Loading..!

Back
ಸರ್ಕಾರೀ ನೌಕರಿ ಪಡೆಯುವುದು ಕಷ್ಟಾನಾ..? ಅಥವಾ ಸುಲಭನಾ...? ಈ ಕುರಿತ ಕಿರು ಮಾಹಿತಿ ನಿಮಗಾಗಿ ಭಾಗ 1

| Published on: 30 ಡಿಸೆಂಬರ್ 2018

Image not found

competitive exam preparation in kannada

ಸ್ನೇಹಿತರೇ ನಿಮಗೆ ಸರ್ಕಾರಿ ನೌಕರಿ ಪಡೆಯಬೇಕೆಂಬ ಹಂಬಲವೇ..? ಹಾಗಿದ್ದರೆ ಹುದ್ದೆಪಡೆಯಬೇಕಾದರೆ ನಿಮ್ಮ ತಯಾರಿ ಹೇಗಿರಬೇಕು, ಹುದ್ದೆಪಡೆಯಬೇಕಾದರೆ ಈಗಿರುವ ಸ್ಪರ್ಧೆ ಏನು (Compitation) ಹೀಗೆ ಮುಂತಾದ ವಿಷಯಗಳ ಕುರಿತು ನಾವು ಇಲ್ಲಿ ನಮ್ಮ ಕೆಲ ಅಭಿಪ್ರಾಯಗಳನ್ನು ತಿಳಿಸುತ್ತೇವೆ ಇವು ನಿಮಗೆ ಸರ್ಕಾರಿ ನೌಕರಿ ಪಡೆಯಲು ಉಪಯುಕ್ತವಾದವಾಗಬಹುದೆಂದು ನಮ್ಮ ಅನಿಸಿಕೆ.

