Back
ಆರ್‌ಆರ್‌ಬಿ ಎನ್‌ಟಿಪಿಸಿ(RRB NTPC) ಹುದ್ದೆಗಳ ಪರೀಕ್ಷಾ ತಯಾರಿಗೆ ಇಲ್ಲಿದೆ 10 ಪ್ರಮುಖ ಪುಸ್ತಕಗಳು
| Published on: 14 ಮಾರ್ಚ್ 2019
rrb ntpc books for preparation
ರೈಲ್ವೆ ನೇಮಕಾತಿ ಮಂಡಳಿ ಎನ್‌ಟಿಪಿಸಿ ಹುದ್ದೆಗಳಿಗೆ ಪದವಿ ಮತ್ತು ಪದವಿಯಲ್ಲದ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಸದರಿ 35,277 ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳಿಗೆ ಸೇರಲು ಅಧಿಕ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ. ಹಾಗಾಗಿ ಪ್ರವೇಶ ಪರೀಕ್ಷೆಗೆ ತುಂಬಾನೆ ತಯಾರಿಯನ್ನು ನಡೆಸಬೇಕಿದ್ದು ನಾವಿಲ್ಲಿ ಈ ಪರೀಕ್ಷೆಗೆ ತಯಾರಿ ನಡೆಸಲು ಯಾವೆಲ್ಲಾ ಪುಸ್ತಕಗಳು ಪ್ರಮುಖವಾದವು ಎಂಬುದನ್ನ ತಿಳಿಸಲಿದ್ದೇವೆ.
ಹುದ್ದೆಗಳ ಪರೀಕ್ಷಾ ತಯಾರಿ ಪುಸ್ತಕಗಳು :
ಜನರಲ್ ಇಂಟಲಿಜೆನ್ಸ್ ಮತ್ತು ರೀಸನಿಂಗ್ ಪುಸ್ತಕಗಳು :
1 ಭೂಪೇಂದ್ರ ಕುಮಾರ್ ಸಿಂಗ್ ರವರ ಲೂಸೆಂಟ್ ರೀಸನಿಂಗ್ ಪುಸ್ತಕ 2 ಆರ್.ಎಸ್. ಅಗರವಾಲ್ ರವರ ಮಾಡರ್ನ್ ಅಪ್ರೋಚ್ ಟು ವರ್ಬಲ್ ಮತ್ತು ನಾನ್-ವರ್ಬಲ್ ರೀಸನಿಂಗ್ ಪುಸ್ತಕ 3 ಎಂ.ಕೆ ಪಾಂಡೆ ರವರ ಅನಾಲಿಟಿಕಲ್ ರೀಸನಿಂಗ್ ಜನರಲ್ ಅವೇರ್‌ನೆಸ್ 4 ಲೂಸೆಂಟ್ ಜನರಲ್ ನಾಲೆಡ್ಜ್ 5 ಅರಿಹ್ಯಾಂಟ್ ಜನರಲ್ ನಾಲೆಡ್ಜ್ 6 ಎಕ್ಸ್‌ಪರ್ಟ್ ಕಂಪಿಲೇಷನ್ಸ್ ರವರ ಅಬ್‌ಜೆಕ್ಟಿವ್ ಜನರಲ್ ಸೈನ್ಸ್ 7 ಮನೋರಮ ಅಥವಾ ಇಂಡಿಯಾ ಇಯರ್ ಬುಕ್ ಗಣಿತ 8 ಆರ್.ಎಸ್ ಅಗರ್‌ವಾಲ್ ರವರ ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಫಾರ್ ಕಾಂಪಿಟೇಟಿವ್ ಎಕ್ಸಾಮಿನೇಷನ್ಸ್ 9 ರಾಜೇಶ್ ವರ್ಮಾ- ಅರಿಹ್ಯಾಂಟರ್ ಪಬ್ಲಿಕೇಶನ್ಸ್ - ಫಾಸ್ಟ್ ಟ್ರ್ಯಾಕ್ ಅಬ್‌ಜೆಕ್ಟಿವ್ ಅರಿತ್‌ಮೆಟಿಕ್ 10 ಎಂ ಥೈರಾ -ಬಿಎಸ್‌ಸಿ ಪಬ್ಲಿಕೇಶನ್ಸ್ -ಮ್ಯಾಜಿಕಲ್ ಬುಕ್ ಆನ್ ಕ್ವಿಕರ್ ಮ್ಯಾಥ್ಸ್ ಆರ್‌ಆರ್‌ಬಿ ಎನ್‌ಟಿಪಿಸಿ
