Reviews - ಸ್ಪರ್ಧಾ ಅರಿವು ಗ್ರೂಪ್-ಸಿ ವಿಶೇಷ ಪಠ್ಯಕ್ರಮ ಪುಸ್ತಕ
KPSC ಗ್ರೂಪ್-ಸಿ (Group-C) ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಸ್ಪರ್ಧಾರ್ಥಿಗಳಿಗೆಂದೇ ಸ್ಪರ್ಧಾ ಅರಿವು ಸಾರಥ್ಯದಲ್ಲಿ ಸಿದ್ಧಪಡಿಸಲಾದ ಅತ್ಯುತ್ತಮ ಕೈಪಿಡಿ ಇದಾಗಿದೆ. ಕರ್ನಾಟಕ ಲೋಕಸೇವಾ ಆಯೋಗದ ಪರಿಷ್ಕೃತ ಮತ್ತು ವಿಶೇಷ ಪಠ್ಯಕ್ರಮವನ್ನು (Group-C Special Syllabus) ಆಧರಿಸಿ ಈ ಪುಸ್ತಕವನ್ನು ಸಮಗ್ರವಾಗಿ ರಚಿಸಲಾಗಿದೆ.
ಈ ಪುಸ್ತಕದಲ್ಲಿ ಒಳಗೊಂಡಿರುವ ಪ್ರಮುಖ ವಿಷಯಗಳು:
ಪಂಚಾಯತ್ ರಾಜ್ (Panchayat Raj): ಸಂವಿಧಾನ ತಿದ್ದುಪಡಿಗಳು, ಗ್ರಾಮೀಣಾಭಿವೃದ್ಧಿ ಯೋಜನೆಗಳು ಮತ್ತು ಕರ್ನಾಟಕ ಪಂಚಾಯತ್ ರಾಜ್ ವ್ಯವಸ್ಥೆ.
ಸಹಕಾರ ಚಳವಳಿ (Cooperative Movement): ಭಾರತ ಮತ್ತು ಕರ್ನಾಟಕದ ಸಹಕಾರ ಕ್ಷೇತ್ರದ ಬೆಳವಣಿಗೆಗಳು, ಇತ್ತೀಚಿನ 5 ವರ್ಷಗಳ ಸುಧಾರಣೆಗಳು (5 Years of Cooperative Transformation).
ಭೂ ಸುಧಾರಣೆಗಳು (Land Reforms): ಭೂ ಸುಧಾರಣಾ ಕಾಯ್ದೆಗಳು, ಭೂ ಹಿಡುವಳಿ ಮತ್ತು ಕಂದಾಯ ನೀತಿಗಳು.
ಸಾಮಾಜಿಕ ವಿಷಯಗಳು (Social Issues & Welfare): ಸಮಾಜ ಕಲ್ಯಾಣ ಯೋಜನೆಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಜನಸಂಖ್ಯಾ ಅಂಕಿಅಂಶಗಳು.
ಸಾರ್ವಜನಿಕ ಆಡಳಿತ (Public Administration): ಆಡಳಿತ ವ್ಯವಸ್ಥೆ, ನಾಗರಿಕ ಸೇವೆಗಳು, ನೀತಿ ನಿರೂಪಣೆ ಮತ್ತು ಹೊಣೆಗಾರಿಕೆ.
ಇ-ಆಡಳಿತ (E-Governance): ಸರ್ಕಾರದ ಡಿಜಿಟಲ್ ಉಪಕ್ರಮಗಳು, ಪ್ರಮುಖ ಆ್ಯಪ್‌ಗಳು, ಪೋರ್ಟಲ್‌ಗಳು ಮತ್ತು ತಂತ್ರಜ್ಞಾನಾಧಾರಿತ ಸೇವೆಗಳು.
ಪುಸ್ತಕದ ಪ್ರಮುಖ ವೈಶಿಷ್ಟ್ಯಗಳು:
KPSC ಪರೀಕ್ಷಾ ಮಾದರಿಗೆ ಅನುಗುಣವಾಗಿ ಅಧ್ಯಾಯವಾರು ಸುಲಭ ವಿವರಣೆ.
ಮುಂಬರುವ KPSC Group C Non-Technical ಹಾಗೂ Technical ಪರೀಕ್ಷೆಗಳ ವಿಶೇಷ ಪತ್ರಿಕೆಗಳಿಗೆ ಪೂರಕ ಮಾಹಿತಿ.
ಸುಲಭವಾಗಿ ಅರ್ಥವಾಗುವಂತೆ ಪಾಯಿಂಟ್ಸ್, ಚಾರ್ಟ್ಸ್ ಮತ್ತು ನವೀಕೃತ ಅಂಕಿಅಂಶಗಳ ಸಂಯೋಜನೆ.

