ಅರಣ್ಯ ವೀಕ್ಷಕ ಹುದ್ದೆಗಳ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ.5
Image not found

Nov. 30, 2018 ಅರಣ್ಯ ವೀಕ್ಷಕ ಹುದ್ದೆಯ ನೇರ ನೇಮಕಾತಿ ಕುರಿತಂತೆ ದಿನಾಂಕ 07/10/2018 ರಂದು ಲಿಖಿತ ಪರೀಕ್ಷೆ ನಡೆದಿರುತ್ತದೆ. ದಿನಾಂಕ 19/11/2018 ರಂದು ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಇಲಾಖಾ ವೆಬ್ ಸೈಟ್ ನಲ್ಲಿ ಈಗಾಗಲೇ ಪ್ರಕಟಿಸಲಾಗಿದೆ. ಮೀಸಲಾತಿ ನಿಯಮಗಳ ಅನುಸಾರ ಮತ್ತು ಅಧಿಸೂಚನೆಯಲ್ಲಿ ವಿಧಿಸಿರುವ ಷರತ್ತುಗಳ ಆಧಾರದ ಮೇರೆಗೆ ಪ್ರಸ್ತುತ ಒಂದು ಅನುಪಾತ ಒಂದು (1:1) ತಾತ್ಕಾಲಿಕ ಆಯ್ಕೆ ಪಟ್ಟಿ ಹಾಗೂ ತಾತ್ಕಾಲಿಕ ಕಾಯುವಿಕೆ ಪಟ್ಟಿಯನ್ನು ಇಲಾಖೆ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಪ್ರಸ್ತುತ ಪ್ರಕಟಿಸಿರುವ ಪಟ್ಟಿಯು ಮಂಗಳೂರು, ಕೊಡಗು, ಚಾಮರಾಜನಗರ, ಮೈಸೂರು, ಚಿಕ್ಕಮಗಳೂರು, ಕೆನರಾ ವಿಭಾಗಗಳ ಪಟ್ಟಿಯಾಗಿದೆ.

ಈ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ದಿನಾಂಕ ೦೫/೧೨/2018 ರಂದು ಖುದ್ದಾಗಿ ಹಾಜರಾಗುವಾಗ ಎಲ್ಲ ಮೂಲ ದಾಖಲಾತಿಗಳೊಂದಿಗೆ ಇತ್ತೀಚಿನ ಮೂರು ಭಾವಚಿತ್ರದೊಂದಿಗೆ ಹಾಜರಾಗತಕ್ಕದ್ದು. ಮೂಲ ದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ಒಂದು ದಿನಕ್ಕಿಂತ ಹೆಚ್ಚು ದಿನಗಳು ನಡೆಯುವ ಸಂಭವ ಇರುವುದರಿಂದ ಎಲ್ಲಾ ಪೂರ್ವ ಸಿದ್ಧತೆಯನ್ನು ಅಭ್ಯರ್ಥಿಗಳು ಮಾಡಿಕೊಳ್ಳಲು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಗಳನ್ನು ನೋಡಬಹುದು.