Loading..!

Back
ಸರ್ಕಾರೀ ನೌಕರಿ ಪಡೆಯುವುದು ಕಷ್ಟಾನಾ..? ಅಥವಾ ಸುಲಭನಾ...? ಈ ಕುರಿತ ಕಿರು ಮಾಹಿತಿ ನಿಮಗಾಗಿ ಭಾಗ 2

| Published on: 1 ಫೆಬ್ರುವರಿ 2019

Image not found

competitive exam preparation in kannada

ಪ್ರಸ್ತುತ ಲೇಖನವು ಈ ಹಿಂದೆ ಪ್ರಕಟವಾದ "ಸರ್ಕಾರೀ ನೌಕರಿ ಪಡೆಯುವುದು ಕಷ್ಟಾನಾ..? ಅಥವಾ ಸುಲಭನಾ..? ಈ ಕುರಿತ ಕಿರು ಮಾಹಿತಿ ನಿಮಗಾಗಿ ಭಾಗ 1" ರ ಮುಂದುವರೆದ ಭಾಗವಾಗಿದೆ. ನೀವಿನ್ನೂ ಭಾಗ 1 ರ ಲೇಖನವನ್ನು ಓದದೇ ಇದ್ದಲ್ಲಿ ಆ ಲೇಖನ ಓದಿದ ನಂತರ ಇಲ್ಲಿ ಮುಂದುವರೆಯಿರಿ.

