* ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯ ಸ್ಪರ್ಧೆಗೆ ಭಾರತೀಯ ಕಿರುಚಿತ್ರ “ಅನುಜಾ” ಆಯ್ಕೆಯಾಗಿದೆ.* ದೆಹಲಿ ತಂಡ ಸಿದ್ಧಪಡಿಸಿದ 'ಅನುಜಾ' ಕಿರುಚಿತ್ರ ಲೈವ್ ಆ್ಯಕ್ಷನ್ ಶಾರ್ಟ್ ಫಿಲ್ಮ್ ವಿಭಾಗದಲ್ಲಿ 97ನೇ ಅಕಾಡೆಮಿ ಅವಾರ್ಡ್ಸ್ನಲ್ಲಿ ಪ್ರಖ್ಯಾತ ಆಸ್ಕರ್ ಪ್ರಶಸ್ತಿಗೆ ನಾಮಾಂಕಿತಗೊಂಡಿದೆ.* ಕಿರುಚಿತ್ರ(ಲೈವ್ ಆ್ಯಕ್ಷನ್) ವಿಭಾಗದಲ್ಲಿ ಅರ್ಹತೆ ಪಡೆದ 180 ಚಿತ್ರಗಳ ಪೈಕಿ 5 ಕಿರುಚಿತ್ರಗಳು ಪ್ರಶಸ್ತಿ ಪೈಪೋಟಿಗೆ ನಾಮನಿರ್ದೇಶಿತಗೊಂಡಿವೆ.* ಈ ಹಿಂದೆ ಎರಡು ಬಾರಿ ಆಸ್ಕರ್ ಪ್ರಶಸ್ತಿ ಪಡೆದಿದ್ದ “ದಿ ಎಲಿಫ್ಯಾಂಟ್ ವಿಸ್ಪರರ್’ ಕಿರುಚಿತ್ರ ನಿರ್ಮಿಸಿದ್ದ ಗುನೀತ್ ಮೊಂಗಾ ಅದನ್ನು ನಿರ್ಮಿಸಿದ್ದಾರೆ. ನಟಿ ಪ್ರಿಯಾಂಕಾ ಛೋಪ್ರಾ ಈ ಕಿರುಚಿತ್ರದ ಸಹ ನಿರ್ಮಾಪಕಿಯಾಗಿದ್ದಾರೆ.* ಒಂಬತ್ತು ವರ್ಷದ ಅನುಜಾ ಶಿಕ್ಷಣದ ಜತೆಗೆ ಸಹೋದರಿಯೊಂದಿಗೆ ಫ್ಯಾಕ್ಟರಿ ಕೆಲಸ ಮಾಡುತ್ತಿರುವ ಬಾಲಕಿಯ ಜೀವನಕಥೆಯನ್ನು ಈ ಚಿತ್ರ ಆಧರಿಸಿದೆ.* ಇಬ್ಬರು ಹೆಣ್ಣುಮಕ್ಕಳ ಭವಿಷ್ಯವನ್ನು ರೂಪಿಸುವ ಮಹತ್ವದ ನಿರ್ಧಾರದ ಸುತ್ತ ಕಥೆ ರಚಿಸಲಾಗಿದೆ . ಸಜ್ದಾ ಪಠಾಣ್ ಮತ್ತು ಅನನ್ಯಾ ಶಾನಭಾಗ್ ಪ್ರಮುಖ ಪಾತ್ರದಲ್ಲಿದ್ದಾರೆ.* ಮೀರಾ ನಾಯರ್ ಅವರ ನಿರ್ದೇಶನದಲ್ಲಿ, ಬೀದಿ ಮತ್ತು ದುಡಿಯುವ ಮಕ್ಕಳ ಬೆಂಬಲಕ್ಕೆ ನಿರ್ಮಿತವಾಗಿರುವ ಸಲಾಮ್ ಬಾಲಕ್ ಟ್ರಸ್ಟ್, ಶೈನ್ ಗ್ಲೋಬಲ್ ಮತ್ತು ಕೃಷನ್ ನಾಯ್ಕ್ ಫಿಲಂಸ್ ಸಹಯೋಗದಲ್ಲಿ ಈ ಚಿತ್ರ ನಿರ್ಮಿಸಲಾಗಿದೆ.