ಈಗಿನ ದಿನಗಳಲ್ಲಿ ಸರ್ಕಾರಿ ನೌಕರಿ ಪಡೆಯಲು ಎಷ್ಟೊಂದು ಸ್ಪರ್ಧೆ ಇದೆ ಎಂಬುದನ್ನು ಈ ಮೊದಲು ಗಮನಿಸೋಣ 2011 ಮಾರ್ಚ್ ಅಂತ್ಯಕ್ಕೆ ಒಳಪಟ್ಟಂತೆ ಕರ್ನಾಟಕದಲ್ಲಿ ಒಟ್ಟು 3281 ಪದವಿ ಕಾಲೇಜುಗಳಿವೆ ಇವುಗಳಲ್ಲಿ 192 ಎಂಜಿನಿಯರಿಂಗ್ ಕಾಲೇಜುಗಳು, 289 ಪಾಲಿಟೆಕ್ನಿಕ್ ಕಾಲೇಜುಗಳು, 39 ಮೆಡಿಕಲ್ ಕಾಲೇಜುಗಳು, 44 ಡೆಂಟಲ್ ಕಾಲೇಜುಗಳು, 2045 ಸಾಮಾನ್ಯ (ಜನರಲ್) ಕಾಲೇಜುಗಳು ಇಷ್ಟು ಹೊರತುಪಡಿಸಿ ನಾಲ್ಕು ವೇದಿಕ ಮತ್ತು ಸಂಸ್ಕೃತ ಕಾಲೇಜುಗಳು ಮೂರು ತೋಟಗಾರಿಕಾ ವಿಶ್ವವಿದ್ಯಾಲಯಗಳಿವೆ. ನೋಡಿ ಕೇವಲ ನಮ್ಮ ರಾಜ್ಯವಾದ ಕರ್ನಾಟಕದಲ್ಲಿ ಇಷ್ಟೊಂದು ಕಾಲೇಜುಗಳಿವೆ ಎಂದರೆ ನಮಗೆ ಖುಷಿ ನೀಡುವ ವಿಚಾರವೇ ಸರಿ ಆದರೆ ಸ್ಪರ್ಧಾತ್ಮಕವಾಗಿ ಇದನ್ನು ಗಮನಿಸಿದಾಗ ಅಭ್ಯರ್ಥಿಗಳಿಗೆ ಇದು ಖುಷಿಯ ವಿಷಯವೇ.? ಖಂಡಿತ ಆಗಿರಲಾರದು ಕಾರಣ ಪ್ರತಿ ವರ್ಷ ಪದವಿ ಪಡೆದುಕೊಳ್ಳುವರ ಸಂಖ್ಯೆಯನ್ನು ಗಮನಿಸಿ ಇಷ್ಟೊಂದು ಕಾಲೇಜುಗಳಿಂದ ಎಷ್ಟೊಂದು ವಿಧ್ಯರ್ಥಿಗಳು ಪದವಿ ಪಡೆಯಬಹುದಲ್ಲವೇ ಇವರೆಲ್ಲರೂ ಇಂದೋ ಅಥವಾ ನಾಳೆಯೋ ನಿಮ್ಮೊಟ್ಟಿಗೆ ಸರ್ಕಾರಿ ಹುದ್ದೆ ಪಡೆಯಲು ಸ್ಪರ್ಧೆಗೆ ಇಳಿದೇ ಇಳಿಯುತ್ತಾರೆ. ಇನ್ನು ಪದವಿಯನ್ನು ಮುಗಿಸಿ ಐದಾರು ವರ್ಷ ಪೂರೈಸಿದವರ ಸಂಖ್ಯೆಯಂತೂ ಹೇಳತೀರದು, ಇನ್ನು ಹೆಚ್ಚಿನ ವಿದ್ಯಾರ್ಹತೆಯಾದ ಸ್ನಾತಕೋತ್ತರ ಪದವಿ, Phd ಮಾಡಿದವರು ನಿಮ್ಮೊಟ್ಟಿಗೆ ಸ್ಪರ್ಧೆಯಲ್ಲಿದ್ದಾರೆ. ಹಾಗಂತ ರಾಜ್ಯದ ಸರ್ಕಾರಿ ಹುದ್ದೆಗಳಲ್ಲಿ ಹುದ್ದೆಗಳ ಸಂಖ್ಯೆ ಏನೂ ಹೆಚ್ಚಾಗುವುದಿಲ್ಲ. ಕಳೆದ ಸರ್ಕಾರ ಅವಧಿಯಲ್ಲಿ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದ ಹುದ್ದೆಗಳ ಸಂಖ್ಯೆ ಸುಮಾರು ಒಂದೂವರೆ ಲಕ್ಷ ಆಗಿತ್ತು, ಆದರೆ ಅವುಗಳ ನೇಮಕಕ್ಕೆ ಇನ್ನೂ ಪೂರ್ಣಗೊಂಡಿಲ್ಲ. ಅಂದರೆ ಈ ದಿನಗಳಲ್ಲಿ ನಿಮ್ಮ ತಯಾರಿ ಹೇಗಿರಬೇಕೆಂದು ನೀವೇ ಊಹಿಸಿ ಇಷ್ಟೊಂದು ಜನ ಪದವೀಧರರ ನಡುವೆ ನೀವು ಯಾವ ಮಟ್ಟಿಗೆ ತಯಾರಿ ನಡೆಸಬೇಕೆಂಬುದರ ಅರಿವು ನಿಮಗೆ ಸ್ವಲ್ಪವಾದರೂ ಅರ್ಥವಾಗಿರುತ್ತದೆ ಎಂದುಕೊಳ್ಳುತ್ತೇನೆ. ಹಾಗಾದರೆ ಈಗ ನಿಮ್ಮಲ್ಲಿ ಒಂದು ಗೊಂದಲ ಮೂರಬೇಕಲ್ಲವೇ ನಿಜವಾಗಿಯೂ ನಾನು ಸರ್ಕಾರಿ ಹುದ್ದೆ ಪಡೆಯುತ್ತದೆಯೇ ಇಷ್ಟೊಂದು ಜನ ಸ್ಪರ್ಧಾರ್ಥಿಗಳಿರುವಾಗ ಅದು ಹೇಗೆ ಸಾಧ್ಯ? ಎಂದು. ಸ್ನೇಹಿತರೇ ಸ್ಪರ್ಧೆ ಎಷ್ಟೇ ಇದ್ದರೂ ಸರ್ಕಾರಿ ಹುದ್ದೆಪಡೆಯುವುದು ನಿಮ್ಮ ತಯಾರಿ ಮತ್ತು ಸಾಧಿಸುವ ಛಲ ನಿಮ್ಮಲ್ಲಿದ್ದರೆ ಖಂಡಿತವಾಗಿಯೂ ಹುದ್ದೆ ಪಡೆಯುವುದು ತುಂಬಾ ಸರಳ ಈ ಕುರಿತು ಕೆಲ ವಿಷಯಗಳನ್ನು ಈಗ ಗಮನಿಸೋಣ ಅವುಗಳೆಂದರೆ : -
ನಿಶ್ಚಲ ಗುರಿ ಅಥವಾ ದೃಢ ಸಂಕಲ್ಪ - ಯಾವ ಹುದ್ದೆಗಾಗಿ ತಯಾರಿ ನಡೆಸಬೇಕು - ತರಬೇಕೆ ತರಬೇತಿ ಬೇಕಾ ಅಥವಾ ಬೇಡವಾ - ಪರೀಕ್ಷೆ ತಯಾರಿ ಹೇಗೆ ನಡೆಸಬೇಕು - ಸಿಲ್ಲಬಸ್ ಯಾವ ಹುದ್ದೆಗೆ ಏನೇನು - ಯಾವ ಯಾವ ಪುಸ್ತಕಗಳನ್ನು ಓದಬೇಕು - ದಿನಕ್ಕೆ ಎಷ್ಟು ಗಂಟೆ ಓದಬೇಕು ಈ ವಿಷಯಗಳ ಕುರಿತು ಒಂದೊಂದಾಗಿ ಮುಂದಿನ ಭಾಗದಲ್ಲಿ ಚರ್ಚಿಸೋಣ, ಧನ್ಯವಾದಗಳು
* ನಿಮ್ಮಲ್ಲೇನಾದರೂ ಸಂದೇಹಗಳಿಂದೆ ಕೆಳಗೆ ಕಾಮೆಂಟ್ ಮಾಡಿ ಅದನ್ನು ಮುಂದಿನ ಭಾಗದಲ್ಲಿ ಉತ್ತರಿಸಲು ಪ್ರಯತ್ನಿಸುತ್ತೇವೆ. competitive exam preparation in kannada
References: * All India Survey on Higher Education-2011-12
* India Today Jul-13-2016
*Times Of India

competitive exam preparation in kannada, competitive exam preparation in kannada