* ದೇಶದಾದ್ಯಂತ ಸುಮಾರು 3.5 ಲಕ್ಷ ಎಸ್ಟಿ ವಿದ್ಯಾರ್ಥಿಗಳಿಗೆ ಲಾಭವಾಗುವಂತೆ, ಕೇಂದ್ರ ಸರ್ಕಾರ 728 ಏಕಲವ್ಯ ಮಾದರಿ ವಸತಿ ಶಾಲೆಗಳನ್ನು ಸ್ಥಾಪಿಸುವ ಯೋಜನೆಯನ್ನು ರೂಪಿಸಿದೆ.* ಇದುವರೆಗೆ 721 ಶಾಲೆಗಳಿಗೆ ಅನುಮೋದನೆ ನೀಡಲಾಗಿದ್ದು, 477 ಶಾಲೆಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ.* ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿದ ಬುಡಕಟ್ಟು ವ್ಯವಹಾರಗಳ ರಾಜ್ಯ ಸಚಿವ ದುರ್ಗಾದಾಸ್ ಉಯಿಕೆ, ಈ ಶಾಲೆಗಳ ಕೇಂದ್ರ ನಿಯೋಜಿತ ಯೋಜನೆಯನ್ನು 2018-19ರಲ್ಲಿ ಪ್ರಾರಂಭಿಸಲಾಗಿದ್ದು, ಅದು ಬುಡಕಟ್ಟು ಮಕ್ಕಳಿಗೆ ಅವರ ಸಾಂಸ್ಕೃತಿಕ ವಾತಾವರಣದಲ್ಲಿಯೇ ಶಿಕ್ಷಣ ನೀಡುವ ಉದ್ದೇಶ ಹೊಂದಿದೆ ಎಂದು ಹೇಳಿದರು.* ಈ ಯೋಜನೆಯಡಿಯಲ್ಲಿ, ಶೇ. 50 ಕ್ಕಿಂತ ಹೆಚ್ಚು ST ಜನಸಂಖ್ಯೆ ಮತ್ತು ಕನಿಷ್ಠ 20,000 ಬುಡಕಟ್ಟು ಜನರನ್ನು ಹೊಂದಿರುವ ಬ್ಲಾಕ್ಗಳಲ್ಲಿ ಏಕಲವ್ಯ ಮಾದರಿ ವಸತಿ ಶಾಲೆ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ.* ಈ ಮಕ್ಕಳಿಗೆ ಡಿಜಿಟಲ್ ಹಾಗೂ ಕೌಶಲ್ಯಾಧಾರಿತ ಶಿಕ್ಷಣ ನೀಡಲು ಹಲವು ಸರ್ಕಾರಿ ಸಂಸ್ಥೆಗಳ ಸಹಕಾರದಿಂದ ವಿವಿಧ ಉಪಕ್ರಮಗಳು ಜಾರಿಗೆ ತರಲಾಗುತ್ತಿವೆ ಎಂದು ಅವರು ಹೇಳಿದರು.