Back
ಸ್ಪರ್ಧಾತ್ಮಕ ಪರೀಕ್ಷೆಗೆ ಕೋಚಿಂಗ್ ನ ಅವಶ್ಯಕತೆ ಎಷ್ಟು ? ಕೋಚಿಂಗ್ ಬೇಕಾ ಅಥವಾ ಬೇಡವಾ ?
| Published on: 21 ಮೇ 2019
competitive exam preparation tips:
ಮನೆಯಲ್ಲೇ ಸಿದ್ಧತೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕಾದರೆ ಕೋಚಿಂಗ್ ಬೇಕೇ ಬೇಕು ಎನ್ನುವ ನಂಬಿಕೆ ಬಹುತೇಕ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿದೆ.
ಮನೆಯಲ್ಲೆ ತಯಾರಿ ನಡೆಸಿ : ಮನೆಯಲ್ಲಿದ್ದರೆ ತಯಾರಿ ನಡೆಸುವಾಗ ಸಾಕಷ್ಟು ಡಿಸ್ಟರ್ಬೆನ್ಸ್ ಎದುರಾಗಬಹುದು. ಇದು ಓದಿಗೆ ಭಗ್ನ ತರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಆದರೂ, ಮನಸ್ಸು ಮಾಡಿದರೆ ಮನೆಯಲ್ಲಿ ಕುಳಿತು ಓದಿ ಯಶಸ್ಸು ಪಡೆಯಬಹುದು.
ನಿಯಮಿತ ಅಧ್ಯಯನ: ಪ್ರತಿದಿನ ಇಂತಿಷ್ಟು ಗಂಟೆ ಪರೀಕ್ಷೆಗೆ ಸಿದ್ಧತೆ ಮಾಡಲೇಬೇಕು ಎಂದು ಟೈಂಟೇಬಲ್ ಹಾಕಿಕೊಳ್ಳಬೇಕು. ಕಷ್ಟಪಟ್ಟು ಸಾಕಷ್ಟು ಸಮಯವನ್ನು ಓದಲು ಮತ್ತು ವಿಷಯಗಳ ಮನನ ಮಾಡಲು ವಿನಿಯೋಗಿಸಬೇಕು. ಈ ಸಮಯದಲ್ಲಿ ನಿಮ್ಮ ಆರೋಗ್ಯ, ಡಯೆಟ್, ವಿಶ್ರಾಂತಿ ತೆಗೆದುಕೊಳ್ಳಲು ಮರೆಯಬಾರದು.
ಸಿಲೆಬಸ್ ಇರಲಿ : ನೀವು ಬರೆಯಲಿರುವ ಪರೀಕ್ಷೆಗೆ ಸಂಬಂಧಪಟ್ಟ ಸಿಲೆಬಸ್, ಕೊಶ್ಚನ್ ಪೇಪರ್‌ಗಳನ್ನು ಪಡೆದುಕೊಳ್ಳಬೇಕು. ಇಂತಹ ಸರಕುಗಳು ಯುಪಿಎಸ್‌ಸಿ, ಕೆಪಿಎಸ್‌ಸಿ ಇತ್ಯಾದಿ ವೆಬ್‌ಸೈಟ್‌ಗಳಲ್ಲೆ ದೊರಕುತ್ತದೆ. ಆಯಾ ಸಿಲೆಬಸ್‌ಗೆ ತಕ್ಕಂತಹ ಪುಸ್ತಕಗಳನ್ನು ಸಂಗ್ರಹಿಸಿಕೊಳ್ಳಬೇಕು.
ರಿವಿಷನ್ : ಎಷ್ಟು ಬಾರಿ ಸಾಧ್ಯವೋ ಅಷ್ಟು ಬಾರಿ ನೀವು ಓದಿರುವ ಸಿಲೆಬಸ್‌ಗಳನ್ನು ಓದಿಕೊಳ್ಳಿ. ವಿಷಯಗಳನ್ನು ಮತ್ತೆ ಮತ್ತೆ ಮನನ ಮಾಡಿಕೊಳ್ಳಿ. ಇದರಿಂದ ನಿಮ್ಮ ಮೆಮೊರಿ ಪವರ್ ಸಹ ಉತ್ತಮಗೊಳ್ಳುತ್ತದೆ.
ಹಳೆ ಪ್ರಶ್ನೆಪತ್ರಿಕೆ : ಈ ಹಿಂದಿನ ವರ್ಷ ನಡೆಸಿದ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳಿಗೆ ಉತ್ತರಗಳನ್ನು ಕಂಡುಹಿಡಿಯಿರಿ. ಇದರಿಂದ ನಿಮಗೆ ಸಮಯದ ನಿರ್ವಹಣೆ, ವಿಷಯದ ಕುರಿತು ಅರಿವು ಇತ್ಯಾದಿ ಅನೇಕ ಲಾಭಗಳಿವೆ.
ಹೊಸ ಪುಸ್ತಕಗಳನ್ನು ಖರೀದಿಸಿ : ನೀವು ಓದಲೇಬೇಕಾದ ಕೆಲವು ಪುಸ್ತಕಗಳನ್ನು ಖರೀದಿಸಿ. ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶಿಗಳನ್ನು ಓದಿ. ವಿಕೆ ಮಿನಿಯಲ್ಲಿ ಪ್ರಕಟಗೊಳ್ಳುವ ಪ್ರಶ್ನೊತ್ತರ, ಮಾಹಿತಿಗಳನ್ನು ಓದಿ ತಿಳಿದುಕೊಳ್ಳಿ. ಸಮೀಪದ ಲೈಬ್ರೆರಿಗಳಿಗೆ ಭೇಟಿ ನೀಡುತ್ತಿರಿ.
ಇಂಟರ್‌ನೆಟ್ ನೆರವು : ನಿಮ್ಮಲ್ಲಿ ಇಂಟರ್‌ನೆಟ್ ಸೌಲಭ್ಯವಿದ್ದರೆ ದೊಡ್ಡ ಲೈಬ್ರೆರಿ ನಿಮ್ಮ ಬಳಿ ಇದ್ದಂತೆ. ಇಂಟರ್‌ನೆಟ್ ಮೂಲಕ ನಿಮ್ಮ ಪರೀಕ್ಷೆಗೆ ಪೂರಕವಾದ ಮಾಹಿತಿಗಳನ್ನು ಪಡೆದುಕೊಂಡು ಅಧ್ಯಯನ ಮಾಡಿ. ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ವೆಬ್‌ಸೈಟ್‌ಗಳು, ಚರ್ಚಾ ತಾಣಗಳಿಗೆ ಭೇಟಿ ನೀಡುತ್ತಿರಿ.
ಸ್ಮಾರ್ಟ್‌ಫೋನ್ ಮೂಲಕ : ನಿಮ್ಮ ಕೈಯಲ್ಲಿರುವ ಪುಟ್ಟ ಮೊಬೈಲ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಪಟ್ಟ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಬಿಡುವು ಸಿಕ್ಕಾಗ ಅಧ್ಯಯನ ಮಾಡಿ. ಬಸ್, ರೈಲು ಇತ್ಯಾದಿಗಳಲ್ಲಿ ಪ್ರಯಾಣ ಕೈಗೊಂಡಾಗಲೂ ಆ್ಯಪ್ ಮೂಲಕ ಅಧ್ಯಯನ ನಡೆಸಬಹುದು. competitive exam preparation tips:
References: ವಿಜಯ ಕರ್ನಾಟಕ | Updated:Jan 1, 2018