ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ರಾಜ್ಯ ನಾಗರೀಕ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ನಡೆಸಿದ ಸಾಮಾನ್ಯ ಸಾಮರ್ಥ್ಯ ಪರೀಕ್ಷೆ 2019 ರ ನಿರೀಕ್ಷಿಸಬಹುದಾದ ಕಟ್ ಆಫ್(Cut-off) ಅಂಕಗಳು
| Published on: 5 ಡಿಸೆಂಬರ್ 2019
civil constable cut off marks 2019:
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 2013 ರಾಜ್ಯ ನಾಗರೀಕ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯನ್ನು ನಡೆಸಿ ಈ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯ ಕೀ ಉತ್ತರಗಳನ್ನು ಅಧಿಕೃತವಾಗಿ ರಾಜ್ಯ ಪೊಲೀಸ ಇಲಾಖೆಯು ತನ್ನ ಜಾಲತಾಣದಲ್ಲಿ ಈಗಾಗಲೇ ಪ್ರಕಟಿಸಿದೆ.
ಈ ಸಾಮಾನ್ಯ ಪರೀಕ್ಷೆ ಬರೆದ ಅಭ್ಯರ್ಥಿಗಳು ಈಗಾಗಲೇ ತಮ್ಮ ಅಂಕಗಳನ್ನು ಪರಿಶೀಲಿಸಿ, ನಮ್ಮ ಮೊಬೈಲ್ ಅಪ್ಲಿಕೇಶನ್ ಅಥವಾ ಜಾಲತಾಣ ಬಳಸಿ ನಿಮ್ಮ ಅಂಕಗಳನ್ನು ನಮೂದಿಸಿದ್ದೀರಿ. ಇಲ್ಲಿ ಸುಮಾರು 2140 ಕ್ಕೂ ಹೆಚ್ಚು ಅಭ್ಯರ್ಥಿಗಳು ಸ್ವತಹಃ ತಾವೇ ತಮ್ಮ ಅಂಕಗಳನ್ನು ನಮೂದಿಸಿದ್ದು ಅವರಿಗೆಲ್ಲರಿಗೂ KPSC Vaani ಕಡೆಯಿಂದ ಧನ್ಯವಾದಗಳು.
ನಾವು ಈ ಕಟ್ ಆಫ್ ಅಂಕಗಳನ್ನು ಅಭ್ಯರ್ಥಿಗಳು ನಮ್ಮ ಜಾಲತಾಣದಲ್ಲಿ ನಮೂದಿಸಿದ ಅಂಕಗಳನ್ನು ಮತ್ತು ಈ ಹಿಂದಿನ ಕಟ್ ಆಫ್ ಅಂಕಗಳನ್ನು ಗಮನದಲ್ಲಿರಿಸಿಕೊಂಡು ತಯಾರಿಸಿದ್ದೇವೆ. ಇದು ಕೇವಲ kpscvaani ಯಾ ವ್ಯಯಕ್ತಿಕ ಅಭಿಪ್ರಾಯವಾಗಿದೆ, ಎಂಬುದು ಗಮನವಿರಲಿ.
* ನಾಗರೀಕ ಪೊಲೀಸ್ ಕಾನ್ಸ್ಟೇಬಲ್ ಪುರುಷ ಹುದ್ದೆಗಳ ನಿರೀಕ್ಷಿಸಬಹುದಾದ ಕಟ್ ಆಫ್ ಅಂಕಗಳು ಈ ಕೆಳಗಿನಂತಿವೆ: >
ಜನರಲ್ ಮೆರಿಟ್ ಅಭ್ಯರ್ಥಿಗಳಿಗೆ - 71 to 75 > ಹಿಂದುಳಿದ ವರ್ಗದ(OBC) 2A ಅಭ್ಯರ್ಥಿಗಳಿಗೆ - 65 to 70 > ಹಿಂದುಳಿದ ವರ್ಗದ(OBC) 2B ಅಭ್ಯರ್ಥಿಗಳಿಗೆ - 63 to 68 > ಹಿಂದುಳಿದ ವರ್ಗದ(OBC) 3A ಅಭ್ಯರ್ಥಿಗಳಿಗೆ - 65 to 70 > ಹಿಂದುಳಿದ ವರ್ಗದ(OBC) 3B ಅಭ್ಯರ್ಥಿಗಳಿಗೆ - 65 to 69 > SC ಅಭ್ಯರ್ಥಿಗಳಿಗೆ - 62 to 67 > ST ಅಭ್ಯರ್ಥಿಗಳಿಗೆ - 62 to 68 > CAT-1 ಅಭ್ಯರ್ಥಿಗಳಿಗೆ - 64 to 69
* ನಾಗರೀಕ ಪೊಲೀಸ್ ಕಾನ್ಸ್ಟೇಬಲ್ ಮಹಿಳೆ ಹುದ್ದೆಗಳ ನಿರೀಕ್ಷಿಸಬಹುದಾದ ಕಟ್ ಆಫ್ ಅಂಕಗಳು ಈ ಕೆಳಗಿನಂತಿವೆ: >
