ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದ ರಾಜ್ಯದ ವಿವಿಧ ನ್ಯಾಯಾಲಯದಲ್ಲಿ ಖಾಲಿ ಇರುವ FDA ಮತ್ತು SDA ಹುದ್ದೆಗಳ ನೇಮಕಾತಿಯ ನಿರೀಕ್ಷಿತ ಕಟ್ ಆಫ್ ಅಂಕಗಳು KPSCVaani ಯಿಂದ ಪ್ರಕಟ
| Published on: 16 ಜುಲೈ 2019
KPSC FDA SDA Cut Marks :
ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದಿಂದ ರಾಜ್ಯದ ವಿವಿಧ ನ್ಯಾಯಾಲಯದಲ್ಲಿ ಖಾಲಿ ಇರುವ FDA (ಪ್ರಥಮ ದರ್ಜೆ ಸಹಾಯಕ) ಮತ್ತು SDA (ದ್ವಿತೀಯ ದರ್ಜೆ ಸಹಾಯಕ) ಹುದ್ದೆಗಳ ನೇಮಕಾತಿಗಾಗಿ ದಿನಾಂಕ 11-02-2019 ರಂದು ಅಧಿಸೂಚನೆ ಪ್ರಕಟಿಸಿ, ಈ ಹುದ್ದೆಗಳಿಗೆ 2019 ರ ಜೂನ್ ತಿಂಗಳಲ್ಲಿ ಲಿಖಿತ ಪರೀಕ್ಷೆ ನಡೆಸಿ, ಕೀ ಉತ್ತರಗಳನ್ನು KPSC ಯು ತನ್ನ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಿದೆ.
ಈ ಸಾಮಾನ್ಯ ಪರೀಕ್ಷೆ ಬರೆದ ಅಭ್ಯರ್ಥಿಗಳ ಪೈಕಿ ಸುಮಾರು 2526 ಕ್ಕೂ ಹೆಚ್ಚು ಜನ ಅಭ್ಯರ್ಥಿಗಳು ಈಗಾಗಲೇ ತಮ್ಮ ಅಂಕಗಳನ್ನು ಪರಿಶೀಲಿಸಿ, ನಮ್ಮ(KPSCVaani) ಮೊಬೈಲ್ ಅಪ್ಲಿಕೇಶನ್ ಅಥವಾ ಜಾಲತಾಣ(website) ಬಳಸಿ ತಮ್ಮ ಅಂಕಗಳನ್ನು ನಮೂದಿಸಿದ್ದಾರೆ. ಇಲ್ಲಿ ಅಂಕಗಳನ್ನು ಮೀಸಲಾತಿ ಸಮೇತ ನಮೂದಿಸಿದ ಅಭ್ಯರ್ಥಿಗಳು ಸ್ವತಹಃ ತಾವೇ ತಮ್ಮ ಅಂಕಗಳನ್ನು ನಮೂದಿಸಿದ್ದು ಅವರಿಗೆಲ್ಲರಿಗೂ kpscvaani ಕಡೆಯಿಂದ ಧನ್ಯವಾದಗಳು.
* ಈ ಹಿಂದಿನ FDA/SDA ನೇಮಕಾತಿಗಳ Cut-Off ಅಂಕಗಳು ಮತ್ತು ಇಲ್ಲಿ ಅಂಕಗಳನ್ನು ನಮೂದಿಸಿದ ಅಭ್ಯರ್ಥಿಗಳ ಅಂಕಗಳನ್ನು ಮೀಸಲಾತಿ ಸಮೇತ ಪರಿಗಣಿಸಿ KPSC Vaani ನಿರೀಕ್ಷಿತ ಕಟ್ ಆಫ್ ಅಂಕಗಳನ್ನು ಅಂದಾಜಿಸಿದೆ.
KPSC FDA SDA Cut Marks :
ವಿಶೇಷ ಸೂಚನೆಗಳು :-
* ಇಲ್ಲಿ ನೀಡಿರುವ ಕಟ್ ಆಫ್ ಅಂಕಗಳಿಗೆ +3 ಅಥವಾ -3 ಅಂಕಗಳಲ್ಲಿ ವ್ಯತಾಸವಾಗಬಹುದು, ಮತ್ತು ಕನ್ನಡ ಮಾಧ್ಯಮ, ಗ್ರಾಮೀಣ, ಮತ್ತು ಪಿಡಿಪಿ(PDP), ಮಾಜಿ ಸೈನಿಕ ಅಭ್ಯರ್ಥಿಗಳ ಅಂಕಗಳಲ್ಲಿ ಸ್ವಲ್ಪ ಹೆಚ್ಚಿನ ಅಂತರ ಕಂಡು ಬರಬಹುದು ಎಂಬುದು ನಮ್ಮ ಅಭಿಪ್ರಾಯವಾಗಿರುತ್ತದೆ.