ಪುಸ್ತಕಗಳ ಆಯ್ಕೆಗೆ ಸಲಹೆಗಳು : ಈ ಮೇಲೆ ನೀಡಲಾಗಿರುವ ಪುಸ್ತಕಗಳು ಬಹು ಪ್ರಮುಖ ಪುಸ್ತಕಗಳಾಗಿದ್ದು, ಈ ಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅಭ್ಯರ್ಥಿಗಳು ಅಭ್ಯಾಸಕ್ಕಾಗಿ ಈ ಪುಸ್ತಕಗಳನ್ನು ಹೊರತುಪಡಿಸಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಇನ್ನಿತರೆ ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
* ಜನರಲ್ ಅವೇರ್‌ನೆಸ್ ವಿಷಯವು ವಿಸ್ತಾರವಾದ ಪಠ್ಯಕ್ರಮವನ್ನು ಹೊಂದಿದ್ದು, ಆರ್‌ಆರ್‌ಬಿ ಎನ್‌ಟಿಪಿಸಿ ಯ ಪರೀಕ್ಷೆಯಲ್ಲಿ ಯಾವೆಲ್ಲಾ ವಿಷಯಗಳು ಒಳಗೊಂಡಿದೆ ಮತ್ತು ಯಾವೆಲ್ಲಾ ವಿಷಯಗಳು ಒಳಗೊಂಡಿಲ್ಲ ಎನ್ನುವುದನ್ನು ಪರಿಶೀಲಿಸಿಕೊಳ್ಳಿ.
* ಅಭ್ಯರ್ಥಿಗಳು ಪ್ರಚಲಿತ ವಿದ್ಯಮಾನ ಮತ್ತು ಜನರಲ್ ಅವೇರ್‌ನೆಸ್ ಮಿಶ್ರಿತ ವಿಷಯಗಳನ್ನು ಹೊಂದಿರುವ ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳದಿರುವುದು ಒಳಿತು.
* ಗಣಿತ ಸಂಬಂಧಪಟ್ಟ ವಿಷಯಗಳಿಗೆ ಪುಸ್ತಕಗಳನ್ನು ಆಯ್ಕೆ ಮಾಡುವಾಗ ಲೆಕ್ಕದ ಪರಿಷ್ಕೃತ ವಿಸ್ತರಣೆಯು ಹೇಗೆ ನೀಡಲಾಗಿದೆ ಮತ್ತು ಶಾರ್ಟ್ ಕಟ್ ಗಳ ಮೂಲಕ ವಿಸ್ತರಣೆ ನೀಡಲಾಗಿದೆಯೇ ಇಲ್ಲವೇ ಎಂದು ಪರಿಶೀಲಿಸಿಕೊಳ್ಳಿ.ಏಕೆಂದರೆ ಸಮಯ ಉಳಿತಾಯದ ಅಗತ್ಯ ಕೂಡ ಹೆಚ್ಚಿರುತ್ತದೆ.
*ಅಭ್ಯರ್ಥಿಗಳು ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳ ಅಧ್ಯಯನ ಮಾಡುವುದರ ಜೊತೆಗೆ ಅಲ್ಲಿ ಕೇಳಲಾಗಿರುವ ಪಠ್ಯಕ್ರಮವನ್ನು ಹೊಂದಿರುವ ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳುವುದು ಒಳಿತು.
* ಈ ಪರೀಕ್ಷೆಗಳಿಗೆ ಅಭ್ಯರ್ಥಿಗಳು ಹೆಚ್ಚು ಅಭ್ಯಾಸ ಕೈಗೊಂಡಿದ್ದಲ್ಲಿ ಯಶಸ್ಸು ಲಭಿಸುವುದು.ಹಾಗಾಗಿ ಅಭ್ಯರ್ಥಿಗಳು ಗಣಿತ , ಜನರಲ್ ಇಂಟಲಿಜೆನ್ಸ್ ಮತ್ತು ರೀಸನಿಂಗ್ ವಿಷಯಗಳನ್ನು ಒಳಗೊಂಡ ಪುಸ್ತಕಗಳಲ್ಲಿನ ಸ್ಯಾಂಪಲ್ ಮತ್ತು ಪ್ರಾಕ್ಟೀಸ್ ಪೇಪರ್ ಗಳ ಅಧ್ಯಯನದಲ್ಲಿ ಕೈಗೊಂಡಲ್ಲಿ ಹೆಚ್ಚು ಉಪಯುಕ್ತವಾಗುವುದು.
References: Career India
rrb ntpc books for preparation
rrb ntpc books for preparation