Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಖೇಲೋ ಇಂಡಿಯಾ ಬೀಚ್ ಗೇಮ್ಸ್ 2ನೇ ಆವೃತ್ತಿ: ದಿಯುನಲ್ಲಿ ಜನವರಿ 5 ರಿಂದ ಕ್ರೀಡಾ ಸಂಭ್ರಮ!
23 ಡಿಸೆಂಬರ್ 2025
* ಭಾರತದ ಕ್ರೀಡಾ ನಕ್ಷೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿರುವ
ಖೇಲೋ ಇಂಡಿಯಾ ಬೀಚ್ ಗೇಮ್ಸ್ನ ಎರಡನೇ ಆವೃತ್ತಿಯು (2nd edition of Khelo India Beach Games)
ಜನವರಿ 5 ರಿಂದ 10 ರವರೆಗೆ ಕೇಂದ್ರಾಡಳಿತ ಪ್ರದೇಶವಾದ ದಿಯುನ (Diu) ಪ್ರಸಿದ್ಧ ಬ್ಲೂ ಫ್ಲ್ಯಾಗ್
ಘೋಘ್ಲಾ ಬೀಚ್
ನಲ್ಲಿ (Ghoghla Beach) ನಡೆಯಲಿದೆ.
ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ
ಮನ್ಸುಖ್ ಮಂಡಾವೀಯ
ಅವರು ಈ ಕ್ರೀಡಾಕೂಟದ ಕುರಿತು ಮಾಹಿತಿ ಹಂಚಿಕೊಂಡಿದ್ದು, ಇದು 2026ರ ಖೇಲೋ ಇಂಡಿಯಾ ವಾರ್ಷಿಕ ಸ್ಪರ್ಧಾತ್ಮಕ ಕ್ಯಾಲೆಂಡರ್ಗೆ ಅಧಿಕೃತ ಚಾಲನೆ ನೀಡುವ ಮಹತ್ವದ ಕಾರ್ಯಕ್ರಮವಾಗಲಿದೆ ಎಂದು ತಿಳಿಸಿದ್ದಾರೆ.
*
ಘೋಘ್ಲಾ ಬೀಚ್, ದಿಯುದಲ್ಲಿ
ಜನವರಿ
5ರಿಂದ 10, 2026ರವರೆಗೆ
ನಡೆಯಲಿರುವ ಈ ಕ್ರೀಡಾಕೂಟದಲ್ಲಿ ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 800ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆಯಿದ್ದು, ಕಾರ್ಯಕ್ರಮದ ಯಶಸ್ವಿ ಆಯೋಜನೆಗಾಗಿ 200ಕ್ಕೂ ಹೆಚ್ಚು ತಾಂತ್ರಿಕ ಅಧಿಕಾರಿಗಳು ಹಾಗೂ 250ಕ್ಕೂ ಹೆಚ್ಚು ಸಹಾಯಕ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.
* ಈ ಬೀಚ್ ಗೇಮ್ಸ್ನಲ್ಲಿ ಸಾಂಪ್ರದಾಯಿಕ ಹಾಗೂ ಆಧುನಿಕ ಕ್ರೀಡೆಗಳ ಸಮ್ಮಿಲನವಾಗಿದ್ದು, ಪ್ರಮುಖವಾಗಿ
ಬೀಚ್ ಫುಟ್ಬಾಲ್, ಬೀಚ್ ವಾಲಿಬಾಲ್, ಬೀಚ್ ಸೆಪಕ್ ಟಕ್ರಾ, ಬೀಚ್ ಕಬಡ್ಡಿ, ಪೆನ್ಸಾಕ್ ಸಿಲಾಟ್ ಮತ್ತು ಓಪನ್ ವಾಟರ್ ಈಜು ಎಂಬ ಆರು ಸ್ಪರ್ಧಾತ್ಮಕ ಕ್ರೀಡೆಗಳು
ಒಳಗೊಂಡಿರುತ್ತವೆ.
ಪ್ರದರ್ಶನ ಕ್ರೀಡೆಗಳು (Demonstration Sports):
ಈ ಬಾರಿಯ ವಿಶೇಷ ಆಕರ್ಷಣೆಯಾಗಿ
ಮಲ್ಲಖಂಬ
ಮತ್ತು
ಹಗ್ಗಜಗ್ಗಾಟ (Tug of War)
ಕ್ರೀಡೆಗಳನ್ನು ಪ್ರದರ್ಶನ ಕ್ರೀಡೆಗಳಾಗಿ ಆಯೋಜಿಸಲಾಗಿದೆ.
* ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ದೃಷ್ಟಿಯಿಂದ ಮಹತ್ವದ ವಿಷಯವೆಂದರೆ
ಖೇಲೋ ಇಂಡಿಯಾ ಯೋಜನೆ
2018ರಲ್ಲಿ ಭಾರತದ ಕ್ರೀಡಾ ಸಂಸ್ಕೃತಿಯನ್ನು ತಳಮಟ್ಟದಿಂದ ಪುನಶ್ಚೇತನಗೊಳಿಸುವ ಉದ್ದೇಶದಿಂದ ಪ್ರಾರಂಭಿಸಲಾಯಿತು;
ಖೇಲೋ ಇಂಡಿಯಾ ಬೀಚ್ ಗೇಮ್ಸ್ನ ಪ್ರಥಮ ಆವೃತ್ತಿ 2025ರಲ್ಲಿ ದಿಯುನಲ್ಲಿ
ಯಶಸ್ವಿಯಾಗಿ ನಡೆಯಿತು ಮತ್ತು ಅದರಲ್ಲಿ
ಮಣಿಪುರ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ
ಪಡೆದಿತ್ತು; ಈ ಬಾರಿ ಆಯ್ಕೆಯಾದ
ಘೋಘ್ಲಾ ಬೀಚ್ ‘ಬ್ಲೂ ಫ್ಲ್ಯಾಗ್’ ಅಂತರಾಷ್ಟ್ರೀಯ ಪ್ರಮಾಣಪತ್ರ ಪಡೆದಿರುವ ಪರಿಸರ ಸ್ನೇಹಿ ಕಡಲತೀರ
ವಾಗಿದ್ದು, ಈ ಬೀಚ್ ಗೇಮ್ಸ್ನ ಮುಖ್ಯ
ಉದ್ದೇಶಗಳು ಬೀಚ್ ಕ್ರೀಡೆಗಳ ಉತ್ತೇಜನ, ಕರಾವಳಿ ಪ್ರವಾಸೋದ್ಯಮ ವೃದ್ಧಿ ಮತ್ತು ಯುವ ಕ್ರೀಡಾಪಟುಗಳಿಗೆ ರಾಷ್ಟ್ರಮಟ್ಟದ ವೇದಿಕೆ ಒದಗಿಸುವುದು
ಆಗಿವೆ.
ನೆನಪಿಡಿ:
2024ರ ಮೊದಲ ಆವೃತ್ತಿಯಲ್ಲಿ ಕರ್ನಾಟಕದ ಕ್ರೀಡಾಪಟುಗಳು ಕೂಡ ಓಪನ್ ವಾಟರ್ ಈಜು ವಿಭಾಗದಲ್ಲಿ ಪದಕಗಳನ್ನು ಗೆಲ್ಲುವ ಮೂಲಕ ಗಮನ ಸೆಳೆದಿದ್ದರು. ಈ ಬಾರಿ ಮತ್ತಷ್ಟು ಕನ್ನಡಿಗರು ಮಿಂಚುವ ನಿರೀಕ್ಷೆಯಿದೆ.
Take Quiz
Loading...