* ಈ ಕಟ್ ಆಫ್ ಸ್ಕೋರನ್ನು 1:1 ಅನುಪಾತದಲ್ಲಿರುವಂತೆ ರಚಿಸಲಾಗಿದೆ.(ಧಾಖಲಾತಿ ಪರಿಶೀಲನೆಗೆ 1:5 ಅಥವಾ 1:3 ಅನುಪಾತದಲ್ಲಿರುವಂತೆ ಪಟ್ಟಿ ಪ್ರಕಟವಾಗುವದರಿಂದ ಕಟ್ ಆಫ್ ಸ್ಕೋರ್ ಇದಕ್ಕಿಂತ ತುಂಬಾ ಕಡಿಮೆ ಬರುತ್ತದೆ ಎಂಬುದು ಗಮನದಲ್ಲಿರಲಿ)
* ಅಂತಿಮ ಕೀ ಉತ್ತರಗಳು ಇನ್ನು ಪ್ರಕಟವಾಗಿಲ್ಲದ ಕಾರಣ ತಾತ್ಕಾಲಿಕ ಕೀ ಉತ್ತರಗಳನ್ನು ಆದರಿಸಿ ಈ ಕಟ್ ಆಫ್ ಅಂಕಗಳನ್ನು ಪಡೆಯಲಾಗಿದೆ, ಅಭ್ಯರ್ಥಿಗಳು ಅಂತಿಮ ಕೀ ಉತ್ತರಗಳು ಪ್ರಕಟವಾದ ಮೇಲೆ ಮತ್ತೆ ನಮ್ಮ ಜಾಲತಾಣಕ್ಕೆ ಭೇಟಿ ನೀಡಿ ನಿಮ್ಮ ಅಂಕೆಗಳನ್ನು Edit (ತಿದ್ದುಪಡಿ) ಮಾಡಲು ಅವಕಾಶವಿದೆ.
* ಅಂಕ ನಮೂದಿಸುವಾಗ ಕೆಲವು ಅಭ್ಯರ್ಥಿಗಳಿಗೆ ಗೊಂದಲಗಳು ಉಂಟಾಗಿ, ಅವರು ನಮೂದಿಸಿರುವ ಅಂಕಗಳು ಸರಿಯಾಗಿ ಇರದೇ ಇರಬಹುದು. ಹಾಗಾಗಿ ಅಭ್ಯರ್ಥಿಗಳು ನಮೂದಿಸಿದ ಅಂಕಗಳು ಸರಿಯಾಗಿವೆ ಎಂಬಹುದಕ್ಕೆ kpscvaani ಯಿಂದ ಯಾವುದೇ ಖಾತರಿ ಇಲ್ಲ.
* ನಾವು ಪ್ರಕಟಿಸಿದ ಅಂಕಗಳು ಕೇವಲ KPSCVaani ಯ ವ್ಯಯಕ್ತಿಕ ಅಭಿಪ್ರಾಯವಾಗಿದ್ದು, ಇವು ಅಂತಿಮವಾಗಿ KPSC ಯು (ಕರ್ನಾಟಕ ಲೋಕಸೇವಾ ಆಯೋಗವು) ಪ್ರಕಟಿಸುವ ಕಟ್-ಆಫ್ ಅಂಕಗಳೊಂದಿಗೆ ವ್ಯತ್ಯಾಸವಾಗಬಹುದು.
* ನಾವು ತಿಳಿಸಿದ ನಿರೀಕ್ಷಿಸಿದ ಕಟ್-ಆಫ್ ಅಂಕಗಳನ್ನು ಪಡೆದಿಲ್ಲವೆಂದು ಅಭ್ಯರ್ಥಿಗಳು ಯಾವುದೇ ಬೇಸರ ಪಡುವ ಅಗತ್ಯವಿಲ್ಲ ಇದು ಕೇವಲ kpscvaani ಯ ಅಭಿಪ್ರಾಯವಾಗಿದ್ದು ಇದು ಕೇವಲ
ತಾತ್ಕಾಲಿಕವಾಗಿದ್ದು ಅಂತಿಮ ಅಂಕಗಳೊಂದಿಗೆ ಹೋಲಿಸಿದಾಗ ತಮ್ಮ ಅಂಕಗಳು ಕೂಡ ಪರಿಗಣನೆಗೆ ಬರಬಹುದು ಕಾರಣ ಯಾವುದೇ ನಿರಾಸೆ ಬೇಡ ಆಶಾದಾಯಕವಾಗಿರಿ.
* ನಿಮ್ಮ ಅಭಿಪ್ರಾಯಗಳನ್ನು kpscvaani@gmail.com ಗೆ ಈ-ಮೇಲ್ ಮಾಡುವ ಮೂಲಕ ತಿಳಿಸಿ. ಧನ್ಯವಾದಗಳು. KPSC FDA SDA Cut Marks :