Loading..!

KPSCಯಿಂದ PDO ಹುದ್ದೆಗಳ ಲಿಖಿತ ಪರೀಕ್ಷಯ ತಾತ್ಕಾಲಿಕ ಸರಿ ಉತ್ತರಗಳು ಇದೀಗ ಪ್ರಕಟ | ಈ ಕುರಿತ ಮಾಹಿತಿ ನಿಮಗಾಗಿ
Published by: Yallamma G | Date:Nov. 20, 2024
Image not found

ಕರ್ನಾಟಕ ಲೋಕಸೇವಾ ಆಯೋಗವು ದಿನಾಂಕ 15-03-2024 ರಂದು ಅಧಿಸೂಚಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) 97 ಹೈದ್ರಾಬಾದ್-ಕರ್ನಾಟಕ ಗ್ರೂಪ್-'ಸಿ' ವೃಂದದ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿ ಆನ್ ಲೈನ್ ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. 


        ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಹುದ್ದೆಗಳ ನೇಮಕಾತಿಯ ಮುಂದಿನ ಹಂತವಾದ ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ದಿನಾಂಕ 16-11-2024 ಮತ್ತು 17-11-2024ರಂದು ರಾಜ್ಯ ವಿವಿಧ ಕೇಂದ್ರಗಳಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ಸದರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ KPSC ಇಲಾಖೆಯು ತನ್ನ ಜಾಲತಾಣದಲ್ಲಿ ಲಿಖಿತ ಪರೀಕ್ಷೆಯ ಪತ್ರಿಕೆ-1&2 ರ ಪ್ರಶ್ನೆ ಪತ್ರಿಕೆಗಳ ತಾತ್ಕಾಲಿಕ ಸರಿ ಉತ್ತರಗಳನ್ನು ಪ್ರಕಟಿಸಿದೆ. ಆಸಕ್ತ ಅಭ್ಯರ್ಥಿಗಳು ಇಲಾಖಾ ಜಾಲತಾಣಕ್ಕೆ ಭೇಟಿ ನೀಡಿ  ತಾತ್ಕಾಲಿಕ ಸರಿ ಉತ್ತರವನ್ನು ಡೌನ್ ಲೋಡ್ (Download) ಮಾಡಿಕೊಳ್ಳಬಹುದಾಗಿದೆ.


               ಪ್ರಕಟಿಸಲಾದ ತಾತ್ಕಾಲಿಕ ಸರಿ ಉತ್ತರಗಳಿಗೆ ಏನಾದರು ಆಕ್ಷೇಪಣೆಗಳಿದ್ದಲ್ಲಿ ದಿನಾಂಕ 26-11-2024 ರಂದು ಸಂಜೆ 05:30 ರೊಳಗಾಗಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಕೀ-ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಅರ್ಜಿಯೊಂದಿಗೆ ಪ್ರತಿ ಪ್ರಶ್ನೆಗೆ ರೂ.50/-ರಂತೆ ಶುಲ್ಕವನ್ನು (ಐ.ಪಿ.ಓ. ಅಥವಾ ಡಿ.ಡಿ. ಮೂಲಕ) ಕಾರ್ಯದರ್ಶಿಗಳು, ಕರ್ನಾಟಕ ಲೋಕಸೇವಾ ಆಯೋಗ, ಇವರ ಹೆಸರಿಗೆ ಸಂದಾಯ ಮಾಡಬೇಕು. ಒಂದು ವೇಳೆ ನಿಗದಿತ ಶುಲ್ಕವನ್ನು ಪಾವತಿ ಮಾಡದಿದ್ದಲ್ಲಿ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. 


* ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ತಾತ್ಕಾಲಿಕ ಸರಿ ಉತ್ತರವನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

Comments