Loading..!

Back
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ನಡೆಸಿದ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯ ನಿರೀಕ್ಷಿಸಬಹುದಾದ ಕಟ್ ಆಫ್(Cut-off) ಅಂಕಗಳು

| Published on: 6 ನವೆಂಬರ್ 2018

Image not found

KSRTC Cut off marks 2018 Recruitment:

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಯಲ್ಲಿ ಸಂಚಾರ ನಿರೀಕ್ಷಕ (Assistant Traffic controller), ತಾಂತ್ರಿಕ ಸಹಾಯಕ(Technical Assistant), ಸಹಾಯಕ ಲೆಕ್ಕಿಗ(Assistant accountant), ಉಗ್ರಾಣ ರಕ್ಷಕ, ಅಂಕಿ-ಅಂಶ ಸಹಾಯಕ, ಕುಶಲಕರ್ಮಿ(Artisan) ಹಾಗೂ ಹುದ್ದೆಗಳ ನೇಮಕಾತಿಗಾಗಿ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯನ್ನು ನಡೆಸಿ ಈ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯ ಕೀ ಉತ್ತರಗಳನ್ನು ಅಧಿಕೃತವಾಗಿ KSRTC ಯು ಈಗಾಗಲೇ ಪ್ರಕಟಿಸಿದೆ. ಈ ಸಾಮಾನ್ಯ ಪರೀಕ್ಷೆ ಬರೆದ ಅಭ್ಯರ್ಥಿಗಳು ಈಗಾಗಲೇ ತಮ್ಮ ಅಂಕಗಳನ್ನು ಪರಿಶೀಲಿಸಿರುತ್ತೀರಿ, ಪ್ರಸ್ತುತ KPSCVaani ಯು ಈ ಹುದ್ದೆಗಳಿಗೆ ನಿರೀಕ್ಷಿಸಬಹುದಾದ ಕಟ್-ಆಫ್ ಅಂಕಗಳನ್ನು ಅಂದಾಜಿಸಲು, ಅಭ್ಯರ್ಥಿಗಳು ಗಳಿಸಿದ ಅಂಕಗಳನ್ನು ನೇರವಾಗಿ ಅವರಿಂದಲೇ ಸಂಗ್ರಹಿಸಿದೆ. ಇಲ್ಲಿ ಸುಮಾರು 1400 ಕ್ಕೂ ಹೆಚ್ಚು ಅಭ್ಯರ್ಥಿಗಳು ತಮ್ಮ ಅಂಕಗಳನ್ನು ನಮೂದಿಸಿದ್ದು ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳ ಸಂಖ್ಯೆ ಈ ಕೆಳಗಿನಂತಿದೆ.
* Technical Assistant (ತಾಂತ್ರಿಕ ಸಹಾಯಕ) - 373
* Assistant Traffic Inspector (ಸಂಚಾರ ನಿರೀಕ್ಷಕ )- 632
*KSRTC Mechanical Artisan (ಕುಶಲಕರ್ಮಿ) - 127
*KSRTC ಸಹಾಯಕ ಲೆಕ್ಕಿಗ- 146
*KSRTC ಅಂಕಿ-ಅಂಶ ಸಹಾಯಕ-38
*KSRTC ಉಗ್ರಾಣ ರಕ್ಷಕ-84 ಕಟ್ ಆಫ್ ಅಂಕಗಳು ಹುದ್ದೆಗಳಿಗನುಗುಣವಾಗಿ ಈ ಕೆಳಗಿನಂತಿವೆ :
ತಾಂತ್ರಿಕ ಸಹಾಯಕ( Technical Assistant ) ಹುದ್ದೆಗಳಿಗೆ """"""""""""""""""""""""" >ಜನರಲ್ ಮೆರಿಟ್ ಅಭ್ಯರ್ಥಿಗಳಿಗೆ - 40 to 45 >ಹಿಂದುಳಿದ ವರ್ಗದ(OBC) ಅಭ್ಯರ್ಥಿಗಳಿಗೆ - 38 to 44 >SC/ST ಅಭ್ಯರ್ಥಿಗಳಿಗೆ - 38 to 42
* ಕುಶಲಕರ್ಮಿ (Artisan) ಹುದ್ದೆಗಳಿಗೆ """"""""""""""""""" >ಜನರಲ್ ಮೆರಿಟ್ ಅಭ್ಯರ್ಥಿಗಳಿಗೆ - 50 to 55 >ಹಿಂದುಳಿದ ವರ್ಗದ(OBC) ಅಭ್ಯರ್ಥಿಗಳಿಗೆ - 48 to 52 >SC/ST ಅಭ್ಯರ್ಥಿಗಳಿಗೆ - 46 to 50