ಜನರಲ್ ಮೆರಿಟ್ ಅಭ್ಯರ್ಥಿಗಳಿಗೆ - 60 to 65 > ಹಿಂದುಳಿದ ವರ್ಗದ(OBC) 2A ಅಭ್ಯರ್ಥಿಗಳಿಗೆ - 54 to 57 > ಹಿಂದುಳಿದ ವರ್ಗದ(OBC) 2B ಅಭ್ಯರ್ಥಿಗಳಿಗೆ - 52 to 55 > ಹಿಂದುಳಿದ ವರ್ಗದ(OBC) 3A ಅಭ್ಯರ್ಥಿಗಳಿಗೆ - 53 to 56 > ಹಿಂದುಳಿದ ವರ್ಗದ(OBC) 3B ಅಭ್ಯರ್ಥಿಗಳಿಗೆ - 55 to 60 > SC ಅಭ್ಯರ್ಥಿಗಳಿಗೆ - 50 to 55 > ST ಅಭ್ಯರ್ಥಿಗಳಿಗೆ - 52 to 56 > CAT-1 ಅಭ್ಯರ್ಥಿಗಳಿಗೆ - 53 to 57
ವಿಶೇಷ ಸೂಚನೆಗಳು :-
* ನಾವು ಸಾಮಾನ್ಯವಾಗಿ ರಾಜ್ಯದ ಎಲ್ಲ ಅಭ್ಯರ್ಥಿಗಳಿಂದ ಅಂಕಗಳನ್ನು ಸಂಗ್ರಹಿಸಿದ್ದೇವೆ. ಆದರೆ ಜಿಲ್ಲಾವಾರು ಕಟ್ ಆಫ್ ಅಂಕಗಳು ಬೇರೆ-ಬೇರೆಯಾಗಿರುತ್ತವೆ ಹಾಗಾಗಿ ನಾವು ಪ್ರಕಟಿಸಿದ ಕಟ್-ಆಫ್ ಅಂಕಗಳನ್ನು ಸಾಮಾನ್ಯವಾಗಿ ಪರಿಗಣಿಸಿ, ಇದು ನಿರ್ದಿಷ್ಟವಾಗಿ ಯಾವುದೇ ಜಿಲ್ಲೆಗೆ ಅನ್ವಯಿಸುವದಿಲ್ಲ.
* ಕನ್ನಡ ಮಾಧ್ಯಮ, ಗ್ರಾಮೀಣ, ಮತ್ತು ಪಿಡಿಪಿ(PDP), ಮಾಜಿ ಸೈನಿಕ ಅಭ್ಯರ್ಥಿಗಳ ಅಂಕಗಳು ವ್ಯತ್ಯಾಸವಾಗಬಹುದು.
* ಈ ಕಟ್ ಆಫ್ ಸ್ಕೋರನ್ನು 1 : 1 ಅನುಪಾತದಲ್ಲಿರುವಂತೆ ರಚಿಸಲಾಗಿದೆ.(ದೈಹಿಕ ಪರೀಕ್ಷೆಗೆ 1:5 ಅನುಪಾತದಲ್ಲಿರುವಂತೆ ಪಟ್ಟಿ ಪ್ರಕಟವಾಗುವದರಿಂದ ಕಟ್ ಆಫ್ ಸ್ಕೋರ್ ಇದಕ್ಕಿಂತ ತುಂಬಾ ಕಡಿಮೆ ಬರುತ್ತದೆ)
* ಅಂಕ ನಮೂದಿಸುವಾಗ ಕೆಲವು ಅಭ್ಯರ್ಥಿಗಳಿಗೆ ಗೊಂದಲಗಳು ಉಂಟಾಗಿ, ಅವರು ನಮೂದಿಸಿರುವ ಅಂಕಗಳು ಸರಿಯಾಗಿ ಇರದೇ ಇರಬಹುದು. ಹಾಗಾಗಿ ಅಭ್ಯರ್ಥಿಗಳು ನಮೂದಿಸಿದ ಅಂಕಗಳು ಸರಿಯಾಗಿವೆ ಎಂಬ ನಿಖರತೆ ಇಲ್ಲ.
* ನಾವು ಪ್ರಕಟಿಸಿದ ಅಂಕಗಳು ಕೇವಲ KPSCVaani ಯ ಅಭಿಪ್ರಾಯವಾಗಿದ್ದು, ಇವು ಅಂತಿಮವಾಗಿ KSPಯು (ಕರ್ನಾಟಕ ಸ್ಟೇಟ್ ಪೊಲೀಸ್ ಡಿಪಾರ್ಟಮೆಂಟ್) ಪ್ರಕಟಿಸುವ ಕಟ್-ಆಫ್ ಅಂಕಗಳೊಂದಿಗೆ ವ್ಯತ್ಯಾಸವಾಗಬಹುದು.
* ನಿರೀಕ್ಷಿಸಿದ ಕಟ್-ಆಫ್ ಅಂಕಗಳನ್ನು ಪಡೆದಿಲ್ಲವೆಂದು ಅಭ್ಯರ್ಥಿಗಳು ಯಾವುದೇ ಬೇಸರ ಪಡುವ ಅಗತ್ಯವಿಲ್ಲ ಇದು ಕೇವಲ ತಾತ್ಕಾಲಿಕವಾಗಿದ್ದು ಅಂತಿಮ ಅಂಕಗಳೊಂದಿಗೆ ಹೋಲಿಸಿದಾಗ ತಮ್ಮ ಅಂಕಗಳು ಕೂಡ ಪರಿಗಣನೆಗೆ ಬರಬಹುದು.
* ನಿಮ್ಮ ಅಭಿಪ್ರಾಯಗಳನ್ನು kpscvaani@gmail.com ಗೆ ಈ-ಮೇಲ್ ಮಾಡುವ ಮೂಲಕ ತಿಳಿಸಿ. ಧನ್ಯವಾದಗಳು.
* previous selection lists from the official website of Karnataka state police
civil constable cut off marks 2019: