Loading..!

ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Basavaraj Halli | Date:Jan. 11, 2020
not found
ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್ (KRCL) ಇಲ್ಲಿ ಖಾಲಿ ಇರುವ CAD ಡಿಸೈನರ್ ಮತ್ತು ಎಂಜಿನಿಯರಿಂಗ್ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.
ಈ ಹುದ್ದೆಗಳಿಗೆ ದಿನಾಂಕ ಜನವರಿ 17, 2020 ರಂದು ನೇರ ಸಂದರ್ಶನ ನಡೆಯಲಿದೆ.

ಈ ಹುದ್ದೆಗಳ ಸಂದರ್ಶನದಲ್ಲಿ ಭಾಗವಹಿಸಲು ಅಭ್ಯರ್ಥಿಗಳು ಸಿವಿಲ್ ಎಂಜಿನಿಯರಿಂಗ್ ನಲ್ಲಿ ಬಿಇ/ಬಿಟೆಕ್ ಅಥವಾ ಡಿಪ್ಲೊಮಾ ವ್ಯಾಸಂಗ ಮಾಡಿರಬೇಕು ಹಾಗೂ ಪ್ರಥಮ ದರ್ಜೆಯಲ್ಲಿ ಪಾಸಾಗಿರಬೇಕು.
ಡಿಪ್ಲೊಮಾ ಅಭ್ಯರ್ಥಿಗಳಲ್ಲಿ ಆರು ವರ್ಷ ಮತ್ತು ಪದವೀಧರ ಅಭ್ಯರ್ಥಿಗಳಲ್ಲಿ ಎರಡು ವರ್ಷಗಳ ಸೇವಾನುಭವವನ್ನು ಹೊಂದಿರುವುದು ಕಡ್ಡಾಯವಾಗಿದೆ.

ಸಂದರ್ಶನ ನಡೆಯುವ ಸ್ಥಳ ಈ ಕೆಳಗಿನಂತಿದೆ:
office of Chief Electrical
Engineer/USBRL, Flat No.806,
8th floor, Antriksh Bhawan,
22 Kasturba Gandhi Marg,
New Delhi-110001

ಅಭ್ಯರ್ಥಿಗಳು ಈ ಅಧಿಸೂಚನೆ ಕುರಿತು ಹೆಚ್ಚಿನ ವಿವರಗಳನ್ನು ಪಡೆಯಲು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ ಲೋಡ್ ಮಾಡಿಕೊಂಡು ಓದಬಹುದಾಗಿದೆ.
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments

Sudha Malagi Jan. 11, 2020, 2 p.m.