ರರಾಗಿದ್ದರು.* 2006 ರಲ್ಲಿ ಅವರು ತಮ್ಮ ಕಾನೂನು ಸಂಸ್ಥೆಯಾದ ಧಿಲ್ಲೋನ್ ಲಾ ಗ್ರೂಪ್ ಇಂಕ್ ಅನ್ನು ಸ್ಥಾಪಿಸಿದರು.* ವಾಣಿಜ್ಯ ದಾವೆ, ಉದ್ಯೋಗ ಕಾನೂನು, ಮೊದಲ ತಿದ್ದುಪಡಿ ಹಕ್ಕುಗಳು ಮತ್ತು ಚುನಾವಣಾ ಕಾನೂನಿನಲ್ಲಿ ಪರಿಣತಿ ಹೊಂದಿದ್ದರು. ಅವರು ಸೆಂಟರ್ ಫಾರ್ ಅಮೇರಿಕನ್ ಲಿಬರ್ಟಿಯ ಸಿಇಒ ಕೂಡ ಆಗಿದ್ದಾರೆ.* "ತಮ್ಮ ವೃತ್ತಿಜೀವನದುದ್ದಕ್ಕೂ, ಹರ್ಮೀತ್ ಧಿಲ್ಲೊನ್ ಅವರು ನಾಗರಿಕ ಹಕ್ಕುಗಳ ರಕ್ಷಣೆ, ವಾಕ್ ಸ್ವಾತಂತ್ರ್ಯ, ಉದ್ದೋಗದ ಸ್ಥಳದಲ್ಲಿ ತಾರತಮ್ಯ ನಿವಾರಣೆಗಾಗಿ ಹೋರಾಟ ನಡೆಸಿದ್ದರು.