* ಒಮಾನ್ನ ಮಸ್ಕತ್ನಲ್ಲಿ ನಡೆದ ಪುರುಷರ ಜೂನಿಯರ್ ಏಷ್ಯಾಕಪ್ ಹಾಕಿ ಫೈನಲ್ನಲ್ಲಿ ಭಾರತ ಹಾಕಿ ತಂಡವು ಪಾಕಿಸ್ತಾನವನ್ನು 5-3 ಗೋಲುಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿದೆ. ಅರ್ಜಿತ್ ಸಿಂಗ್ ಹುಂಡಾಲ್ ಅವರ ಅದ್ಭುತ ಪ್ರದರ್ಶನ ಮತ್ತು ತಂಡದ ಆಕ್ರಮಣಕಾರಿ ಆಟ ಭಾರತದ ಗೆಲುವಿಗೆ ಕಾರಣವಾಯಿತು. * ಭಾರವು ಸತತ 3ನೇ ಹಾಗೂ ಒಟ್ಟಾರೆ 5ನೇ ಬಾರಿಗೆ ಪುರುಷರ ಜೂನಿಯರ್ ಏಷ್ಯಾಕಪ್ ಹಾಕಿ ಪ್ರಶಸ್ತಿಗೆ ಗೆದ್ದುಕೊಂಡಿದೆ. ಪಾಕಿಸ್ತಾನ ತಂಡ ಸತತ ನಾಲ್ಕನೇ ಬಾರಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟಿತು.* ಭಾರತ ಮತ್ತು ಪಾಕಿಸ್ತಾನ ತಂಡಗಳು ಆರಂಭದಿಂದಲೂ ಆಕ್ರಮಣಕಾರಿ ಆಟ ಪ್ರದರ್ಶಿಸಿದವು. ಪಂದ್ಯದ ಆರಂಭದಲ್ಲೇ ಪಾಕಿಸ್ತಾನ ಗೋಲು ಗಳಿಸುವ ಮೂಲಕ 1-0 ಮುನ್ನಡೆ ಸಾಧಿಸಿತು. ಆದರೆ ನಾಲ್ಕನೇ ನಿಮಿಷದಲ್ಲಿ ಭಾರತ ಗೋಲು ದಾಖಲಿಸಿ ಪಂದ್ಯವನ್ನು 1-1ರಲ್ಲಿ ಸಮಬಲಗೊಳಿಸಿತು. ಭಾರತದ ಪರ ಅರ್ಜಿತ್ ಸಿಂಗ್ ಹುಂಡಾಲ್ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿದರು. ಇದರಿಂದಾಗಿ ಮೊದಲ ಕ್ವಾರ್ಟರ್ ಡ್ರಾದಲ್ಲಿ ಕೊನೆಗೊಂಡಿತು.* ಎರಡನೇ ಕ್ವಾರ್ಟರ್ನಲ್ಲಿ 18ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಮತ್ತೊಮ್ಮೆ ಗೋಲಾಗಿ ಪರಿವರ್ತಿಸಿದ ಭಾರತದ ಅರಿಜಿತ್ ಸಿಂಗ್ ಹುಂಡಾಲ್ ತಂಡಕ್ಕೆ 2-1ರ ಮುನ್ನಡೆ ತಂದುಕೊಟ್ಟರು. ದಿಲ್ರಾಜ್ ಸಿಂಗ್ ಅದ್ಭುತ ಫೀಲ್ಡ್ ಗೋಲು ಗಳಿಸಿದರು. ಆದರೆ ಎರಡನೇ ಕ್ವಾರ್ಟರ್ನ ಅಂತ್ಯದ ವೇಳೆಗೆ, ಪಾಕಿಸ್ತಾನವು ಪುನರಾಗಮನವನ್ನು ಮಾಡಿ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿ ಮೊದಲಾರ್ಧವನ್ನು 3-2 ಅಂತರದೊಂದಿಗೆ ಕೊನೆಗೊಳಿಸಿದರು.