Loading..!

ರೈಲ್ವೆಯ ಅಸಿಸ್ಟೆಂಟ್ ಲೋಕೋ ಪೈಲಟ್ ಮತ್ತು ಟೆಕ್ನೀಷಿಯನ್ ಹುದ್ದೆಗಳ ನೇಮಕಾತಿಗೆ ಜೂನ್ 18 ರಿಂದ ದಾಖಲೆ ಪರಿಶೀಲನೆ ಆರಂಭ
| Date:15 ಜೂನ್ 2019
Image not found
ಭಾರತೀಯ ರೈಲ್ವೆಯು ಅಸಿಸ್ಟೆಂಟ್ ಲೋಕೋ ಪೈಲಟ್ ಮತ್ತು ಟೆಕ್ನಿಷಿಯನ್ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಜೂನ್ 18ರಂದು ದಾಖಲೆ ಪರಿಶೀಲನೆ ನಡೆಸಲಿದೆ.
ಇದಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು(ರೋಲ್ ನಂಬರ್ ಮಾತ್ರ )RRB ಯು ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದ್ದು,1623 ಅಭ್ಯರ್ಥಿಗಳಿಗೆ ಜೂನ್ 18 ರಿಂದ ಜುಲೈ 10ರ ವರೆಗೆ ದಾಖಲೆ ಪರಿಶೀಲನೆ ನಡೆಸಲಾಗುತ್ತದೆ. ಉಳಿದ ಅಭ್ಯರ್ಥಿಗಳ ಪಟ್ಟಿಯನ್ನು ಸದ್ಯವೇ ಪ್ರಕಟಿಸಲಾಗುವುದು ಎಂದು RRB ಯು ಪ್ರಕಟಣೆಯಲ್ಲಿ ತಿಳಿಸಿದೆ.
ದಾಖಲೆ ಪರಿಶೀಲನೆಯು ಬೆಂಗಳೂರಿನ ಮಿಲ್ಲರ್ಸ್ ರಸ್ತೆಯಲ್ಲಿರುವ RRB ಯ ಕಚೇರಿಯಲ್ಲಿಯೇ ನಡೆಯಲಿದ್ದು, ಅಭ್ಯರ್ಥಿಗಳು ನಿಗದಿತ ದಿನದಂದು, ಸಮಯಕ್ಕೆ ಸರಿಯಾಗಿ ದಾಖಲೆ ಪರಿಶೀಲನೆ ಹಾಜರಾಗಬೇಕೆಂದು ಕೊರಲಾಗಿದೆ.
ಪ್ರತಿ ದಿನ ಒಟ್ಟು 100 ಅಭ್ಯರ್ಥಿಗಳ ದಾಖಲೆ ಪರಿಶೀಲನೆ ನಡೆಸಲಾಗುತ್ತದೆ. ಯಾವ ಅಭ್ಯರ್ಥಿಗಳು, ಯಾವ ಸಮಯಕ್ಕೆ ದಾಖಲೆ ಪರಿಶೀಲನೆಗೆ ಹಾಜರಾಗಬೇಕೆಂದು ಮಾಹಿತಿಯನ್ನು ವೆಬ್ ಸೈಟ್ ನಲ್ಲಿ ಒದಗಿಸಲಾಗಿದ್ದು, ಪ್ರವೇಶ ಪತ್ರವನ್ನು ವೆಬ್ ಸೈಟ್ ನಲ್ಲಿ ನೀಡಲಾಗಿದೆ.ಅಭ್ಯರ್ಥಿಗಳು ಇದನ್ನು ಡೌನ್ಲೋಡ್ ಮಾಡಿಕೊಂಡು ದಾಖಲೆ ಪರಿಶೀಲನೆಗೆ ಹಾಜರಾಗಬೇಕೆಂದು ಸೂಚಿಸಲಾಗಿದೆ.

ಯಾವ ದಾಖಲೆ ಬೇಕು?: ದಾಖಲೆ ಪರಿಶೀಲನೆಗೆ ಹಾಜರಾಗುವಾಗ ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತೆ ಗೆ ಸಂಬಂಧಿಸಿದ ಮೂಲ ದಾಖಲೆ, ಮೀಸಲಿಗೆ ಸಂಬಂಧಿಸಿದ ದೃಢೀಕರಣ ಪತ್ರಗಳು,ಪಾಸ್ ಪೋರ್ಟ್ ಅಳತೆಯ ಇತ್ತೀಚಿನ 6 ಭಾವಚಿತ್ರಗಳು,ಆಧಾರ್ ಕಾರ್ಡ್, ಅಗತ್ಯವಿದ್ದಲ್ಲಿ ಆದಾಯ ಪ್ರಮಾಣಪತ್ರ, ಇನ್ನಿತರ ಅಗತ್ಯ ದಾಖಲೆಗಳನ್ನು ತರಬೇಕೆಂದುRRB ಯು ಪ್ರಕಟಣೆಯಲ್ಲಿ ಕೋರಿದೆ.

ವಿಶೇಷ ಸೂಚನೆ::
* ದಾಖಲೆ ಪರಿಶೀಲನೆಗೆ ಹಾಜರಾಗಲು ಆಗಮಿಸುವ ಅಭ್ಯರ್ಥಿಗಳು ನಾಲ್ಕು ದಿನಗಳ ಕಾಲ ಬೆಂಗಳೂರಿನಲ್ಲಿಯೇ ಇರಬೇಕಾಗಬಹುದು.
* ದಾಖಲೆ ಪರಿಶೀಲನೆಯ ನಂತರ ವೈದ್ಯಕೀಯ ಪರೀಕ್ಷೆಯೂ ನಡೆಯಲಿದೆ. ಈ ಬಗ್ಗೆ ದಾಖಲೆ ಪರಿಶೀಲನೆ ಸಂದರ್ಭದಲ್ಲಿ ಮಾಹಿತಿ ನೀಡಲಾಗುತ್ತದೆ.
* ಸೂಕ್ತ ದಾಖಲೆಗಳನ್ನು ಹಾಜರು ಪಡಿಸಿದ ಅಭ್ಯರ್ಥಿಗಳನ್ನು ನೇಮಕಾತಿಯಿಂದ ಕೈಬಿಡಲಾಗುವುದು.
ರೈಲ್ವೆ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿಯ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು ಭಾರಿ ರಿಯಾಯಿತಿಯೊಂದಿಗೆ ಖರೀದಿಸಿ ಉತ್ತಮ ತಯಾರಿ ನಡೆಸಿ

Comments