Back ಕನಾ೯ಟಕ ರಾಜ್ಯ ರಸ್ತೆ ಸಾರಿಗೆ ನಿಗಮದ(KSRTC) ಮೇಲ್ವಿಚಾರಕೇತರ ವರ್ಗದ ವಿವಿಧ ವೃoದಗಳ ಪರೀಕ್ಷಾ ದಿನಾಂಕ ಪ್ರಕಟ

Image not found

Sept. 21, 2018 ಕನಾ೯ಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಜಾಹೀರಾತಿನಲ್ಲಿ ಮೇಲ್ವಿಚಾರಕೇತರ ವರ್ಗದ ವಿವಿಧ ವೃoದಗಳ ಒಟ್ಟು 1116 ಹುದ್ದೆಗಳಿಗೆ ಮೆರಿಟ್ ಆಧಾರದ ಮೇಲೆ ನೇರ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿ ಸ್ವೀಕರಿಸಲಾಗಿತ್ತು. ಸದರಿ ಜಾಹಿರಾತಿಗೆ ಸ್ಪಂದಿಸಿ ಅಜಿ೯ ಸಲ್ಲಿಸಿರುವ ಅಭ್ಯರ್ಥಿಗಳಿಗೆ, ದಿನಾoಕ: 06.10.2018 ರ ಪೂರ್ವಾನ್ಹದಂದು ತಾಂತ್ರಿಕ ಸಹಾಯಕ ಹುದ್ದೆಗೆ ಮತ್ತು ಅಪರಾಹ್ನದಂದು ಸಹಾಯಕ ಲೆಕ್ಕಿಗ, ಅ೦ಕಿ-ಅ೦ಶ ಸಹಾಯಕ ಹುದ್ದೆಗಳಿಗೆ ಹಾಗೂ ದಿನಾ೦ಕ: 07.10.2018 ರ ಪೂರ್ವಾಹ್ನದಂದು ಸಹಾಯಕ ಸಂಚಾರ ನಿರೀಕ್ಷಕ ಹುದ್ದೆಗೆ ಮತ್ತು ಅಪರಾಹ್ನದoದು ಸಹಾಯಕ ಉಗ್ರಾಣ ರಕ್ಷಕ, ಕುಶಲಕರ್ಮಿ ಹುದ್ದೆಗಳಿಗೆ ಸಾಮಾನ್ಯೆ ಸಾಮರ್ಥ್ಯ ಪರೀಕ್ಷೆಯನ್ನು ನಡಸಲಾಗುತ್ತಿದೆ.

ಸದರಿ ಪರೀಕ್ಷಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಸಂಸ್ಥೆಯ ವೆಬ್ಸೈಟ್ ನಲ್ಲಿ ಮಾಹಿತಿ ಪಡೆಯುವುದು ಹಾಗೂ ಇ-ಪ್ರವೇಶ ಪತ್ರವನ್ನು, ದಿನಾಂಕ 22-09-2018 ರಿಂದ ಡೌನ್ಲೊಆಡ್ ಮಾಡಿಕೊಳ್ಳುವುದು.