Loading..!

Back
2019 ನೇ ಸಾಲಿನ ಕರ್ನಾಟಕ ರಾಜ್ಯ ಕಾರಾಗೃಹ ಇಲಾಖೆಯ ಜೈಲರ್ ಮತ್ತು ವಾರ್ಡೆರ್ ಹುದ್ದೆಗಳ ನಿರೀಕ್ಷಿತ ಕಟ್ ಆಫ್ ಅಂಕಗಳು ನಿಮಗಾಗಿ

| Published on: 26 ಆಗಸ್ಟ್ 2019

Image not found

ಕರ್ನಾಟಕ ರಾಜ್ಯ ಕಾರಾಗೃಹ ಇಲಾಖೆಯು ರಾಜ್ಯದ ಕಾರಾಗೃಹಗಳಲ್ಲಿ ಖಾಲಿ ಇರುವ ಜೈಲರ್ ಮತ್ತು ವಾರ್ಡೆರ್ ಹುದ್ದೆಗಳ ನೇಮಕಾತಿಗಾಗಿ ದಿನಾಂಕ 21-02-2019 ರಂದು ಅಧಿಸೂಚನೆ ಪ್ರಕಟಿಸಿ, ಈ ಹುದ್ದೆಗಳಿಗೆ 2019 ರ ಜೂನ್ ತಿಂಗಳಲ್ಲಿ ಲಿಖಿತ ಪರೀಕ್ಷೆ ನಡೆಸಿ, ತಾತ್ಕಾಲಿಕ ಮತ್ತು ಅಂತಿಮ ಕೀ ಉತ್ತರಗಳನ್ನು ರಾಜ್ಯ ಪೊಲೀಸ್ ಇಲಾಖೆಯು ತನ್ನ ಅಧಿಕೃತ ಜಾಲತಾಣದಲ್ಲಿ ಈಗಾಗಲೇ ಪ್ರಕಟಿಸಿದೆ.
ಈ ಸಾಮಾನ್ಯ ಪರೀಕ್ಷೆ ಬರೆದ ಅಭ್ಯರ್ಥಿಗಳ ಪೈಕಿ ಸುಮಾರು 772 ಕ್ಕೂ ಹೆಚ್ಚು ಜನ ಅಭ್ಯರ್ಥಿಗಳು(ಜೈಲರ್ ಹುದ್ದೆಗಳಿಗೆ 143 ಮತ್ತು ವಾರ್ಡೆರ್ ಹುದ್ದೆಗಳಿಗೆ 629 ) ಈಗಾಗಲೇ ತಮ್ಮ ಅಂಕಗಳನ್ನು ಪರಿಶೀಲಿಸಿ, ನಮ್ಮ(KPSCVaani) ಮೊಬೈಲ್ ಅಪ್ಲಿಕೇಶನ್ ಅಥವಾ ಜಾಲತಾಣ(website) ಬಳಸಿ ತಮ್ಮ ಅಂಕಗಳನ್ನು ನಮೂದಿಸಿದ್ದಾರೆ. ಇಲ್ಲಿ ಅಂಕಗಳನ್ನು ಮೀಸಲಾತಿ ಸಮೇತ ನಮೂದಿಸಿದ ಅಭ್ಯರ್ಥಿಗಳು ಸ್ವತಹಃ ತಾವೇ ತಮ್ಮ ಅಂಕಗಳನ್ನು ನಮೂದಿಸಿದ್ದು ಅವರಿಗೆಲ್ಲರಿಗೂ kpscvaani ಕಡೆಯಿಂದ ಧನ್ಯವಾದಗಳು.

* ಈ ಹಿಂದಿನ ಜೈಲರ್ ಮತ್ತು ವಾರ್ಡೆರ್ ಹುದ್ದೆಗಳ ನೇಮಕಾತಿಗಳ Cut-Off ಅಂಕಗಳು ಮತ್ತು ಅಭ್ಯರ್ಥಿಗಳು ಇಲ್ಲಿ ನಮೂದಿಸಿದ ಅಂಕಗಳನ್ನು ಪರಿಗಣಿಸಿ KPSC Vaani ನಿರೀಕ್ಷಿತ ಕಟ್ ಆಫ್ ಅಂಕಗಳನ್ನು ಅಂದಾಜಿಸಿ ಪ್ರಕಟಿಸಿದೆ.

