Back ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ತಾಂತ್ರಿಕ ಸಹಾಯಕ ದರ್ಜೆ-3 ಹುದ್ದೆಗಳ ನೇಮಕಾತಿ

Image not found

April 5, 2018 ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಅವಶ್ಯಕವಿರುವ ವಿಭಾಗ ಮಟ್ಟದ ಮೇಲ್ವಿಚಾರಕೇತರ ಹುದ್ದೆಗಳಾದ ತಾಂತ್ರಿಕ ಸಹಾಯಕ ದರ್ಜೆ-3 ಹುದ್ದೆಗಳನ್ನು, ಪದವೃಂದ ಮತ್ತು ನೇಮಕಾತಿ ನಿಯಮಾವಳಿ 1982 ಮತ್ತು ತದನಂತರದ ತಿದ್ದುಪಡಿಗಳ ಅನುಸಾರ ನೇರ ನೇಮಕಾತಿಯ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ () ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಹುದ್ದೆವಾರು ಮೀಸಲಾತಿ ವರ್ಗೀಕರಣವನ್ನು ಕ್ರೋಢೀಕರಿಸಿ ಈ ಕೆಳಗಿನಂತೆ ಪ್ರಕಟಿಸಲಾಗಿದೆ.

No. of posts:  726

Application Start Date:  April 5, 2018

Application End Date:  April 25, 2018

Work Location:  ಕರ್ನಾಟಕ ರಾಜ್ಯ

Selection Procedure:  ದೇಹದಾಡ್ರ್ಯತೆ :
ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಈ ಕೆಳಕಂಡ ಕನಿಷ್ಠ
ದೇಹದಾಡ್ರ್ಯತೆಯನ್ನು ಕಡ್ಡಾಯವಾಗಿ ಹೊಂದಿರಬೇಕು.
ಪುರುಷರು ಮಹಿಳೆಯರು
ಎತ್ತರ 163 ಸೆಂ.ಮೀ 153 ಸೆ.ಮೀ
ತೂಕ 55 ಕೆ.ಜಿ 50 ಕೆ.ಜಿ

Qualification:  ಅ) ಪ್ರೌಢ ಶಿಕ್ಷಣ ಮಂಡಳಿಯಿಂದ ಎಸ್.ಎಸ್.ಎಲ್.ಸಿ. ಉತ್ತೀರ್ಣರಾದ ನಂತರ ತಾಂತ್ರಿಕ ಮಂಡಳಿ ಅಥವಾ ಸರ್ಕಾರದಿಂದ ಅಂಗೀಕೃತವಾದ ಸಂಸ್ಥೆಯಲ್ಲಿ ಐ.ಟಿ.ಸಿ. /ಐ.ಟಿ.ಐ. / ಎನ್‍ಎಸಿಯನ್ನು ಮೆಕ್ಯಾನಿಕ್ (ಮೋಟಾರ್ ವೆಹಿಕಲ್) / ಡೀಸಲ್ ಮೆಕ್ಯಾನಿಕ್ / ಆಟೋ ಎಲೆಕ್ಟ್ರೀಷಿಯನ್ / ವೆಲ್ಡರ್ / ಶೀಟ್ ಮೆಟಲ್ ವರ್ಕರ್ / ಎಲೆಕ್ಟ್ರಾನಿಕ್ ಮೆಕ್ಯಾನಿಕ್/ ಅಪೋಲ್‍ಸ್ಟ್ರಿ / ಡ್ರಾಫ್ಟ್ಸ್‍ಮ್ಯಾನ್ (ಮೆಕ್ಯಾನಿಕಲ್) / ಫಿಟ್ಟರ್ / ಮೆಷಿನಿಸ್ಟ್ / ಟೈರ್ ಫಿಟ್ಟಿಂಗ್ / ವಲ್ಕನೈಸಿಂಗ್ / ಪೈಂಟಿಂಗ್ / ರೆಫ್ರಿಜರೇಷನ್ ಎಂಡ್ ಏರ್‍ಕಂಡೀಷನಿಂಗ್ / ಟರ್‍ನರ್ / ಆಟೋಮೊಬೈಲ್ / ಎಲೆಕ್ಟ್ರಿಕಲ್ / ಎಲೆಕ್ಟಾ ್ರನಿಕ್ಸ್ / ಫ್ಯಾಬ್ರಿಕೇಷನ್(ಪಿಟ್ಟಿಂಗ್ ಎಂಡ್ ವೆಲ್ಡಿಂಗ್) ವೃತ್ತಿಗಳಲ್ಲಿ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಆ) ಪರೀಕ್ಷಾರ್ಥ ಅವಧಿ ಮುಗಿಯುವುದರೊಳಗಾಗಿ ಲಘು ವಾಹನ ಮೋಟಾರು ವಾಹನ ಚಾಲನಾ ಪರವಾನಗಿ ಪಡೆಯತಕ್ಕದ್ದು.

