Back ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವಿವಿಧ ಹುದ್ದೆಗಳ ನೇಮಕಾತಿಯ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯ ಮರು ದಿನಾಂಕ ಪ್ರಕಟ

Image not found

June 2, 2018 ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಸಂಚಾರ ನಿರೀಕ್ಷಕ, ನಿರ್ವಾಹಕ, ಭದ್ರತಾ ರಕ್ಷಕ, ಕುಶಲಕರ್ಮಿ, ತಾಂತ್ರಿಕ ಸಹಾಯಕ ಹಾಗೂ ಕಿರಿಯ ಸಹಾಯಕ ಕಂ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳ ನೇಮಕಾತಿಗಾಗಿ ಈ ಮೊದಲು ಪರೀಕ್ಷೆ ದಿನಾಂಕವನ್ನು ಪ್ರಕಟಿಸಿ ಮುಂದೂಡಲಾಗಿತ್ತು.
ಪ್ರಸ್ತುತ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯನ್ನು
*ಕುಶಲಕರ್ಮಿ ಹುದ್ದೆಗಳಿಗೆ ದಿನಾಂಕ 09-06-2018 ಮಧ್ಯಾಹ್ನ 2:00 ರಿಂದ 4:00 ಗಂಟೆಯವರೆಗೆ
*ಸಂಚಾರ ನಿರೀಕ್ಷಕ ನಿರ್ವಾಹಕ ಭದ್ರತಾ ರಕ್ಷಕ ಮತ್ತು ಕಿರಿಯ ಸಹಾಯಕ ಕಂ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ದಿನಾಂಕ 10-06-2018 ಬೆಳಿಗ್ಗೆ 10:00 ರಿಂದ 12:00 ಗಂಟೆಯವರೆಗೆ
*ತಾಂತ್ರಿಕ ಸಹಾಯಕ ಹುದ್ದೆಗಳಿಗೆ ದಿನಾಂಕ 10-06-2018 ಮಧ್ಯಾಹ್ನ 2:00 ರಿಂದ 4:00 ಗಂಟೆಯವರೆಗೆ
ಸಾಮಾನ್ಯ ಸಾಮರ್ಥ್ಯ ಪರೀಕ್ಷೆ ನಡೆಸಲಾಗುವುದು ಪರೀಕ್ಷೆಯ ಪ್ರವೇಶ ಪತ್ರವನ್ನು ಸಂಸ್ಥೆಯ ವೆಬ್ ಸೈಟ್ www.mybmtc.com ಮೂಲಕ ದಿನಾಂಕ 03-06-2018 ರಿಂದ 09-06-2018 ರ ಅವಧಿಯಲ್ಲಿ ಮುದ್ರಿಸಿಕೊಂಡು ಪ್ರವೇಶ ಪತ್ರದಲ್ಲಿ ಸೂಚಿಸಲಾಗಿರುವ ದಿನಾಂಕ, ಸಮಯ ಹಾಗೂ ದಾಖಲೆಗಳೊಂದಿಗೆ ಪರೀಕ್ಷಾ ಸ್ಥಳದಲ್ಲಿ ತಪ್ಪದೆ ಹಾಜರಾಗಬೇಕು.
ಪ್ರವೇಶ ಪತ್ರವನ್ನು ಅಂಚೆ ಅಥವಾ ಇತರ ಯಾವುದೇ ಮೂಲಗಳಿಂದ ಕಲಿಸಲಾಗುವುದಿಲ್ಲ ಅಭ್ಯರ್ಥಿಗಳು ಸಂಸ್ಥೆಯ ವೆಬ್ ಸೈಟ್ ಮೂಲಕ ಮಾತ್ರವೇ ಪ್ರವೇಶ ಪತ್ರಗಳನ್ನು ಪಡೆಯಬಹುದು.