* ಪಂದ್ಯದ ಮೂರನೇ ಕ್ವಾರ್ಟರ್ನಲ್ಲಿ ಪಾಕಿಸ್ತಾನ ತನ್ನ ಮೂರನೇ ಗೋಲು ಕಲೆಹಾಕುವಲ್ಲಿ ಯಶಸ್ವಿಯಾಯಿತು. ಮತ್ತೊಮ್ಮೆ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿದ ಪಾಕಿಸ್ತಾನ ಪಂದ್ಯವನ್ನು 3-3 ರಲ್ಲಿ ಸಮಬಲಗೊಳಿಸಿತು. ಇತ್ತ ಭಾರತದಿಂದ ಈ ಕ್ವಾರ್ಟರ್ನಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಆದರೆ ಕೊನೆಯ ಕ್ವಾರ್ಟರ್ನಲ್ಲಿ ಭಾರತ ತಂಡ ಆರಂಭದಲ್ಲೇ ಗೋಲು ದಾಖಲಿಸಿತು. ಪಂದ್ಯದಲ್ಲಿ ಅರಿಜಿತ್ ಸಿಂಗ್ ಹುಂದಾಲ್ ಮತ್ತೊಂದು ಗೋಲು ಬಾರಿಸಿ ಭಾರತಕ್ಕೆ 4-3 ರ ಮುನ್ನಡೆ ತಂದುಕೊಟ್ಟರು. ಇದಾದ ಬಳಿಕ ಕೊನೆಯ ಕ್ವಾರ್ಟರ್ ನಲ್ಲಿ ಭಾರತ ಮತ್ತೊಂದು ಗೋಲು ದಾಖಲಿಸಿ ಮುನ್ನಡೆಯನ್ನು 5-3ಕ್ಕೆ ಹೆಚ್ಚಿಸಿಕೊಂಡಿತು.* 2024 ರ ಪುರುಷರ ಜೂನಿಯರ್ ಏಷ್ಯಾಕಪ್ನಲ್ಲಿ ಭಾರತ ತಂಡವು ತನ್ನ ಮೊದಲ ಪಂದ್ಯದಲ್ಲಿ ಥಾಯ್ಲೆಂಡ್ ತಂಡವನ್ನು 11-0 ಅಂತರದಿಂದ ಸೋಲಿಸುವ ಮೂಲಕ ಪಂದ್ಯಾವಳಿಯನ್ನು ಪ್ರಾರಂಭಿಸಿತು. ಇದರ ನಂತರ ಜಪಾನ್ ತಂಡವನ್ನು 3-2 ಅಂತರದಿಂದ ಮತ್ತು ಚೈನೀಸ್ ತೈಪೆಯ ತಂಡವನ್ನು 16-0 ಅಂತರದಿಂದ ಸೋಲಿಸಿತು. ಅಲ್ಲದೆ ಕೊರಿಯಾ ವಿರುದ್ಧ 8-1 ಅಂತರದಿಂದ ಜಯ ಸಾಧಿಸಿತ್ತು. ಆ ಬಳಿಕ ನಡೆದ ಸೆಮಿಫೈನಲ್ನಲ್ಲಿ ಭಾರತ, ಮಲೇಷ್ಯಾ ತಂಡವನ್ನು 3-1 ಗೋಲುಗಳಿಂದ ಸೋಲಿಸಿ ಫೈನಲ್ಗೆ ಲಗ್ಗೆ ಇಟ್ಟಿತ್ತು. ಫೈನಲ್ನಲ್ಲಿ ಭಾರತ ಹಾಕಿ ತಂಡವು ಪಾಕಿಸ್ತಾನವನ್ನು 5-3 ಗೋಲುಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿದೆ. * ಮೂರನೇ ಸ್ಥಾನಕ್ಕಾಗಿ ನಡೆದ ಕ್ಲಾಸಿಫಿಕೇಷನ್ ಪಂದ್ಯದಲ್ಲಿ ಜಪಾನ್ ತಂಡ 2-1 ಗೋಲ್ಗಳ ಅಂತರದಿಂದ ಮಲೇಷ್ಯಾ ತಂಡವನ್ನು ಸೋಲಿಸಿ 3ನೇ ಸ್ಥಾನ ಪಡೆಯಿತು.