* ಆರ್ಥಿಕ ತಜ್ಞೆ ಮತ್ತು ಪ್ರಧಾನ ಮಂತ್ರಿಯ ಆರ್ಥಿಕ ಸಲಹಾ ಮಂಡಳಿಯ ಮಾಜಿ ಸದಸ್ಯೆ ಪೂನಂ ಗುಪ್ತಾ ಅವರನ್ನು ಆರ್ಬಿಐನ ಡೆಪ್ಯೂಟಿ ಗವರ್ನರ್ ಆಗಿ ನೇಮಕ ಮಾಡಲಾಗಿದೆ. * ಪೂನಂ ಗುಪ್ತಾ ಅವರು National Council of Applied Economic Research (NCAER) ನ ನಿರ್ದೇಶಕೆಯಾಗಿ ಸೇವೆ ಸಲ್ಲಿಸುತ್ತಿದ್ದರು. * ಅಲ್ಲದೆ, ಅವರು 16ನೇ ಹಣಕಾಸು ಆಯೋಗದ ಸಲಹಾ ಮಂಡಳಿಯ ಸದಸ್ಯೆಯಾಗಿದ್ದಾರೆ. * ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF)ಹಾಗೂ ವಿಶ್ವಬ್ಯಾಂಕ್ನಲ್ಲಿ ಸುಮಾರು ಎರಡು ದಶಕಗಳ ಕಾಲ ಹಿರಿಯ ಹುದ್ದೆಗಳನ್ನು ನಿರ್ವಹಿಸಿದ್ದರು.* ಒಟ್ಟು ನಾಲ್ಕು ಡೆಪ್ಯೂಟಿ ಗವರ್ನರ್ಗಳನ್ನು ಹೊಂದಿರುವ ಆರ್ಬಿಐನಲ್ಲಿ, ಇತ್ತೀಚೆಗೆ ನಿವೃತ್ತಿಯಾದ ಎಂ.ಬಿ.ಪಾತ್ರಾ ಅವರ ಸ್ಥಾನಕ್ಕೆ ಪೂನಂ ಗುಪ್ತಾ ನೇಮಕಗೊಂಡಿದ್ದಾರೆ. * ದಿಲ್ಲಿ ಸ್ಕೂಲ್ ಆಫ್ ಇಕನಾಮಿಕ್ಸ್,ಅಮೆರಿಕದ ಮೇರಿಲ್ಯಾಂಡ್ ವಿವಿಯಲ್ಲಿ ಅವರು ಅಧ್ಯಯನ ನಡೆಸಿದ್ದರು.* ಗುಪ್ತ ಅವರ ಅಧಿಕಾರಾವಧಿ ಮೂರು ವರ್ಷಗಳು ಆಗಿರಲಿದೆ.