Life is like this loading!

We've to prepare well to perform better

ಕರ್ನಾಟಕ ರಾಜ್ಯ ಸಿವಿಲ್ ಕಾನ್ಸಟೇಬಲ್ ಹುದ್ದೆಗಳ ಲಿಖಿತ ಪರೀಕ್ಷೆಯ ಪ್ರವೇಶ ಪತ್ರಗಳು ಇಲಾಖೆಯ ಜಾಲತಾಣದಲ್ಲಿ ಪ್ರಕಟ
| Date:21 ಜನವರಿ 2019
Image not found

ದಿನಾಂಕ 23/12/2018 ರಂದು ನಡೆಯಬೇಕಾಗಿದ್ದ ಕರ್ನಾಟಕ ರಾಜ್ಯ ಸಿವಿಲ್ ಪೊಲೀಸ್ ಕಾನ್ ಸ್ಟೆಬಲ್ (ನಾಗರಿಕ) ಹುದ್ದೆಗಳ ಪರೀಕ್ಷೆಯನ್ನು ಆಡಳಿತಾತ್ಮಕ ಕಾರಣದಿಂದಾಗಿ ಮುಂದಿಡಲಾಗಿತ್ತು ಈ ಕುರಿತು ಎಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಅವರು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿ, ಮುಂದೆ ನಡೆಯುವ ದಿನಾಂಕವನ್ನು ಶೀಘ್ರದಲ್ಲಿ ತಿಳಿಸಲಾಗುವುದೆಂದು ತಿಳಿಸಿದ್ದರು. ಮತ್ತೆ ಈ ಪರೀಕ್ಷೆಯನ್ನು ದಿನಾಂಕ 27-01-2019ರ ಪೂರ್ವಾಹ್ನ 10:30 ರಿಂದ 12:00 (90 ನಿಮಿಷ) ನಡೆಸಲು ತೀರ್ಮಾನಿಸಲಾಗಿದೆ.

ಪ್ರಸ್ತುತ ಈ ಹುದ್ದೆಗಳಿಗೆ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಪರೀಕ್ಷಾ ಕರೆ ಪತ್ರಗಳನ್ನು ರಾಜ್ಯ ಪೊಲೀಸ್ ಇಲಾಖೆಯು ತನ್ನ ಜಾಲತಾಣದಲ್ಲಿ ಪ್ರಕಟಿಸಿದೆ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ತಮ್ಮ ಕರೆಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು