* 128 ವರ್ಷಗಳ ನಂತರ ಮೊದಲಬಾರಿಗೆ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಸೇರಿಸಲಾಗುತ್ತಿದೆ. 2028ರಲ್ಲಿ ಲಾಸ್ ಏಂಜಲೀಸ್ನಲ್ಲಿ ನಡೆಯುವ ಒಲಿಂಪಿಕ್ಸ್ನಲ್ಲಿ ಪುರುಷರು ಮತ್ತು ಮಹಿಳೆಯರ ಕ್ರಿಕೆಟ್ ಟೂರ್ನಿ ನಡೆಯಲಿದೆ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಅಧಿಕೃತವಾಗಿ ಘೋಷಿಸಿದೆ.* ಪ್ರತಿ ವಿಭಾಗದಲ್ಲಿ 90 ಕ್ರಿಕೆಟಿಗರು ಭಾಗವಹಿಸಲಿದ್ದಾರೆ. ಈ ಮಹತ್ವದ ಬಹು-ಕ್ರೀಡಾ ಮೇಳದಲ್ಲಿ ಟಿ20 ಸ್ವರೂಪದ ಕ್ರಿಕೆಟ್ ಆಡಲಾಗುವುದು.* ಕ್ರಿಕೆಟ್ ಜೊತೆಗೆ ಸ್ಟ್ಯಾಶ್, ಫ್ಲ್ಯಾಗ್ ಫುಟ್ಬಾಲ್, ಬೇಸ್ಬಾಲ್, ಲ್ಯಾಕ್ರೋಸ್ ಕ್ರೀಡೆಗಳನ್ನೂ ಈ ಬಾರಿ ಒಲಿಂಪಿಕ್ಸ್ಗೆ ಸೇರಿಸಲಾಗಿದೆ.* ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ಗೆ ಅರ್ಹತಾ ನಿಯಮಗಳನ್ನು ಇನ್ನೂ ನಿರ್ಧರಿಸಲಾಗಿಲ್ಲ. ಟಿ20 ಮಾದರಿಯ ಕ್ರಿಕೆಟ್ ಅನ್ನು ಸುದೀರ್ಘ ದೇಶಗಳು ಆಡುತ್ತಿರುವುದರಿಂದ ಅರ್ಹತಾ ಪ್ರಕ್ರಿಯೆ ಚುರುಕಾಗಿ ನಡೆಯಬೇಕಾಗಿದೆ.* ಆತಿಥೇಯ ಯುಎಸ್ಎ ನೇರ ಪ್ರವೇಶ ಪಡೆಯುವ ಸಾಧ್ಯತೆಯಿದೆ. ಒಟ್ಟು ಆರು ತಂಡಗಳು ಭಾಗವಹಿಸಲಿವೆ.* ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) 12 ಪೂರ್ಣ ಸದಸ್ಯರ ತಂಡಗಳನ್ನು ಒಲಿಂಪಿಕ್ಸ್ ಸಮಿತಿಗೆ ಶಿಫಾರಸ್ಸು ಮಾಡಲಿದ್ದು, ಈ ತಂಡಗಳ ಶ್ರೇಯಾಂಕದ ಆಧಾರ ಮೇಲೆ 6 ತಂಡಗಳನ್ನು ಒಲಿಂಪಿಕ್ಸ್ ಅಂಗಳದಲ್ಲಿ ಕಣಕ್ಕಿಳಿಸಲಾಗುತ್ತದೆ ಎಂದು ವರದಿಯಾಗಿದೆ.* 2022ರ ಬರ್ಮಿಂಗ್ಹ್ಯಾಂ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಮಹಿಳಾ ಕ್ರಿಕೆಟ್ ಸೇರಿಸಲಾಗಿತ್ತು. ಇದರಲ್ಲಿ ಆಸ್ಟ್ರೇಲಿಯಾ ಚಿನ್ನ ಗೆದ್ದರೆ, ಭಾರತ ಬೆಳ್ಳಿ ಪಡೆದಿತ್ತು. 2023ರ ಚೀನಾದ ಹ್ಯಾಂಗ್ ಝೂನಲ್ಲಿ ನಡೆದ ಏಷ್ಯನ್ ಗೇಮ್ಸ್ನಲ್ಲಿ ಭಾರತ ಪುರುಷ ಮತ್ತು ಮಹಿಳಾ ತಂಡಗಳು ಚಿನ್ನದ ಪದಕ ಗೆದ್ದಿದ್ದವು.