* ಸಿಂಗಾಪುರದ ರೆಸಾರ್ಟ್ಸ್ ವರ್ಲ್ಡ್ ಸೆಂಟೋಸಾದಲ್ಲಿರುವ ಈಕ್ವೇರಿಯಸ್ ಹೋಟೆಲ್ನಲ್ಲಿ ನಡೆದ 2024 ರ ವಿಶ್ವ ಚೆಸ್ ಚಾಂಪಿಯನ್ಶಿಪ್ ಕೊನೆಯ ಹಾಗೂ 14ನೇ ಗೇಮ್ನಲ್ಲಿ ಗೆಲುವು ಸಾಧಿಸುವ ಮೂಲಕ ಭಾರತದ 18 ವರ್ಷದ ಗ್ರ್ಯಾಂಡ್ಮಾಸ್ಟರ್ ಡಿ ಗುಕೇಶ್ ಅವರು ವಿಶ್ವ ಚೆಸ್ ಚಾಂಪಿಯನ್ಶಿಪ್ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ.* ಭಾರತದ ಡಿ. ಗುಕೇಶ್ ವಿಶ್ವ ಚೆಸ್ ಚಾಂಪಿಯನ್ ಎನಿಸಿಕೊಂಡಿದ್ದಾರೆ. 14 ಸುತ್ತುಗಳ ಪಂದ್ಯದಲ್ಲಿ ಹಾಲಿ ವಿಶ್ವ ಚಾಂಪಿಯನ್ ಆಗಿದ್ದ ಚೀನಾದ ಡಿಂಗ್ ಲಿರೆನ್ರನ್ನು ಸೋಲಿಸುವ ಮೂಲಕ ವಿಶ್ವ ಚೆಸ್ ಚಾಂಪಿಯನ್ಷಿಪ್ ಪ್ರಶಸ್ತಿ ಗೆದ್ದಿದ್ದರು. * 13 ಪಂದ್ಯಗಳ ಅಂತ್ಯಕ್ಕೆ ಇಬ್ಬರೂ ಆಟಗಾರರು ತಲಾ 6.5 ಅಂಕ ಹೊಂದಿದ್ದರು. ಡಿಂಗ್ ಲಿರೇನ್ ಅವರು 14ನೇ ಸುತ್ತಿನ ಪಂದ್ಯದ ಕೊನೆಯಲ್ಲಿ ಮಾಡಿದ ಭಾರೀ ಪ್ರಮಾದದಿಂದ ಡಿ.ಗುಕೇಶ್ ಅವರು ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದರು. * ಚೆನ್ನೈ ಮೂಲದ ಗುಕೇಶ್ ದೊಮ್ಮರಾಜು ಇದೇ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಆ ಮೂಲಕ ವಿಶ್ವ ಚಾಂಪಿಯನ್ ಆಗಲು ಅಗತ್ಯವಿರುವ 7.5 ಅಂಕಗಳನ್ನು ಪಡೆದು ವಿಶ್ವ ಚಾಂಪಿಯನ್ ಆದರು. ಗೆಲುವಿನ ಬಳಿಕ ಗುಕೇಶ್ ಅವರಿಗೆ 21.21 ಕೋಟಿ ರೂಪಾಯಿ (2.5 ಮಿಲಿಯನ್ ಅಮೆರಿಕನ್ ಡಾಲರ್) ಬಹುಮಾನ ಲಭಿಸಿದೆ.* 18ನೇ ವಯಸ್ಸಿಗೆ ಚಾಂಪಿಯನ್ ಆಗುವ ಮೂಲಕ ಚೆಸ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಚೆಸ್ ಪಟು ಎಂಬ ದಾಖಲೆಯನ್ನು ಸೃಷ್ಟಿಸಿದ್ದಾರೆ. ಗುಕೇಶ್ ಅವರು ವಿಶ್ವನಾಥನ್ ಆನಂದ್ ನಂತರ ಕ್ಲಾಸಿಕಲ್ ಚೆಸ್ನಲ್ಲಿ ವಿಶ್ವ ಚಾಂಪಿಯನ್ ಕಿರೀಟವನ್ನು ಅಲಂಕರಿಸಿದ ಎರಡನೇ ಭಾರತೀಯ ಎನಿಸಿಕೊಂಡಿದ್ದಾರೆ.* ರಷ್ಯಾದ ದಂತಕಥೆ ಗ್ಯಾರಿ ಕಾಸ್ಪರೋವ್ ಅವರು 1985 ರಲ್ಲಿ ಅನಾಟೊಲಿ ಕಾರ್ಪೋವ್ ಅವರನ್ನು ಸೋಲಿಸುವ ಮೂಲಕ 22 ನೇ ವಯಸ್ಸಿನಲ್ಲಿ ಪ್ರಶಸ್ತಿಯನ್ನು ಗೆದ್ದ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಎಂಬ ದಾಖಲೆಯನ್ನು ಬರೆದಿದ್ದರು. ಈಗ ಆ ದಾಖಲೆಯನ್ನು ಗುಕೇಶ್ ಮುರಿದ ಕೀರ್ತಿಗೆ ಭಾಜನರಾಗಿದ್ದಾರೆ.* ವಿಶ್ವನಾಥನ್ ಆನಂದ್ ನಂತರ ಡಿ ಗುಕೇಶ್ ಅವರು ಜಾಗತಿಕ ಪ್ರಶಸ್ತಿಯನ್ನು ಗೆದ್ದ ಎರಡನೇ ಭಾರತೀಯರಾಗಿದ್ದಾರೆ. ಐದು ಬಾರಿ ವಿಶ್ವ ಚಾಂಪಿಯನ್ ಆಗಿರುವ ಆನಂದ್ ಕೊನೆಯ ಬಾರಿಗೆ 2013 ರಲ್ಲಿ ರಲ್ಲಿ ಪ್ರಶಸ್ತಿ ಗೆದ್ದಿದ್ದರು.