* 2025 ಜನವರಿ 26 ರಂದು ನಡೆದ 76ನೇ ಗಣರಾಜ್ಯೋತ್ಸವ ಪರೇಡ್ನಲ್ಲಿ ವಿವಿಧ ಸ್ತಬ್ಧ ಚಿತ್ರಗಳು ಗಮನ ಸೆಳೆದಿದ್ದವು. ಈ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಉತ್ತರ ಪ್ರದೇಶಕ್ಕೆ ಪ್ರಥಮ ಬಹುಮಾನ ಲಭಿಸಿದೆ.* 76ನೇ ಗಣರಾಜ್ಯೋತ್ಸವ ಪರೇಡ್ ನ ಸ್ತಬ್ಧಚಿತ್ರಕ್ಕೆ ದೊರೆತ ಬಹುಮಾನಗಳು :- ಪ್ರಥಮ ಸ್ಥಾನ : ಮಹಾಕುಂಭ ಮೇಳ ಕುರಿತ ಸ್ತಬ್ಧಚಿತ್ರವನ್ನು ಸಿದ್ಧಪಡಿಸಿ ಪ್ರದರ್ಶಿಸಿದ ಉತ್ತರ ಪ್ರದೇಶಕ್ಕೆ ಪ್ರಥಮ ಬಹುಮಾನ ಲಭಿಸಿದೆ. - ದ್ವಿತೀಯ ಸ್ಥಾನ : ತ್ರಿಪುರಾ ಸ್ತಬ್ಧಚಿತ್ರಕ್ಕೆ 2ನೇ ಬಹುಮಾನ ಲಭಿಸಿದೆ. ಆತ್ಮನಿರ್ಭರ ಭಾರತದ ಅಡಿಯಲ್ಲಿ ಪರಿಸರ ಸ್ನೇಹಿ ವಸ್ತುಗಳನ್ನು ಸಿದ್ಧಪಡಿಸಿ ಬಳಕೆ ಮಾಡುವ ಮೂಲಕ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಯ ಉದ್ದೇಶದ ಸ್ತಬ್ಧಚಿತ್ರವನ್ನು ಪ್ರದರ್ಶಿಸಿತ್ತು.- ತೃತೀಯ ಸ್ಥಾನ : ಆಂಧ್ರಪ್ರದೇಶ ಸರ್ಕಾರವು ಪರಿಸರ ಸ್ನೇಹಿ ಮರದ ಆಟಿಕೆಗಳ ಸ್ತಬ್ಧಚಿತ್ರವನ್ನು ಪ್ರದರ್ಶಿಸಿತ್ತು. ಇದು ಮೂರನೇ ಬಹುಮಾನಕ್ಕೆ ಭಾಜನವಾಗಿದೆ.* ಸಾರ್ವಜನಿಕರ ಮೆಚ್ಚಿನ ಸ್ತಬ್ಧ ಚಿತ್ರ ವಿಭಾಗ :- ಪ್ರಥಮ ಸ್ಥಾನ : ಗುಜರಾತ್- ದ್ವಿತೀಯ ಸ್ಥಾನ : ಉತ್ತರಪ್ರದೇಶ- ತೃತೀಯ ಸ್ಥಾನ : ಉತ್ತರಖಂಡ- ಕೇಂದ್ರ ಸಚಿವಾಲಯ ಹಾಗೂ ಇಲಾಖೆಗಳ ವಿಭಾಗದಲ್ಲಿ ಆದಿವಾಸಿ ಕಲ್ಯಾಣ ಸಚಿವಾಲಯದ ಸ್ತಬ್ಧಚಿತ್ರ ಪ್ರಥಮ ಬಹುಮಾನ ಪಡೆದಿದೆ.* ಪಥ ಸಂಚಲನದಲ್ಲಿ ಕೇಂದ್ರ ಸಶಸ್ತ್ರ ಮೀಸಲು ಪೊಲೀಸ್ ಪಡೆ ಹಾಗೂ ದೆಹಲಿ ಪೊಲೀಸ್ ತಂಡವು ಬಹುಮಾನ ಪಡೆದಿವೆ.* ವಿವಿಧ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶ, ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳ ಸ್ತಬ್ಧಚಿತ್ರಗಳು 76ನೇ ಗಣರಾಜ್ಯೋತ್ಸವದ ಪರೇಡ್ನಲ್ಲಿ ಪಾಲ್ಗೊಂಡಿದ್ದವು. ಇವುಗಳಲ್ಲಿ ಅತ್ಯುತ್ತಮವಾದದ್ದನ್ನು ಆಯ್ಕೆ ಮಾಡಲು ಮೂವರು ತೀರ್ಪುಗಾರರನ್ನೊಳಗೊಂಡ ತಂಡವನ್ನು ರಕ್ಷಣಾ ಸಚಿವಾಲಯ ರಚಿಸಿತ್ತು. ಇದರೊಂದಿಗೆ ಆನ್ಲೈನ್ ಮೂಲಕ ಮತ ಹಾಕಲು ಸಾರ್ವಜನಿಕರಿಗೆ 2 ದಿನಗಳ ಅವಕಾಶ ನೀಡಲಾಗಿತ್ತು. * ಸಿಆರ್ಪಿಎಫ್ಗೆ ಅತ್ಯುತ್ತಮ ಪಥ ಸಂಚಲನ ತಂಡ ಹಾಗೂ ಸಚಿವಾಲಯದ ಸ್ತಬ್ಧಚಿತ್ರಗಳಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆ ಬಹುಮಾನ ಪಡೆದಿವೆ. ಮೂರು ರಕ್ಷಣಾ ದಳಗಳಲ್ಲಿ ಜಮ್ಮು ಮತ್ತು ಕಾಶ್ಮೀರ ರೈಫಲ್ಸ್ ಅತ್ಯುತ್ತಮ ಪಥಸಂಚಲನ ನಡೆಸಿದ ತಂಡ ಎಂದು ರಕ್ಷಣಾ ಸಚಿವಾಲಯ ಹೇಳಿದೆ.