------------------------------------------------------------------ Jailer-2019 expected cut off scores for NHK vacancies ------------------------------------------------------------------ GM : 164 2A : 161 2B : 160 3B : 163 SC : (158-HK) ST : 158 ------------------------------------------------------------------ Warder 2019 expected cut-offs ------------------------------------------------------------------ GM : 144 (140-HK) 2A : 137 (135-HK) 2B : 135 (-HK) 3A : 140 (136-HK) 3B : 140 (-HK) SC : 131 (130-HK) ST : 133 (-HK) C-1 : 138 (135-HK)
ವಿಶೇಷ ಸೂಚನೆಗಳು :-
* ಇಲ್ಲಿ ನೀಡಿರುವ ಕಟ್ ಆಫ್ ಅಂಕಗಳಿಗೆ +3 ಅಥವಾ -3 ಅಂಕಗಳಲ್ಲಿ ವ್ಯತಾಸವಾಗಬಹುದು, ಮತ್ತು ಕನ್ನಡ ಮಾಧ್ಯಮ, ಗ್ರಾಮೀಣ, ಮತ್ತು ಪಿಡಿಪಿ(PDP), ಮಾಜಿ ಸೈನಿಕ ಅಭ್ಯರ್ಥಿಗಳ ಅಂಕಗಳಲ್ಲಿ ಸ್ವಲ್ಪ ಹೆಚ್ಚಿನ ಅಂತರ ಕಂಡು ಬರಬಹುದು ಎಂಬುದು ನಮ್ಮ ಅಭಿಪ್ರಾಯವಾಗಿರುತ್ತದೆ.
* ಈ ಕಟ್ ಆಫ್ ಸ್ಕೋರನ್ನು 1:1 ಅನುಪಾತದಲ್ಲಿರುವಂತೆ ರಚಿಸಲಾಗಿದೆ. (ದೈಹಿಕ ಸಾಮರ್ಥ್ಯ ಪರೀಕ್ಷೆಗೆ 1:5 ಅನುಪಾತದಲ್ಲಿರುವಂತೆ ಪಟ್ಟಿ ಪ್ರಕಟವಾಗುವದರಿಂದ ನಾವು ಪ್ರಕಟಿಸಿದ ಕಟ್ ಆಫ್ ಸ್ಕೋರ್ ಇದಕ್ಕೆ ಅನ್ವಯಿಸುವದಿಲ್ಲ ಎಂಬುದು ಗಮನದಲ್ಲಿರಲಿ)
* ಅಂಕ ನಮೂದಿಸುವಾಗ ಕೆಲವು ಅಭ್ಯರ್ಥಿಗಳಿಗೆ ಗೊಂದಲಗಳು ಉಂಟಾಗಿ, ಅವರು ನಮೂದಿಸಿರುವ ಅಂಕಗಳು ಸರಿಯಾಗಿ ಇರದೇ ಇರಬಹುದು. ಹಾಗಾಗಿ ಅಭ್ಯರ್ಥಿಗಳು ನಮೂದಿಸಿದ ಅಂಕಗಳು ಸರಿಯಾಗಿವೆ ಎಂಬಹುದಕ್ಕೆ kpscvaani ಯಿಂದ ಯಾವುದೇ ಖಾತರಿ ಇಲ್ಲ.
* ನಾವು ಪ್ರಕಟಿಸಿದ ಅಂಕಗಳು ಕೇವಲ KPSCVaani ಯ ವ್ಯಯಕ್ತಿಕ ಅಭಿಪ್ರಾಯವಾಗಿದ್ದು, ಇವು ಅಂತಿಮವಾಗಿ KPD ಯು (ಕರ್ನಾಟಕ ಕಾರಾಗೃಹ ಇಲಾಖೆಯು) ಪ್ರಕಟಿಸುವ ಕಟ್-ಆಫ್ ಅಂಕಗಳೊಂದಿಗೆ ವ್ಯತ್ಯಾಸವಾಗಬಹುದು.
* ನಾವು ತಿಳಿಸಿದ ನಿರೀಕ್ಷಿಸಿದ ಕಟ್-ಆಫ್ ಅಂಕಗಳನ್ನು ಪಡೆದಿಲ್ಲವೆಂದು ಅಭ್ಯರ್ಥಿಗಳು ಯಾವುದೇ ಬೇಸರ ಪಡುವ ಅಗತ್ಯವಿಲ್ಲ ಇದು ಕೇವಲ kpscvaani ಯ ಅಭಿಪ್ರಾಯವಾಗಿದ್ದು ಇದು ಕೇವಲ ತಾತ್ಕಾಲಿಕವಾಗಿದ್ದು ಅಂತಿಮ ಅಂಕಗಳೊಂದಿಗೆ ಹೋಲಿಸಿದಾಗ ತಮ್ಮ ಅಂಕಗಳು ಕೂಡ ಪರಿಗಣನೆಗೆ ಬರಬಹುದು ಕಾರಣ ಯಾವುದೇ ನಿರಾಸೆ ಬೇಡ ಆಶಾದಾಯಕವಾಗಿರಿ.
* ನಿಮ್ಮ ಅಭಿಪ್ರಾಯಗಳನ್ನು kpscvaani@gmail.com ಗೆ ಈ-ಮೇಲ್ ಮಾಡುವ ಮೂಲಕ ತಿಳಿಸಿ. ಧನ್ಯವಾದಗಳು.