* ಕನ್ನಡದ ಕಿರುಚಿತ್ರ 'ಸೂರ್ಯಕಾಂತಿ ಹೂವಿಗೆ ಮೊದಲು ಗೊತ್ತಾಗಿದ್ದು (Sunflowers Were the First Ones to Know) ಆಸ್ಕರ್ 2025ಕ್ಕೆ ಅರ್ಹತೆ ಪಡೆದಿದೆ.* ಈ ಚಿತ್ರ ನೈಜ ದೃಶ್ಯಗಳ ಕಿರುಚಿತ್ರ ವಿಭಾಗದಲ್ಲಿ ಅರ್ಹತೆ ಪಡೆದಿದೆ. ಈ ಕಿರು ಸಿನಿಮಾವನ್ನು ಫಿಲ್ಡ್ ಆ್ಯಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಫ್ಟಿಐಐ) ವಿದ್ಯಾರ್ಥಿಗಳು ಅಂತಿಮ ವರ್ಷದ ಅಧ್ಯಯನದ ಭಾಗವಾಗಿ ನಿರ್ಮಿಸಿದ್ದಾರೆ.* ಈ ಕಿರುಚಿತ್ರವನ್ನು ಮೈಸೂರಿನ ಚಿದಾನಂದ ಎಸ್. ನಾಯ್ಕ ನಿರ್ದೇಶಿಸಿದ್ದಾರೆ. ಸೂರಜ್ ಠಾಕೂರ್ ಛಾಯಾಗ್ರಹಣ, ಮನೋಜ್ ವಿ. ಎಡಿಟಿಂಗ್, ಅಭಿಷೇಕ್ ಕದಮ್ ಧ್ವನಿ ನೀಡಿದ್ದರು.* ಕಳೆದ ಮೇ ನಲ್ಲಿ ಪ್ರತಿಷ್ಠಿತ ಕಾನ್ ಚಿತ್ರೋತ್ಸವದಲ್ಲೂ ಈ ಚಿತ್ರ ಅತ್ಯುತ್ತಮ ಕಿರುಚಿತ್ರ (ಲಾ ಸಿನೆಫ್) ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದಿತ್ತು.ಇದು ಭಾರತಕ್ಕೆ ಸಿಕ್ಕ ಅತಿ ದೊಡ್ಡ ಗೌರವವಾಗಿದೆ.* ಪ್ರತಿದಿನ ಬೆಳಿಗ್ಗೆ ಸೂರ್ಯೋದಯಕ್ಕೆ ಕಾರಣವೆಂದು ಎಲ್ಲರೂ ನಂಬಿದ್ದ ಹುಂಜದೊಂದಿಗೆ ಅಜ್ಜಿ ಓಡಿಹೋಗುವ ಜನಪದ ಕಥಾವಸ್ತುವನ್ನು ಈ ಕಿರುಚಿತ್ರ ಹೊಂದಿದೆ.* ಈ ಕಿರುಚಿತ್ರದಲ್ಲಿ ಕನ್ನಡದ ಜನಪ್ರಿಯ ನಟ ಎಂ.ಎಸ್.ಜಹಾಂಗೀರ್ ಅಜ್ಜನಾಗಿ ನಟಿಸಿದ್ದಾರೆ.