ಇಂದು ಇಲ್ಲಿ ನಾವು ಸರ್ಕಾರೀ ಹುದ್ದೆ ಪಡೆಯಬೇಕಾದರೆ ನಿಮಗೆ ಇರಬೇಕಾದ ಮೊದಲ ಅರ್ಹತೆಯಾದ ನಿಶ್ಚಲ ಗುರಿ ಅಥವಾ ದೃಢ ಸಂಕಲ್ಪ ಬಗ್ಗೆ ನೋಡಣ ನಿಶ್ಚಲ ಗುರಿ ಅಥವಾ ದೃಢಸಂಕಲ್ಪ : ಸ್ನೇಹಿತರೆ ನೀವು ಭವಿಷ್ಯದಲ್ಲಿ ಏನಾಗಬೇಕು ಎಂಬುದನ್ನು ನಿರ್ಧರಿಸಿದ್ದೀರಾ ಇಲ್ಲವೇ ಹಾಗಿದ್ದರೆ ಈ ಕೂಡಲೇ ನೀವು ನಿಮ್ಮ ಗುರಿ ಏನು ಎಂಬುದನ್ನು ನಿರ್ಧರಿಸಿ ಇಲ್ಲದೇ ಹೋದರೆ ನಿಮ್ಮ ಬದುಕು ದಿಕ್ಸೂಚಿ ಇಲ್ಲದ ಹಡಗಿನಂತಾಗುತ್ತದೆ, ಮತ್ತು ನಿಮ್ಮ ನಿರ್ಧಾರ/ಗುರಿ ನಿಶ್ಚಲವಾಗಿರಲಿ ಅದು ದಿನದಿಂದ ದಿನಕ್ಕೆ ಬದಲಾಗಬಾರದು, ನಿಮ್ಮ ಗುರಿಯನ್ನು ನೀವು ಎಷ್ಟೇ ಕಷ್ಟ ಬಂದರೂ ಕೂಡ ಸಾಧಿಸಿಯೇ ತಿರಬೇಕು. ಸ್ನೇಹಿತರೆ ಕೆಲವು ಸಮಯವನ್ನು ತೆಗೆದುಕೊಂಡು ನಿಮ್ಮ ಗುರಿಯನ್ನು ನಿರ್ಧರಿಸಿದ್ದೀರಿ ಎಂದು ಭಾವಿಸುತ್ತೇನೆ. ನಿಮ್ಮ ಗುರಿ ನಿಮ್ಮ ಕನಸಿನ ಸರ್ಕಾರೀ ಹುದ್ದೆ ಪಡೆಯುವುದೇ ಆದರೆ ಸ್ವಲ್ಪ ಇತ್ತ ಗಮನಿಸಿ, ನಿಮ್ಮ ತಯಾರಿ ಇಂದಿನಿಂದಲೇ ಆರಂಭವಾಗಬೇಕು ಮತ್ತು ಅದರ ನಿಶ್ಚಲತೆ ಅತಿ ಮುಖ್ಯವಾಗಿರುತ್ತದೆ. ಸ್ನೇಹಿತರೆ ನಾನು ಈಗಾಗಲೇ ಸುಮಾರು ಜನ ಅಭ್ಯರ್ಥಿಗಳನ್ನು ಗಮನಿಸಿರುವ ಹಾಗೆ ಅವರು ಕೂಡ ನಿಮ್ಮಂತೆ ಸರ್ಕಾರಿ ಹುದ್ದೆಯ ಆಸೆ ಹೊತ್ತಿರುತ್ತಾರೆ ಹಾಗೂ ಉತ್ತಮ ತಯಾರಿ ಕೂಡ ಆರಂಭಿಸುತ್ತಾರೆ ಆದರೆ ದಿನ ಕಳೆದಂತೆ ಅವರ ಉತ್ಸಾಹ ಕಡಿಮೆಯಾಗುತ್ತದೆ ಕ್ರಮೇಣ ತಮ್ಮ ತಯಾರಿಯನ್ನೇ ನಿಲ್ಲಿಸಿಬಿಡುತ್ತಾರೆ. ಈ ತಪ್ಪನ್ನು ಖಂಡಿತ ಯಾರು ಕೂಡ ಮಾಡಬಾರದು, ಅದಕ್ಕೆ ನಾನು ಮೊದಲು ಹೇಳಿದ್ದು ನಿಮ್ಮ ಗುರಿ ನಿಶ್ಚಲವಾಗಿರಬೇಕೆಂದು ಮತ್ತು ಅದು ದಿನದಿಂದ ದಿನಕ್ಕೆ ಬದಲಾಗಬಾರದು ಎಂದು, ಇಲ್ಲದೆ ಹೋದರೆ ಅದು ಸಮಯ ಹಾಗೂ ಹಣದ ವ್ಯರ್ಥ ಪ್ರಯತ್ನ ಅಷ್ಟೇ. ಆದರೂ ಕೆಲ ಅಭ್ಯರ್ಥಿಗಳು ಕೆಲವು ಸಮಸ್ಯೆಗಳನ್ನು ಅನುಭವಿಸುವರು ಮತ್ತು ಈ ಸಮಸ್ಯೆಗಳಿಂದ ಅವರು ನನ್ನಿಂದ ಈ ಹುದ್ದೆ ಪಡೆಯುವ ಕಾರ್ಯ ಸಾಧ್ಯವೇ ಇಲ್ಲವೇನೋ ಎಂದು ತಿಳಿದು ತಮ್ಮ ಕಾರ್ಯಸಾಧನೆಯನ್ನು ನಿಲ್ಲಿಸಿಬಿಡುತ್ತಾರೆ ಅಂತ ಕೆಲ ಸಮಸ್ಯೆಗಳನ್ನು ನೋಡುವುದಾದರೆ
* ಓದಿನಲ್ಲಿ ನಿರಾಸಕ್ತಿ ತೋರುವುದು
* ಹುದ್ದೆ ಪಡೆಯುವುದು ಅಸಾಧ್ಯ ಎಂಬ ಮನೋಭಾವ ತಾಳುವುದು
* ಕುಟುಂಬದ ಆರ್ಥಿಕ ತೊಂದರೆ
* ತಯಾರಿ ಸರಿಯಾದ ಕ್ರಮವನ್ನು ಅಳವಡಿಸಿಕೊಳ್ಳದೇ ಇರುವುದು ಸ್ನೇಹಿತರೆ ಹೀಗೆ ಹೀಗೆ ಇಂತಹ ಹತ್ತು ಹಲವು ಸಮಸ್ಯೆಗಳು ಎಲ್ಲರ ಜೀವನದಲ್ಲೂ ಸರ್ವೇಸಾಮಾನ್ಯ ಇದನ್ನೇ ನೀವು ವೈಭವೀಕರಿಸಿ ಇದೇ ನನ್ನ ದೊಡ್ಡ ಸಮಸ್ಯೆ ಎಂದು ತಿಳಿಯುವ ಅವಶ್ಯಕತೆ ಇಲ್ಲ, ಏಕೆಂದರೆ ಈಗಾಗಲೇ ಇದಕ್ಕಿಂತ ದೊಡ್ಡ ದೊಡ್ಡದಾದ ಸಮಸ್ಯೆಗಳನ್ನು ಜೀವನದ ಅತಿ ಕಷ್ಟವಾದ ಸಮಯದಲ್ಲಿಯೂ ಕೂಡ ಛಲಬಿಡದೆ ಸಾಧಿಸಿದ ನೂರಾರು ವ್ಯಕ್ತಿಗಳ ಉದಾಹರಣೆಗಳು ನಮ್ಮ ಕಣ್ಣೆದುರಿಗಿವೆ. ಅವರನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ನಮ್ಮ ಪ್ರಯತ್ನವನ್ನು ಮುಂದುವರಿಸಬೇಕು. competitive exam preparation in kannada
References: competitive exam preparation in kannada, competitive exam preparation in kannada