Fee:  ಸಾಮಾನ್ಯ, 2ಎ, 2ಬಿ, 3ಎ ಮತ್ತು 3ಬಿ ವರ್ಗ 800/-
ಪ.ಜಾತಿ, ಪ.ಪಂಗಡ, ವರ್ಗ-1, ಮಾಜಿ ಸೈನಿಕ ಮತ್ತು ಅಶಕ್ತ ಮಾಜಿ ಸೈನಿಕರ ಅವಲಂಬಿತರಿಗೆ 500/-

Age Limit:  ಅರ್ಜಿಗಳನ್ನು ಸ್ವೀಕರಿಸಲು ನಿಗಧಿಪಡಿಸಿದ ಕೊನೆಯ ದಿನಾಂಕ 25-4-2018 ರಂದು,
ಅ. ಕನಿಷ್ಠ 18 ವರ್ಷಗಳು ಪೂರ್ಣಗೊಂಡಿರಬೇಕು.
ಆ. ಗರಿಷ್ಠ ವಯೋಮಿತಿ ಈ ಕೆಳಕಾಣಿಸಿದ ವಯಸ್ಸು ಮೀರಿರಬಾರದು.
ಸಾಮಾನ್ಯ ವರ್ಗ :- 35 ವರ್ಷಗಳು
2ಎ/2ಬಿ/3ಎ/3ಬಿ :- 38 ವರ್ಷಗಳು
ಪ.ಜಾತಿ/ಪ.ಪಂ/ ವರ್ಗ-1 :- 40 ವರ್ಷಗಳು

Pay Scale:  ಅ) ಆಯ್ಕೆಗೊಂಡ ಅಭ್ಯರ್ಥಿಗಳನ್ನು ಎರಡು ವರ್ಷಗಳ ಕಾಲ ಕೆಲಸದ ಮೇಲೆ ತರಬೇತಿಗೆ
ನಿಯೋಜಿಸಲಾಗುವುದು. ತರಬೇತಿಯ ಅವಧಿಯಲ್ಲಿ, ಈ ಕೆಳಕಾಣಿಸಿದಂತೆ ಮಾಸಿಕ ತರಬೇತಿ
ಭತ್ಯೆ ನೀಡಲಾಗುವುದು.
ಹುದ್ದೆ ತರಭೇತಿ ಭತ್ಯೆ
ತಾಂತ್ರಿಕ ಸಹಾಯಕ ರೂ.9,100/-
ಆ) ಹುದ್ದೆಗೆ ನಿಗದಿಪಡಿಸುವ ಇತರೆ ಭತ್ಯೆಗಳು (ತರಬೇತಿ ಅವಧಿ ಮುಗಿದ ನಂತರ)
ಇ) ವೇತನ ಶ್ರೇಣಿ: ಆಯ್ಕೆಗೊಂಡ ಅಭ್ಯರ್ಥಿಗಳು ಎರಡು ವರ್ಷಗಳ ಕಾಲ ಕೆಲಸದ ಮೇಲೆ ತರಬೇತಿ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿದಲ್ಲಿ ಅವರನ್ನು ಖಾಯಂ ಪೂರ್ವ ಪರೀಕ್ಷಾರ್ಥಿ ಸೇವೆಯಲ್ಲಿ ನೇಮಕಗೊಳಿಸಿ ಈ ಕೆಳಕಾಣಿಸಿದಂತೆ ಕಾಲಿಕ ವೇತನ ಶ್ರೇಣಿಯನ್ನು
ನಿಗಧಿಪಡಿಸಲಾಗುವುದು.

ತಾಂತ್ರಿಕ ಸಹಾಯಕ ದರ್ಜೆ-3
11640-140-11920-170-12600-250-14100-320-15700

Click Here for official notification
Click Here for official notification
Click here to apply online