Loading..!

ಕರ್ನಾಟಕದಲ್ಲಿ 2.76 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ – ನೇಮಕಾತಿಗೆ ನಿರೀಕ್ಷೆ|ಈ ಕುರಿತ ಮಾಹಿತಿ ನಿಮಗಾಗಿ
Published by: Bhagya R K | Date:March 5, 2025
Image not found

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಒಟ್ಟು 2,76,386 ಹುದ್ದೆಗಳು ಖಾಲಿ ಇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಮಾರ್ಚ್ 04,2025 (ಮಂಗಳವಾರ)ರಂದು ಮಾಹಿತಿ ನೀಡಿದ್ದಾರೆ. ಒಟ್ಟು 7,80,748 ಮಂಜೂರಾದ ಹುದ್ದೆಗಳ ಪೈಕಿ 5,04,362 ಹುದ್ದೆಗಳು ಮಾತ್ರ ಭರ್ತಿ ಆಗಿವೆ.


      ಕಾಂಗ್ರೆಸ್‌ನ ಶಾಸಕ ರವಿಕುಮಾರಗೌಡ (ಗಣಿಗ) ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಮುಖ್ಯಮಂತ್ರಿ, 'ಎ' ದರ್ಜೆಯ 16,017, 'ಬಿ' ದರ್ಜೆಯ 16,734, 'ಸಿ' ದರ್ಜೆಯ 1,66,021 ಮತ್ತು 'ಡಿ' ದರ್ಜೆಯ 77,614 ಹುದ್ದೆಗಳು ಖಾಲಿ ಇವೆ ಎಂದು ಮಾಹಿತಿ ನೀಡಿದ್ದಾರೆ.


     ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ಅತ್ಯಧಿಕ 70,727 ಹುದ್ದೆಗಳು ಖಾಲಿ ಇವೆ. ಈ ಇಲಾಖೆಯಲ್ಲಿ ಒಟ್ಟು 2,84,086 ಹುದ್ದೆಗಳ ಮಂಜೂರಾತಿ ಇದೆ. ಈ ಪೈಕಿ 'ಸಿ' ದರ್ಜೆ ಒಂದರಲ್ಲೇ 60,219 ಹುದ್ದೆಗಳು ಖಾಲಿ ಇವೆ.


ಖಾಲಿ ಹುದ್ದೆಗಳ ವರ್ಗಾವಣೆ:
ಎ ದರ್ಜೆ : 16,017
ಬಿ ದರ್ಜೆ : 16,734
ಸಿ ದರ್ಜೆ : 1,66,021
ಡಿ ದರ್ಜೆ : 77,614


ಇತರ ಇಲಾಖೆಗಳ ಖಾಲಿ ಹುದ್ದೆಗಳ ವಿವರ ಹೀಗಿದೆ:
ಗೃಹ ಇಲಾಖೆ - 26,168               
ಉನ್ನತ ಶಿಕ್ಷಣ ಇಲಾಖೆ - 13,227               
ಕಂದಾಯ ಇಲಾಖೆ -  11,145               
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ - 10,898               
ಪಶುಸಂಗೋಪನಾ ಇಲಾಖೆ - 10,755               
ಸಮಾಜ ಕಲ್ಯಾಣ ಇಲಾಖೆ -  9,980                
ಆರ್ಥಿಕ ಇಲಾಖೆ - 9,536                
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ  - 8,334                


ಈ ಖಾಲಿ ಹುದ್ದೆಗಳ ಭರ್ತಿಗಾಗಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಇದು ನಿರುದ್ಯೋಗ ಸಮಸ್ಯೆಯನ್ನು ತಗ್ಗಿಸಲು ಮತ್ತು ಸಾರ್ವಜನಿಕ ಸೇವೆಗಳ ಪರಿಣಾಮಕಾರಿತೆಯನ್ನು ಹೆಚ್ಚಿಸಲು ಸಹಾಯಕವಾಗಲಿದೆ.

Comments