ಕೇಂದ್ರೀಯ ಮೀಸಲು ಪೊಲೀಸ್ ಪಡೆಯಲ್ಲಿ (CRPF) ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ

ಕೇಂದ್ರ ಮೀಸಲು ಪೊಲೀಸ್ ಪಡೆಯ (CRPF) ಅಧಿಕೃತ ಅಧಿಸೂಚನೆಯ ಪ್ರಕಾರ, ಪಶುವೈದ್ಯಕೀಯ ವೈದ್ಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಡಿಶಾ, ಕರ್ನಾಟಕ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ ರಾಜ್ಯಗಳಲ್ಲಿ ಈ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಆಸಕ್ತರು 05 ಮಾರ್ಚ್ 2025ರಂದು ನಡೆಯುವ ವಾಕ್-ಇನ್ ಸಂದರ್ಶನದಲ್ಲಿ ಭಾಗವಹಿಸಬಹುದು.
ಹುದ್ದೆಗಳ ವಿವರ:
- ಸಂಸ್ಥೆ : ಕೇಂದ್ರ ಮೀಸಲು ಪೊಲೀಸ್ ಪಡೆ (CRPF)
- ಹುದ್ದೆಗಳ ಸಂಖ್ಯೆ : 15
- ಹುದ್ದೆಯ ಹೆಸರು : ಪಶುವೈದ್ಯಕೀಯ ವೈದ್ಯರು
ಅರ್ಹತಾ ಪ್ರಮಾಣಗಳು :
- ಶೈಕ್ಷಣಿಕ ಅರ್ಹತೆ : ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಡಿಗ್ರಿ, B.V.Sc ಪದವಿ ಹೊಂದಿರಬೇಕು.
ವಯೋಮಿತಿ : 70 ವರ್ಷಗಳೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
- ವಯೋಮಿತಿಗೆ ರಿಯಾಯಿತಿ : ಕೇಂದ್ರ ಮೀಸಲು ಪೊಲೀಸ್ ಪಡೆಯ ನಿಯಮಾವಳಿಗಳ ಪ್ರಕಾರ.
ಆಯ್ಕೆ ಪ್ರಕ್ರಿಯೆ :
- ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.
ವೇತನ ಶ್ರೇಣಿ :
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ ರೂ. 75,000/- ವೇತನವನ್ನು ನಿಗದಿಪಡಿಸಲಾಗಿದೆ.
ವಾಕ್-ಇನ್ ಸಂದರ್ಶನ ನಡೆಯುವ ಸ್ಥಳ :
1. ಶ್ರೀನಗರ ಸೆಕ್ಟರ್, ಕಾಶ್ಮೀರ : ಗ್ರೂಪ್ ಸೆಂಟರ್, CRPF, ಶ್ರೀನಗರ, ಹಂಹಾಮಾ ಕ್ಯಾಂಪ್, ಶ್ರೀನಗರ, J&K 190007.
2. ಜಮ್ಮು ಸೆಕ್ಟರ್ : ಕಾಂಪೊಸಿಟ್ ಆಸ್ಪತ್ರೆ, CRPF, ಬಂಟಲಾಬ್, ಜಮ್ಮು, J&K – 181123
3. M&N ಸೆಕ್ಟರ್ : ಕಾಂಪೊಸಿಟ್ ಆಸ್ಪತ್ರೆ, CRPF, GC ಕ್ಯಾಂಪಸ್, ಇಂಪಾಲ್, ಪೋಲಾಂಜಿಂಗ್, ಮಣಿಪುರ - 795113
4. ಒಡಿಶಾ ಸೆಕ್ಟರ್ : ಕಾಂಪೊಸಿಟ್ ಆಸ್ಪತ್ರೆ, CRPF, GC ಕ್ಯಾಂಪಸ್, ನಯಾಪಳ್ಳಿ, ಭುವನೇಶ್ವರ, ಒಡಿಶಾ 751011
5. ಚೈಬಾಸಾ : ಕಾಂಪೊಸಿಟ್ ಆಸ್ಪತ್ರೆ, CRPF, GC ಕ್ಯಾಂಪಸ್, ಸೆಂಬೋ, ರಾಂಚಿ, ಜಾರ್ಖಂಡ್ 834004
6. ಗಡಚಿರೋಲಿ : ಕಾಂಪೊಸಿಟ್ ಆಸ್ಪತ್ರೆ, CRPF, ಹಿಂಗಾ ರಸ್ತೆ, ನಾಗ್ಪುರ, ಮಹಾರಾಷ್ಟ್ರ – 440019
7. ಬೆಂಗಳೂರು : ಕಾಂಪೊಸಿಟ್ ಆಸ್ಪತ್ರೆ, CRPF, GC ಕ್ಯಾಂಪಸ್, ಬೆಂಗಳೂರು
ಪ್ರಮುಖ ದಿನಾಂಕಗಳು :
- ಅಧಿಸೂಚನೆ ಬಿಡುಗಡೆ : 06-02-2025
- ವಾಕ್-ಇನ್ ಸಂದರ್ಶನ ದಿನಾಂಕ : 05-03-2025
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ನಿಗದಿತ ದಿನಾಂಕ ಮತ್ತು ಸ್ಥಳದಲ್ಲಿ ವಾಕ್-ಇನ್ ಸಂದರ್ಶನದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ CRPF ಅಧಿಕೃತ ವೆಬ್‌ಸೈಟ್ ಸಂದರ್ಶಿಸಬಹುದು.
Comments