* ಸಂಚಾರ ನಿರೀಕ್ಷಕ (Assistant Traffic Inspector) ಹುದ್ದೆಗಳಿಗೆ """""""""""""""""""""""" >ಜನರಲ್ ಮೆರಿಟ್ ಅಭ್ಯರ್ಥಿಗಳಿಗೆ - 64 to 68 >ಹಿಂದುಳಿದ ವರ್ಗದ(OBC) ಅಭ್ಯರ್ಥಿಗಳಿಗೆ - 62 to 65 >SC/ST ಅಭ್ಯರ್ಥಿಗಳಿಗೆ- 60 to 64
* ಸಹಾಯಕ ಲೆಕ್ಕಿಗ(Assistant accountant) ಹುದ್ದೆಗಳಿಗೆ """""""""""""""""""""""" >ಜನರಲ್ ಮೆರಿಟ್ ಅಭ್ಯರ್ಥಿಗಳಿಗೆ - 54 to 58 >ಹಿಂದುಳಿದ ವರ್ಗದ(OBC) ಅಭ್ಯರ್ಥಿಗಳಿಗೆ - 52 to 55 >SC/ST ಅಭ್ಯರ್ಥಿಗಳಿಗೆ- 50 to 54
ವಿಶೇಷ ಸೂಚನೆಗಳು :-
**ಉಗ್ರಾಣ ರಕ್ಷಕ ಮತ್ತು ಅಂಕಿ ಅಂಶ ಸಹಾಯಕ ಹುದ್ದೆಗಳಿಗೆ ಕಟ್ ಆಫ್ ಅಂಕಗಳನ್ನು ಅಂದಾಜಿಸಲು ಬೇಕಾದ ಸಾಕಷ್ಟು ಪ್ರಮಾಣದ ಡೇಟಾ ಲಭ್ಯವಿರದ ಕಾರಣ ಈ ಹುದ್ದೆಗಳ ಕಟ್ ಆಫ್ ಅಂದಾಜಿಸಲು ಸಾದ್ಯವಾಗಿರುವದಿಲ್ಲ ಈ ಹುದ್ದೆಗಳಿಗೆ ಅಂಕಗಳನ್ನು ನಮೂದಿಸಿದ ಅಭ್ಯರ್ಥಿಗಳು ಇತರೆ ಅಭ್ಯರ್ಥಿಗಳ ಅಂಕಗಳೊಂದಿಗೆ ಹೋಲಿಸಿ ನೋಡಬಹುದು
*ಇಲ್ಲಿ OBC(Other Backward Classes) ಎಂದರೆ 2A 2B 3A 3B ಕೆಟಗರಿಯ ಅಭ್ಯರ್ಥಿಗಳಾಗಿರುತ್ತಾರೆ
* ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಅಭ್ಯರ್ಥಿಗಳ ಕಟ್ ಆಫ್ 1 ರಿಂದ 3 ಅಂಕಗಳವರೆಗೆ ವ್ಯತ್ಯಾಸವಾಗಬಹುದು.
* ಈ ಕಟ್ ಆಫ್ ಸ್ಕೋರನ್ನು ಕೇವಲ 1 : 5 ಅನುಪಾತದಲ್ಲಿರುವಂತೆ ರಚಿಸಲಾಗಿದೆ.
* ಅಂಕ ನಮೂದಿಸುವಾಗ ಕೆಲವು ಅಭ್ಯರ್ಥಿಗಳಿಗೆ ಗೊಂದಲಗಳು ಉಂಟಾಗಿದ್ದರಿಂದ, ಅವರು ನಮೂದಿಸಿರುವ ಅಂಕಗಳು ಸರಿಯಾಗಿ ಇರದೇ ಇರಬಹುದು.
* ನಾವು ಪ್ರಕಟಿಸಿದ ಅಂಕಗಳು ಕೇವಲ KPSCVaani ಯು ಅಭಿಪ್ರಾಯವಾಗಿದ್ದು, ಇವು ಅಂತಿಮವಾಗಿ KSRTC ಯು ಪ್ರಕಟಿಸುವ ಕಟ್-ಆಫ್ ಅಂಕಗಳೊಂದಿಗೆ ವ್ಯತ್ಯಾಸವಾಗಬಹುದು.
* ನಿರೀಕ್ಷಿಸಿದ ಕಟ್-ಆಫ್ ಅಂಕಗಳನ್ನು ಪಡೆದಿಲ್ಲವೆಂದು ಅಭ್ಯರ್ಥಿಗಳು ಯಾವುದೇ ಬೇಸರ ಪಡುವ ಅಗತ್ಯವಿಲ್ಲ ಇದು ಕೇವಲ ತಾತ್ಕಾಲಿಕವಾಗಿದ್ದು ಅಂತಿಮ ಅಂಕಗಳೊಂದಿಗೆ ಹೋಲಿಸಿದಾಗ ತಮ್ಮ ಅಂಕಗಳು ಕೂಡ ಪರಿಗಣನೆಗೆ ಬರಬಹುದು.
* ನಿಮ್ಮ ಅಭಿಪ್ರಾಯಗಳನ್ನು kpscvaani@gmail.com ಗೆ ಈ-ಮೇಲ್ ಮಾಡುವ ಮೂಲಕ ತಿಳಿಸಿ. ಧನ್ಯವಾದಗಳು
References: * data provided by users
* Previous BMTC and KSRTC cut of scores

KSRTC Cut off marks 2018 recruitment