KPSC Vaani do not provide services in mobile browsers, kindly download the application to use it.
KPSC Vaani ಯು ಈಗ ಮೊಬೈಲ್ ಬ್ರೌಸರ್ ನಲ್ಲಿ ಲಭ್ಯವಿಲ್ಲ, ಆದ್ದರಿಂದ ಈ ಕೆಳಗಿನ ಲಿಂಕ್ ನಿಂದ ಡೌನ್ಲೋಡ್ ಮಾಡಿಕೊಂಡು ಬಳಸಿ.

Life is like this loading!

We've to prepare well to perform better

SSLC ಪಾಸಾದವರಿಗಾಗಿ ಕರಾವಳಿ ರಕ್ಷಣಾ ಪಡೆಯಲ್ಲಿ ನಾವಿಕ್ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ
Image not found

Author: Savita h Date:June 15, 2019   ಭಾರತೀಯ ಕರಾವಳಿ ರಕ್ಷಣಾ ಪಡೆ ನಾವಿಕ್ ( ಡೊಮೆಸ್ಟಿಕ್ ಬ್ರಾಂಚ್-ಕುಕ್ ಅಂಡ್ ಸ್ಟೀವರ್ಡ್)ಹುದ್ದೆಗಳ ಭರ್ತಿಗೆ ಅರ್ಹ ಭಾರತೀಯ ಪುರುಷ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ವಿಭಾಗಗಳು:
(1)ಕುಕ್
(2)ಸ್ಟೀವ್ ವಾರ್ಡ್

Application Start Date:  June 5, 2019

Application End Date:  June 10, 2019

Selection Procedure:  ಸಲ್ಲಿಕೆಯಾದ ಅರ್ಜಿಗಳನ್ನು ಕೇಂದ್ರವಾರು ಅಲ್ಲಿಯೇ ಸಂಗ್ರಹಿಸಲಾಗುತ್ತದೆ. ನಂತರ ಜೂನ್/ಜುಲೈನಲ್ಲಿ ಲಿಖಿತ ಪರೀಕ್ಷೆ ನಿರ್ವಹಿಸಲಾಗುತ್ತದೆ.ಪರೀಕ್ಷಾ ಕೇಂದ್ರವಾರು ಹೆಚ್ಚು ಅಂಕ ಗಳಿಸಿದ ಅಭ್ಯರ್ಥಿಗಳ ಜೇಷ್ಠತಾ ಪಟ್ಟಿ ತಯಾರಿಸಲಾಗುತ್ತದೆ. ಅನಂತರ ಅರ್ಹ ಅಭ್ಯರ್ಥಿಗಳಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ತಪಾಸಣೆ ಇತ್ಯಾದಿ ಮಾನದಂಡಗಳನ್ನು ಆಯ್ಕೆ ಪ್ರಕ್ರಿಯೆಯಲ್ಲಿ ಅನುಸರಿಸಲಾಗುತ್ತದೆ.ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಸೆಪ್ಟೆಂಬರ್ ನಲ್ಲಿ ಇಂಡಿಯನ್ ಕೋಸ್ಟ್ ಗಾರ್ಡ್ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುತ್ತದೆ.ನಂತರ ಅಭ್ಯರ್ಥಿಗಳ ದಾಖಲೆಗಳು ಪರಿಶೀಲಿಸಿ ನೇಮಕ ನಡೆಯುತ್ತದೆ.

Qualification:  ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೇಂದ್ರ ಅಥವಾ ರಾಜ್ಯ ಸರ್ಕಾರಗಳಿಂದ ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಗಳಿಂದ SSLC ಅಥವಾ ತತ್ಸಮಾನ ವಿದ್ಯಾರ್ಹತೆ ಶೇ.50 ಅಂಕಗಳೊಂದಿಗೆ ಪಡೆದಿರಬೇಕು.
ಅಭ್ಯರ್ಥಿಗಳಿಗೆ, ರಾಜ್ಯ ಅಥವಾ ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಮೊದಲ 3 ಸ್ಥಾನಗಳಲ್ಲಿ ಯಾವುದಾದರೂ ಒಂದು ಸ್ಥಾನ ಪಡೆದವರಿಗೆ ಶೇ.5 ಅಂಕಸಡಿಲಿಕೆ ಕಲ್ಪಿಸಲಾಗಿದೆ. ಅಂದರೆ ಈ ವರ್ಗಕ್ಕೆ ಸೇರುವವರು ಶೇ. 45 ಅಂಕ ಪಡೆದಿದ್ದರು ಅರ್ಜಿ ಸಲ್ಲಿಸಬಹುದು.

Age Limit:  ಈ ವರ್ಷದ ಅಕ್ಟೋಬರ್ 1ಕ್ಕೆ ನಿಗದಿಪಡಿಸಿದಂತೆ ಅಭ್ಯರ್ಥಿಗಳ ವಯೋಮಿತಿ 18 ರಿಂದ 22 ವರ್ಷದೊಳಗಿರಬೇಕು.
** ಅಂದರೆ ಅಭ್ಯರ್ಥಿಗಳು 1 ಅಕ್ಟೋಬರ್ 1997 ರಿಂದ 30 ಸೆಪ್ಟೆಂಬರ್ 2001 ನಡುವೆ ಜನಿಸಿರಬೇಕು.
** ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ, ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಕಲ್ಪಿಸಲಾಗಿದೆ.

Pay Scale:  ನಾವಿಕ್ (ಡೊಮೆಸ್ಟಿಕ್ ಬ್ರಾಂಚ್) ಹುದ್ದೆಗೆ ಆಯ್ಕೆಯಾದವರಿಗೆ ಮಾಸಿಕ Rs 21,700(ಪೇ ಲೆವೆಲ್-3) ಹಾಗೂ ಮತ್ತಿತರೆ ಭತ್ಯೆ ಒದಗಿಸಲಾಗುತ್ತದೆ.

Click here
to download official notification