* ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಎಂಬ ಧ್ಯೇಯದೊಂದಿಗೆ ಮಂಡ್ಯದಲ್ಲಿ ಇಂದಿನಿಂದ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೂರು ದಿನಗಳ ಸಂಭ್ರಮ ಶುರುವಾಗಲಿದೆ.* ಸಮ್ಮೇಳನಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಮಂಡ್ಯ ಕನ್ನಡಮಯ ವಾತಾವರಣದಲ್ಲಿ ಕಂಗೊಳಿಸುತ್ತಿದೆ.* ಕನ್ನಡನಾಡು, ನುಡಿ, ಸಂಸ್ಕೃತಿ, ಪರಂಪರೆ ಕುರಿತಾದ ಚಿಂತನೆಗಳು ಸಮ್ಮೇಳನದ ವೇದಿಕೆಯಿಂದ ಅನುರಣಿಸಲಿವೆ.* ಡಿಸೆಂಬರ್ 20ರಿಂದ 22ರವರೆಗೆ ಮಂಡ್ಯ ನಗರದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ 275ರ ರಸ್ತೆ ಬಳಿಯ ಅಮರಾವತಿ ಹೋಟೆಲ್ ಹಾಗೂ ಸ್ಯಾಂಟೋ ಆಸ್ಪತ್ರೆ ಹಿಂಭಾಗದ ಸ್ಥಳದಲ್ಲಿ ನಡೆಯಲಿದ್ದು, ಸಾಹಿತ್ಯ ಸಮ್ಮೇಳನ ನಡೆಯಲಿರುವ ಮೂರು ದಿನಗಳ ಕಾಲ ಕನ್ನಡಾಭಿಮಾನಿಗಳನ್ನು ಆದರದಿಂದ ಸ್ವಾಗತಿಸಲು ಮಂಡ್ಯ ಅಕ್ಷರಶಃ ಸಜ್ಜಾಗಿದೆ.* ರಾಜ್ಯ ಸರ್ಕಾರದಿಂದ 87ನೇ ನುಡಿಜಾತ್ರೆಗೆ 25 ಕೋಟಿ ರೂ. ಅನುದಾನ ನೀಡಲಾಗಿದೆ. ಜಿಲ್ಲೆಯ ಸರ್ಕಾರಿ ನೌಕರರು ಒಂದು ದಿನದ ವೇತನವನ್ನು ನೀಡಿರುವುದರಿಂದ ಅದು ಅಂದಾಜು ನಾಲ್ಕು ಕೋಟಿ ರೂ. ಆಗಲಿದೆ.* ಡಿಸೆಂಬರ್ 20 ರಂದು ಬೆಳಿಗ್ಗೆ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಎನ್. ಚಲುವರಾಯಸ್ವಾಮಿ ಅವರು ರಾಷ್ಟ್ರಧ್ವಜಾರೋಹಣವನ್ನು, ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಹಾಗೂ ಸಮ್ಮೇಳನ ಸ್ವಾಗತ ಸಮಿತಿಯ ಗೌರವ ಕಾರ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಪರಿಷತ್ತಿನ ಧ್ವಜಾರೋಹಣವನ್ನು ಹಾಗೂ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕಿ ಮೀರಾ ಶಿವಲಿಂಗಯ್ಯ ಅವರು ನಾಡ ಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ.* ಈ ಹಿನ್ನೆಲೆಯಲ್ಲಿ ಸಮ್ಮೇಳನಕ್ಕೆ ವ್ಯಯಿಸಿ ಉಳಿದ ಹಣದಲ್ಲಿ ಮಂಡ್ಯದಲ್ಲಿ ಭವನ ನಿರ್ಮಾಣ ಮಾಡಬೇಕೆನ್ನುವ ಆಗ್ರಹವಿದೆ. ಇದು ಹಿಂದಿನಿಂದ ನಡೆದುಕೊಂಡಿರುವ ಸಂಪ್ರದಾಯವೂ ಆಗಿದೆ.* ಬೆಳಿಗ್ಗೆ 10.30 ಗಂಟೆಗೆ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭವು ಪ್ರಧಾನ ವೇದಿಕೆಯಲ್ಲಿ ನಡೆಯಲಿದೆ. ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ.* 1994ರಲ್ಲಿ ಸಮ್ಮೇಳನಕ್ಕೆ 42 ಲಕ್ಷ ರೂ. ಸಂಗ್ರಹಿಸಲಾಗಿತ್ತು. ಅದರಲ್ಲಿ ಸಮ್ಮೇಳನಕ್ಕೆ 22 ಲಕ್ಷ ರೂ. ವ್ಯಯಿಸಲಾಗಿತ್ತು. ಇನ್ನುಳಿದ 20 ಲಕ್ಷ ರೂ.ನಲ್ಲಿ ನಗರಸಭೆಯಿಂದ ಉಚಿತವಾಗಿ ದೊರೆತ ನಿವೇಶನದಲ್ಲಿ 6.25 ಲಕ್ಷ ರೂ. ಖರ್ಚು ಮಾಡಿ ಕಸಾಪ ಕಚೇರಿಗೆ ಕಟ್ಟಡ ನಿರ್ಮಿಸಲಾಯಿತು.