* ಭಾರತದ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಅವರು ಆಂಧ್ರ ಕ್ರಿಕೆಟ್ ಅಸೋಸಿಯೇಷನ್ ಮಹಿಳೆಯರ ಕ್ರಿಕೆಟ್ ಕಾರ್ಯಾಚರಣೆಯ ಸಲಹೆಗಾರ್ತಿಯಾಗಿ (ಎಸಿಎ) ನೇಮಕಗೊಂಡಿದ್ದಾರೆ. * ರಾಜ್ಯದಾದ್ಯಂತ ಯುವ ಪ್ರತಿಭೆಗಳನ್ನು ಹುಡುಕುವ ನಿರ್ದಿಷ್ಟ ಉದ್ದೇಶದೊಂದಿಗೆ ಮಿಥಾಲಿ ರಾಜ್ ಅವರು ಮೂರು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಆಂಧ್ರ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಎಸ್.ಸತೀಶ್ ಬಾಬು ಅವರು ತಿಳಿಸಿದ್ದಾರೆ.* ಮಹಿಳಾ ಕ್ರಿಕೆಟಿಗರಿಗಾಗಿ ಅನಂತಪುರದಲ್ಲಿ ಪೂರ್ಣ ಪ್ರಮಾಣದ ಹೈ ಪರ್ಫಾರ್ಮೆನ್ಸ್ ಅಕಾಡೆಮಿಯನ್ನು ಸ್ಥಾಪಿಸುತ್ತಿದ್ದೇವೆ. ಆರಂಭದಲ್ಲಿ ನಾವು ವಿವಿಧ ವಯೋಮಾನದ 80 ಬಾಲಕಿಯರನ್ನು ಆಯ್ಕೆ ಮಾಡುತ್ತೇವೆ. 365 ದಿನಗಳ ತರಬೇತಿಯನ್ನು ನೀಡುತ್ತೇವೆ ಎಂದು ಸತೀಶ್ ಬಾಬು ತಿಳಿಸಿದ್ದಾರೆ.* ಮಿಥಾಲಿ ರಾಜ್ ಅವರು ಎಸಿಎ ನಲ್ಲಿ ಮಹಿಳಾ ಕ್ರಿಕೆಟ್ ಕಾರ್ಯಾಚರಣೆಗಳ ಮಾರ್ಗದರ್ಶಕರಾಗಿದ್ದು, ಉತ್ತಮ ಕ್ರಿಕೆಟಿಗರನ್ನು ಗುರುತಿಸುವುದು ಮತ್ತು ಮಾರ್ಗದರ್ಶನ ನೀಡುವುದರ ಜೊತೆಗೆ ಅವರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವ ಜವಾಬ್ದಾರಿ ಹೊಂದಿರುತ್ತಾರೆ.* 2022ರಲ್ಲಿ ಮಿಥಾಲಿ ರಾಜ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನ ಎಲ್ಲಾ ಮಾದರಿಗಳಿಗೆ ನಿವೃತ್ತಿ ಘೋಷಿಸಿದ್ದರು. 41ರ ಹರೆಯದ ಭಾರತೀಯ ಟೆಸ್ಟ್ ಮತ್ತು ಏಕದಿನ ತಂಡದ ನಾಯಕಿ ಮಿಥಾಲಿ 1999 ರಲ್ಲಿ ಪಾದಾರ್ಪಣೆ ಮಾಡಿದ್ದರು. * ಮಿಥಾಲಿ ರಾಜ್ ಅವರು 23 ವರ್ಷಗಳ ಕ್ರಿಕೆಟ್ ಜೀವನದಲ್ಲಿ ಅಂತಾಷ್ಟ್ರೀಯ ವೃತ್ತಿಜೀವನದಲ್ಲಿ 232 ಏಕದಿನ , 89 ಟಿ 20 ಮತ್ತು 12 ಟೆಸ್ಟ್ಗಳಲ್ಲಿ ಆಡಿದ್ದಾರೆ.* ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಏಕದಿನ ಪಂದ್ಯಗಳಲ್ಲಿ 7 ಶತಕಗಳು ಮತ್ತು 64 ಅರ್ಧಶತಕಗಳೊಂದಿಗೆ 7805 ರನ್ಗಳನ್ನು,ಟಿ 20 ಯಲ್ಲಿ 17 ಅರ್ಧಶತಕಗಳೊಂದಿಗೆ 2,364 ರನ್ಗಳು ಮತ್ತು ಟೆಸ್ಟ್ ನಲ್ಲಿ 699 ರನ್ಗಳನ್ನು ಗಳಿಸಿದ್ದಾರೆ.